Snehapriya.com

June 8, 2025

ರವಿಚಂದ್ರನ್ ಜಡ್ಜ್ ಮೆಂಟ್ ಯಶಸ್ವಿ ಏಳನೇ ವಾರ..

Social Share :

ಗುರುರಾಜ್ ಕುಲಕರ್ಣಿ ನಾಡಗೌಡ ನಿರ್ದೇಶನದ ಹಾಗೂ ಜಿ 9 ಕಮ್ಯುನಿಕೇಶನ್ ಮೀಡಿಯಾ ಮತ್ತು ಎಂಟರ್ ಟೈನ್ ಮೆಂಟ್ ನಿರ್ಮಾಣದ ‘ಜಡ್ಜ್ ಮೆಂಟ್’ ಅಮೋಘ ಏಳನೇ ವಾರಕ್ಕೆ ಕಾಲಿಟ್ಟಿದೆ.

ಕ್ರೇಜಿಸ್ಟಾರ್ ವಿ ರವಿಚಂದ್ರನ್ ಮುಖ್ಯ ಪಾತ್ರದಲ್ಲಿ ನಟಿಸಿರುವುದು ಈ ಚಿತ್ರದ ವಿಶೇಷ. ಚಿತ್ರದಲ್ಲಿ ಥ್ರಿಲ್ಲರ್ ಎನಿಸುವ ಸಂಭಾಷಣೆ ಮತ್ತು ವೇಗದ ಗತಿ ಪ್ರೇಕ್ಷಕನಿಗೆ ಅಚ್ಚುಮೆಚ್ಚು.

ಕನ್ನಡದಲ್ಲಿ ಕಥೆಯಾಧಾರಿತ ಚಿತ್ರಗಳು ಯಶಸ್ವಿಯಾಗುತ್ತವೆ ಎಂಬ ಮಾತಿಗೆ ಈ ಚಿತ್ರ ಅತ್ಯುತ್ತಮ ನಿದರ್ಶನ. ಅದ್ದೂರಿ ತಾರಾಬಳಗ ಹೊಂದಿರುವುದು ಚಿತ್ರದ ಮತ್ತೊಂದು ವಿಶೇಷ.

ಈ ಚಿತ್ರವನ್ನು ಪ್ರೇಕ್ಷಕರು ಮುಕ್ತ ಕಂಠದಿಂದ ಶ್ಲಾಘಿಸುತ್ತಿದ್ದಾರೆ. ಬಿಡುಗಡೆಯಾಗಿ ಏಳನೇ ವಾರದಲ್ಲೂ ಕರ್ನಾಟಕದ ಅನೇಕ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿರುವುದು ಅದರ ಹೆಗ್ಗಳಿಕೆ.

ಈ ಚಿತ್ರವನ್ನು ಈಗಲೂ ಪ್ರೇಕ್ಷಕರು ಕುಟುಂಬ ಸಮೇತರಾಗಿ ಬಂದು ನೋಡುತ್ತಿರುವುದು ಖುಷಿಯ ವಿಚಾರ. ಚಿತ್ರವನ್ನು ಯಶಸ್ವಿಗೊಳಿಸಿದ ಚಿತ್ರತಂಡಕ್ಕೆ ಹಾಗೂ ಪ್ರೇಕ್ಷಕರಿಗೆ ನಿರ್ದೇಶಕ ಗುರುರಾಜ್ ಕುಲಕರ್ಣಿ ಧನ್ಯವಾದ ಅರ್ಪಿಸಿದ್ದಾರೆ.

ಕ್ರೇಜಿಸ್ಟಾರ್ ರವಿಚಂದ್ರನ್, ಲಕ್ಷ್ಮೀ ಗೋಪಾಲಸ್ವಾಮಿ, ದಿಗಂತ್, ಧನ್ಯ ರಾಮಕುಮಾರ್, ಮೇಘನಾ ಗಾಂವ್ಕರ್, ರವಿಶಂಕರ್ ಗೌಡ, ರಾಜೇಂದ್ರ ಕಾರಂತ್, ಕೃಷ್ಣ ಹೆಬ್ಬಾಳೆ, ರೇಖಾ ಕೂಡ್ಲಗಿ, ನವಿಲ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಅನೂಪ್ ಸೀಳಿನ್ ಸಂಗೀತ, ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ ಹಾಗೂ ಕೆಂಪರಾಜ್ ಅವರ ಸಂಕಲನವಿರುವ ಈ ಚಿತ್ರವನ್ನು ಗುರುರಾಜ್ ಕುಲಕರ್ಣಿ(ನಾಡಗೌಡ), ಶರದ್ ನಾಡಗೌಡ, ವಿಶ್ವನಾಥ್ ಗುಪ್ತ, ರಾಮು ರಾಯಚೂರು, ರಾಜಶೇಖರ ಪಾಟೀಲ್, ಪ್ರತಿಮಾ ಬಿರಾದಾರ್ ನಿರ್ಮಿಸಿದ್ದಾರೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *