Snehapriya.com

June 8, 2025

ನವರಸನ್ ಚಂದನ್ ಶೆಟ್ಟಿ; ಹೊಸ ಟ್ರೆಂಡಿಂಗ್ ಹಾಡು

Social Share :

‘ಟ್ರೆಂಡಿಂಗಲ್ ಬರ್ಬೇಕಂದ್ರೆ ಏನ್ ಮಾಡ್ಬೇಕು..’

ಇದು ಭಾನುವಾರ ಬಿಡುಗಡೆಯಾದ ‘ಸೂತ್ರಧಾರಿ’ ಚಿತ್ರದ ಹೊಸ ಹಾಡು..

ನಿರ್ಮಾಪಕ ಹಾಗೂ ಅನೇಕ ಸಿನಿಮಾಗಳ ಇವೆಂಟ್ ಗಳ ಸೂತ್ರಧಾರಿ ಎಂದೇ ಹೆಸರಾದ ನವರಸನ್ ನಿರ್ಮಾಣದ ಹಾಗೂ ಚಂದನ್ ಶೆಟ್ಟಿ ಅಭಿನಯದ ಚಿತ್ರದ ಹಾಡು ಇದು.

ಕನ್ನಡದ ರಾಪ್ ಶೈಲಿಯ ಗಾಯಕ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಮುಖ್ಯ ಪಾತ್ರದಲ್ಲಿರುವ ‘ಸೂತ್ರಧಾರಿ’ ಚಿತ್ರದ ‘ಡ್ಯಾಶ್’ ಸಾಂಗ್ ಈಗಾಗಲೇ ಹದಿನೇಳು ಮಿಲಿಯನ್ ವೀಕ್ಷಣೆ ಸಾಧಿಸಿದೆ ಎಂಬುದು ಚಿತ್ರತಂಡಕ್ಕೆ ಹೆಮ್ಮೆ.

ಈಗ ವಿಜಯ್ ಈಶ್ವರ್ ಬರೆದಿರುವ ‘ಟ್ರೆಂಡಿಂಗಲ್ ಬರ್ಬೇಕಂದ್ರೆ ಏನ್ ಮಾಡ್ಬೇಕು’ ಎಂಬ ಹಾಡು ಇತ್ತೀಚೆಗೆ ಎ2 ಮ್ಯೂಜಿಕ್ ಮೂಲಕ ಬಿಡುಗಡೆಗೊಂಡಿದೆ. ಚಂದನ್ ಶೆಟ್ಟಿ ಈ ಹಾಡಿಗೆ ಸಂಗೀತ ನೀಡಿ, ಹಾಡಿದ್ದಾರೆ.

ಮೋಹನ್ ಮಾಸ್ಟರ್ ನೃತ್ಯ ನಿರ್ದೇಶಿಸಿರುವ ಈ ಹಾಡಿಗೆ ಚಂದನ್ ಶೆಟ್ಟಿ ಹಾಗೂ ನಟಿ ಅಪೂರ್ವ ಹೆಜ್ಜೆ ಹಾಕಿದ್ದಾರೆ. ಈ ಹಾಡಿನ ಬಗ್ಗೆ ಚಿತ್ರತಂಡ ಮಾಹಿತಿ ನೀಡಿತು.

ಈ ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಒಂದು ಮಿಲಿಯನ್ ವೀಕ್ಷಣೆಯಾಗಿದೆ. ಇಂತಹ ಜನಪ್ರಿಯ ಹಾಡು ಬರೆದುಕೊಟ್ಟ ವಿಜಯ್ ಈಶ್ವರ್ ಅವರಿಗೆ, ಸಂಗೀತ ನೀಡಿ, ಹಾಡಿ, ಅಭಿನಯಿಸಿರುವ ಚಂದನ್ ಶೆಟ್ಟಿ ಸೇರಿದಂತೆ ಇಡೀ ತಂಡಕ್ಕೆ ಧನ್ಯವಾದ ಎಂದರು ನಿರ್ಮಾಪಕ ನವರಸನ್.

ಚಿತ್ರದ ಸಂಪೂರ್ಣ ವಿವರವನ್ನು ನಿರ್ದೇಶಕ ಕಿರಣ್ ಕುಮಾರ್ ನೀಡಿದರು. ಚಿತ್ರದ ತಾರಾ ಬಳಗದಲ್ಲಿರುವ ಅಪೂರ್ವ, ಪ್ರಶಾಂತ್ ನಟನ, ಗಿರೀಶ್, ಗಣೇಶ್ ನಾರಾಯಣ್ ಪಾತ್ರಗಳ ವಿವರ ನೀಡಿದರು.

ನಿವೇದಿತಾ ಚಂದನ್ ಶೆಟ್ಟಿ, ನಿರ್ಮಾಪಕರಾದ ಸಂಜಯ್ ಗೌಡ, ಚೇತನ್ ಗೌಡ, ರಾಜೇಶ್, ಗೋವಿಂದರಾಜು ಹಾಗೂ ನಿರ್ದೇಶಕ ಮಹೇಶ್ ಕುಮಾರ್ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *