ಬೆಂಗಳೂರು ನಗರದ ಹೃದಯ ಭಾಗದಲ್ಲಿರುವ ಟೌನ್ ಹಾಲ್ ನಲ್ಲಿ ಶನಿವಾರ ಸಿನಿಮಾ-ಸಾಂಸ್ಕೃತಿಕ ರಸಿಕರ ಕಲರವ..
ಬೆಳಗ್ಗೆಯಿಂದ ಹಿರಿಯ ಪತ್ರಕರ್ತ ಡಿ.ಲಿಂಗರಾಜು ನೇತೃತ್ವದ ‘ನೇಕಾರವಾಣಿ’ ಪತ್ರಿಕೆ 15 ವರ್ಷದ ಕಾರ್ಯಕ್ರಮ. ಸಂಜೆ ‘ಡೇವಿಡ್’ ಸಿನಿಮಾ ಹಾಡು, ಟ್ರೈಲರ್ ಬಿಡುಗಡೆ.
ಇವೆರಡಕ್ಕೂ ಕೊಂಡಿಯಾಗಿದ್ದವರು ಉದ್ಯಮಿ ಜಿ.ಧನರಾಜ್ ಬಾಬು.
ಹೌದು ಹೊಸಬರ ಡೇವಿಡ್ ಚಿತ್ರಕ್ಕೆ ಧನರಾಜ್ ಬಾಬು ಬಂಡೆಯಂತೆ ನಿಂತು ಸಹಕರಿಸಿದ್ದಾರೆ. ಮುಖ್ಯ ಪಾತ್ರದಲ್ಲಿ ನಟಿಸಿ ಭಾರ್ಗವ್ ಯೋಗಾಂಬರ್ ಜೊತೆ ನಿರ್ದೇಶನ ಕೂಡ ಮಾಡಿದವರು ಶ್ರೇಯಸ್ ಚಿಂಗಾ..
ಹಾಡು ಡ್ಯಾನ್ಸ್ ಮೂಲಕ ಎಂಟ್ರಿಕೊಟ್ಟು ತಮ್ಮ ಪರಿಶ್ರಮ ಏನೆಂಬುದನ್ನು ವೇದಿಕೆಯಲ್ಲೇ ಸಾಬೀತು ಪಡಿಸಿದರು ಶ್ರೇಯಸ್ ಚಿಂಗಾ. ಈ ಚಿತ್ರವನ್ನು ಪ್ರಸಾದ್ ರುದ್ರಮುನಿ ನೀರಘಂಟಿ ನಿರ್ಮಿಸಿದ್ದು, ಲವ್ ಪ್ರಾಣ್ ಮೆಹತಾ ಸಂಗೀತವಿದೆ. ಸ್ಟೀವ್ ರೈಸ್, ದೇವರಾಜ್ ನಾಯ್ಡು ಛಾಯಾಗ್ರಾಹಕರು.
ಆಲ್ ಓಕೆ ರಚನೆಯ ಹಾಡು ಸಂಚಿತ್ ಹೆಗಡೆ ಹಾಡಿದ್ದಾರೆ. ಹಾಡಿ ಮತ್ತು ಟ್ರೈಲರ್ ಕಾರ್ಯಕ್ರದಲ್ಲಿ ಗಮನ ಸೆಳೆದವು. ಕಾನ್ ಚಿತ್ರೋತ್ಸವದಲ್ಲಿ ಪಾಲ್ಗೊಂಡ ಕ್ಷಣಗಳನ್ನು ಮೆಲುಕು ಹಾಕಿದರು ಶ್ರೇಯಸ್ ಚಿಂಗಾ.
ಶ್ರೇಯಸ್ ಜೊತೆಗೆ ಸಾರಾ ಹರೀಶ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಅವಿನಾಶ್, ಪ್ರತಾಪ್ ನಾರಾಯಣ್, ರಾಕೇಶ್ ಅಡಿಗ, ಕಾವ್ಯ ಶಾ, ಬುಲೆಟ್ ಪ್ರಕಾಶ್ ಮೊದಲಾದವರ ತಾರಾಬಳಗವಿದೆ ಎಂಬ ಮಾಹಿತಿ ಬಂತು.
ಈ ಚಿತ್ರವನ್ನು ಅರ್ಜುನ್ ನಿಟ್ಟೂರು ರಾಷ್ಟ್ರ ಮಟ್ಟದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಈ ಅರ್ಜುನ್; ನಿಟ್ಟೂರು ಶ್ರೀನಿವಾಸರಾಯರ ಮೊಮ್ಮಗ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿತ್ರಗಳನ್ನು ಪ್ರಚಾರ ಮಾಡುವ ಸಂಸ್ಥೆ ನಮ್ಮದು ಎಂದರು.
ಧನರಾಜ್ ಬಾಬು ಅವರ ಭೂ ವರಾಹ ಟ್ರಸ್ಟ್ ಮೂಲಕ ಮತ್ತೊಂದು ಸಿನಿಮಾ ಸೆಟ್ ಏರಲಿದೆ. ಶ್ರೇಯಸ್ ಮುಖ್ಯಪಾತ್ರದಲ್ಲಿ ಇರುತ್ತಾರೆ ಎಂಬ ಮಾಹಿತಿಗಳು ಬಂದವು.