ಬಾಲಿವುಡ್ನ ಜನಪ್ರಿಯ ಸಂಗೀತ ನಿರ್ದೇಶಕ ಸಲೀಂ-ಸುಲೇಮಾನ್ ಅವರ ‘ಭೂಮಿ’ ಎಂಬ ಆಲ್ಬಂ ಪ್ರಕೃತಿ ಕುರಿತಾಗಿದ್ದು, ಈ ಗೀತೆಗೆ ಕನ್ನಡದ ಜನಪ್ರಿಯ ಗಾಯಕ ವಿಜಯ ಪ್ರಕಾಶ್ ಧ್ವನಿಯಾಗಿದ್ದಾರೆ.
ಪ್ರಕೃತಿ ಕುರಿತಂತೆ ಪ್ರತಿ ವರ್ಷ ಹೊರ ಬರುವ ‘ಭೂಮಿ’ ಆಲ್ಬಂನಲ್ಲಿ ಸಾಕಷ್ಟು ಜನಪ್ರಿಯ ಗಾಯಕರು ಹಾಡಿದ್ದಾರೆ.
ಈ ಬಾರಿ ‘ಭೂಮಿ 2022’ ಹೆಸರಿನ ಈ ಹಾಡಿಗೆ ವಿಜಯಪ್ರಕಾಶ್ ಮತ್ತು ಸಲೀಮ್ ಮರ್ಚೆಂಟ್ ಧ್ವನಿಯಾಗಿದ್ದಾರೆ.
ಈಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವ ಕೆ. ಸುಧಾಕರ್ ಆಲ್ಬಂ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.