Snehapriya.com

June 9, 2025

ಪ್ರತಿಷ್ಠಿತ ಚಿತ್ತಾರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಮ್ಯಾ ಪ್ರತ್ಯಕ್ಷ

Social Share :

ಸಿನಿಮಾ ಪತ್ರಿಕೆಯಾಗಿ ಜನಪ್ರಿಯತೆ ಪಡೆದಿರುವ ಚಿತ್ತಾರ, ತನ್ನ 13ನೇ ವಾರ್ಷಿಕೋತ್ಸವದ ಜೊತೆಗೆ ಆಚರಿಸಿಕೊಂಡ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಜನಪ್ರಿಯ ತಾರೆ ಮಾಜಿ ಸಂಸದೆ ರಮ್ಯಾ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಕಳೆದ ಏಪ್ರಿಲ್ 30ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಸಿನಿಮಾ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಭಾಗಿಯಾಗುವುದರ ಮೂಲಕ ಸಮಾರಂಭದ ಮೆರುಗನ್ನು ಹೆಚ್ಚಿಸಿದ್ದರು.

ಕರ್ನಾಟಕ ರತ್ನ, ಪವರ್ ಸ್ಟಾರ್ ಡಾ. ಪುನೀತ್ ರಾಜಕುಮಾರ್ ಅವರ ಸ್ಮರಣೆಯಲ್ಲಿ ಅವರಿಗೇ ಕಾರ್ಯಕ್ರಮ ಅರ್ಪಿಸಲಾಗಿತ್ತು. ಚಿತ್ತಾರದ ಮುಖ್ಯಸ್ಥ ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮ ಅತ್ಯಂತ ಸ್ಮರಣೀಯವಾಗಿತ್ತು.

ಚಿತ್ತಾರ ಜೀವಮಾನ ಸಾಧನೆ ಪ್ರಶಸ್ತಿ, ಚಿತ್ತಾರ ಐಕಾನ್ ಪ್ರಶಸ್ತಿ ಹಾಗೂ ಚಿತ್ತಾರ ರೈಸಿಂಗ್ ಸ್ಟಾರ್ ಅವಾರ್ಡ್ಸ್ ಹೀಗೆ ಪ್ರಶಸ್ತಿಗಳ ವಿಭಾಗಗಳಿದ್ದವು.

ಡಾ.ಭಾರತಿ ವಿಷ್ಣುವರ್ಧನ್, ಸುಪ್ರಿಂ ಹೀರೊ ಶಶಿಕುಮಾರ್, ಕೋಟಿ ನಿರ್ಮಾಪಕ ರಾಮು (ಶ್ರೀಮತಿ ಮಾಲಾಶ್ರಿಯವರು ಸ್ವೀಕರಿಸಿದರು),
ಸಾಹಸ ನಿರ್ದೇಶಕ ರಾಮ ಶೆಟ್ಟಿ,
ಶ್ರೀಮತಿ ಮಂಜುಳಾ ಗುರುರಾಜ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಯಿತು.

ಮೋಹಕ ತಾರೆ ರಮ್ಯಾ ಅವರಿಗೆ ಚಿತ್ತಾರ ಸ್ಟಾರ್ ಐಕಾನ್ ಪ್ರಶಸ್ತಿ ನೀಡಲಾಯಿತು. ಇವರ ಜೊತೆಗೆ ನಿರ್ಮಾಪಕ ರಮೇಶ್ ರೆಡ್ಡಿ, ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್, ಜೇಮ್ಸ್ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಹಾಗೂ ಇತರರಿಗೆ..

ಚಿತ್ತಾರ ಸ್ಟಾರ್ಸ್ ಪ್ರಶಸ್ತಿಯನ್ನು ಲವ್ಲಿಸ್ಟಾರ್ ಪ್ರೇಮ್, ಪ್ರಿಯಾಂಕ ಉಪೇಂದ್ರ, ಡಾರ್ಲಿಂಗ್ ಕೃಷ್ಣ, ಶ್ರೀಧರ್ ವಿ.ಸಂಭ್ರಮ್, ಚೇತನ್ ಕುಮಾರ್, ಸಾಧು ಕೋಕಿಲ, ಎ.ಹರ್ಷ, ಕೆ.ಪಿ.ಶ್ರೀಕಾಂತ್, ವಿ.ಹರಿಕೃಷ್ಣ, ಸಿಂಪಲ್ ಸುನಿ ಮೊದಲಾದವರಿಗೆ..

ಚಿತ್ತಾರ ರೈಸಿಂಗ್ ಸ್ಟಾರ್ ಪ್ರಶಸ್ತಿಯನ್ನು ಮಿಲನಾ ನಾಗರಾಜ್, ಚಂದನ್ ಶೆಟ್ಟಿ, ಅಮೃತಾ ಅಯ್ಯಂಗಾರ್ ಮತ್ತಿತರಿಗೆ ನೀಡಲಾಯಿತು.

ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ, ಪದ್ಮಶ್ರೀ ಪರಸ್ಕೃತ ಸಾಹಿತಿ ಡಾ.ದೊಡ್ಡರಂಗೇಗೌಡ ಹಾಗೂ ಇತರರು ಅತಿಥಿಗಳಾಗಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *