Snehapriya.com

June 8, 2025

ಸಿನಿ ಬಜಾರ್ ಬಣಕಾರ್ ‌ಆ್ಯಪ್

Social Share :

ಸಿನಿಮಾ ಸ್ನೇಹಿ ಆ್ಯಪ್ ಮೂಲಕ ಅತ್ಯಂತ ಕಡಿಮೆ ವೆಚ್ಚದಲ್ಲಿ ಹೊಸ ಹೊಸ ಸಿನಿಮಾ ನೋಡಬಹುದು..

ಸಿನಿ ಬಜಾರ್ ಎಂಬ ಈ ಆ್ಯಪ್ ಹಲವು ಸಂಶೋಧನೆಗಳ ಬಳಿಕ ರೂಪಿಸಲ್ಪಟ್ಟಿದೆ. ಅಂದ ಹಾಗೆ ಇದು ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್ ಅವರ ಕಲ್ಪನೆಯ ಕೂಸು.

ಆನ್ ಲೈನ್ ಪರಿಣಿತ ಭಾಸ್ಕರ್ ವೆಂಕಟೇಶ್ ಜೊತೆಗೂಡಿ ಉಮೇಶ್ ಬಣಕಾರ್ ಹೊಸ ತಂತ್ರಜ್ಞಾನದ ಬೆಸುಗೆಯಲ್ಲಿ ಈ ಆ್ಯಪ್ ರೂಪುಗೊಂಡಿದೆ ಎಂಬುದು ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸಿಕ್ಕಿದ ವಿವರ.

ಈ ಆಪ್ ಮೂಲಕ ಅತ್ಯಂತ ಕಡಿಮೆ ವೆಚ್ಚದಲ್ಲಿ ಮನೆಯಲ್ಲಿಯೇ ಕುಳಿತು ಸಿನಿಮಾ ನೋಡಬಹುದು..
ಈಗಾಗಲೇ ಬಿಡುಗಡೆಯಾಗಿರುವ ಚಿತ್ರಗಳು ಇದರಲ್ಲಿವೆ. ಈ ಆ್ಯಪ್ ಮೂಲಕವೇ ಚಿತ್ರವನ್ನು ಬಿಡುಗಡೆ ಮಾಡಲು ಇಚ್ಛಿಸುವವರು ನಮ್ಮ ತಂಡವನ್ನು ಸಂಪರ್ಕಿಸಬಹುದು‌. ಎಂದರು ಅದರ ರೂವಾರಿ ಭಾಸ್ಕರ್ ವೆಂಕಟೇಶ್.

ಕನ್ನಡ ಚಿತ್ರರಂಗದಲ್ಲಿ ಫೈರಸಿ ಸೇರಿದಂತೆ ಹಲವು ಸಮಸ್ಯೆಗಳಿವೆ. ಅವುಗಳಿಗೆ ದಾರಿ ಹುಡುಕುವ ಪ್ರಯತ್ನದಲ್ಲಿರುವಾಗ ಈ ಹೊಸ ತಂತ್ರಜ್ಞಾನದ ವಿಷಯ ಗಮನ ಸೆಳೆಯಿತು. ಹಾಗಾಗಿ ನಾನು ಭಾಸ್ಕರ್ ವೆಂಕಟೇಶ್ ಅವರ ಜೊತೆ ಕೈ ಜೋಡಿಸಿರುವೆ ಎಂದರು ಉಮೇಶ್ ಬಣಕಾರ್.

ಸುಧಾಕರ್ ಎಂಬುವರು ಬಹಳ ಶ್ರಮಪಟ್ಟು ಈ ಆ್ಯಪ್ ಅಭಿವೃದ್ಧಿ ಪಡಿಸಿದ್ದಾರೆ ಎಂಬ ಮಾಹಿತಿಯನ್ನೂ ನೀಡಿದರು ಬಣಕಾರ್.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ಉಪಾಧ್ಯಕ್ಷ ನಾಗಣ್ಣ, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್, ನಟ ಶ್ರೀನಗರ ಕಿಟ್ಟಿ, ನಿರ್ದೇಶಕರಾದ ರವಿಶ್ರೀವತ್ಸ, ಗಿರಿರಾಜ್ ‘ಸಿನಿ ಬಜಾರ್’ ಹೆಸರಿನ ಓಟಿಟಿ ಹೊಸ ವ್ಯವಸ್ಥೆಗೆ ಶುಭ ಕೋರಿದರು.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *