Snehapriya.com

June 9, 2025

ಫೈಟರ್-ರಾಜಮಾರ್ತಾಂಡ ಇದು ದರ್ಶನ್ ವಾರ..

Social Share :


ಕನ್ನಡದ ದೊಡ್ಡ ದೊಡ್ಡ ಚಿತ್ರಗಳು ಬಿಡುಗಡೆ ಕಾಣುವುದರಿಂದ ಉದ್ಯಮ ಚೇತರಿಸಿಕೊಳ್ಳುತ್ತದೆ ಮತ್ತು ಬೆಳೆಯುತ್ತದೆ..

ಕನ್ನಡದ ಮಟ್ಟಿಗೆ ಹೇಳುವುದಾದರೆ ಮೊದಲ ಸಾಲಿನಲ್ಲಿರುವ ನಟರ ಚಿತ್ರಗಳು ಅಕ್ಷರಶಃ ಕಾಣೆಯಾಗಿವೆ ಅಥವಾ ತಟಸ್ಥವಾಗಿವೆ. ಇದನ್ನು ಕಾರಣ ಮುಂದಿನ ದಿನಗಳಲ್ಲಿ ಸಿಗಬಹುದು.

ಆದರೆ ಮಧ್ಯಮ ಕ್ರಮಾಂಕದ ಸ್ಟಾರ್ ನಟರ ಚಿತ್ರಗಳು ಅಲ್ಲಲ್ಲಿ ಬಿಡುಗಡೆ ಕಾಣುತ್ತವೆ. ಕಳೆದ ವಾರ ಗೋಲ್ಡನ್ ಸ್ಟಾರ್ ಗಣೇಶ್ ಅವರ ‘ಬಾನ ದಾರಿಯಲ್ಲಿ’ ಬಿಡುಗಡೆ ಕಂಡಿತ್ತು.

ಈ ವಾರ ಡಬ್ಬಲ್ ಧಮಾಕ. ಅಚ್ಚರಿಯ ವಿಷಯವೆಂದರೆ ಎರಡೂ ಚಿತ್ರಗಳಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಆಶೀರ್ವಾದ ಮತ್ತು ಬೆಂಬಲ, ಪ್ರೋತ್ಸಾಹ ಎಲ್ಲವೂ ಇದೆ.

ಮೊದಲನೇಯದು ‘ಫೈಟರ್’. ಈ ಚಿತ್ರದ ಮುಖ್ಯ ಪಾತ್ರದಲ್ಲಿರುವುದು ಮರಿ ಟೈಗರ್ ಖ್ಯಾತಿಯ ವಿನೋದ್ ಪ್ರಭಾಕರ್. ದರ್ಶನ್ ಅವರ ಅತ್ಯಾಪ್ತ ವಲಯದಲ್ಲಿ ಗುರುತಿಸಿಕೊಂಡವರು. ಹಾಗಾಗಿ ಚಿತ್ರದ ಮುಹೂರ್ತದಿಂದ ಇಲ್ಲಿಯವರೆಗೆ ಚಿತ್ರವನ್ನು ಪ್ರೋತ್ಸಾಹಿಸಿ ಈ ಚಿತ್ರವನ್ನು ಕೈ ಹಿಡಿಯುವಂತೆ ಅಭಿಮಾನಿಗಳಿಗೆ ಕರೆ ಕೊಟ್ಟಿದ್ದಾರೆ.

ಅಲ್ಲದೆ ಸೋಮಶೇಖರ್ ಅವರು ಅದ್ದೂರಿಯಾಗಿ ನಿರ್ಮಿಸಿರುವ ಹಾಗೂ ನೂತನ್ ಉಮೇಶ್ ನಿರ್ದೇಶನದ ಈ ಚಿತ್ರದಲ್ಲಿ ಬಹಳವೇ ವಿಶೇಷಗಳಿವೆ. ಗುರುಕಿರಣ್ ಸಂಗೀತ, ಕವಿರಾಜ್ ಸಾಹಿತ್ಯ, ಪಾವನಾ ಮತ್ತು ಲೇಖಾಚಂದ್ರ ಅವರಂತಹ ನಟಿಯರು ಚಿತ್ರದ ಬಗ್ಗೆ ಆಸಕ್ತಿ ಹೆಚ್ಚಲು ಬೇಕಾದಷ್ಟು ಕಾರಣಗಳಿವೆ.

ಇನ್ನು ‘ರಾಜ ಮಾರ್ತಾಂಡ’ ಚಿತ್ರವು ದಿವಂಗತ ಚಿರಂಜೀವಿ ಸರ್ಜಾ ಅವರ ಕೊನೆಯ ಚಿತ್ರ. ಸಾಕಷ್ಟು ಸಮಯದಿಂದ ಬಿಡುಗಡೆಗೆ ಕಾತರಿಸಿ ಈಗ ಪ್ರೇಕ್ಷಕರ ಎದುರು ಬಂದಿದೆ. ಈ ಚಿತ್ರವನ್ನು ದರ್ಶನ್ ಅವರೇ ಅರ್ಪಣೆ ಮಾಡಿದ್ದಾರೆ. ಅಲ್ಲದೆ ನಿರ್ಮಾಪಕ ಮೈಸೂರಿನ ಶಿವಕುಮಾರ್ ಅವರು ದರ್ಶನ್ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು.

ಚಿರು ಅವರ ಮಹತ್ವಾಕಾಂಕ್ಷೆಯ ಈ ಚಿತ್ರವು ಅವರ ಮೊದಲ ಚಿತ್ರ ಎಂದು ಭಾವಿಸಿರಿ‌ ಎಂದು ಈಚೆಗೆ ಮೇಘನಾರಾಜ್ ಹೇಳಿದ್ದರು. ಸಾಹಿತಿ ರಾಮ್ ನಾರಾಯಣ್ ನಿರ್ದೇಶನದ ಚಿತ್ರದಲ್ಲಿ ಬಹಳಷ್ಟು ವಿಶೇಷಗಳಿವೆ ಎಂದು ಚಿತ್ರತಂಡ ಹೇಳಿಕೊಂಡಿತ್ತು.

ಈ ಎರಡೂ ಚಿತ್ರಗಳಿಗೆ ಪ್ರೋತ್ಸಾಹ ನೀಡಿ ಗೆಲುವಿನ ಹಂಬಲ ಹೊಂದಿರುವುದಾಗಿ ದರ್ಶನ್ ಹೇಳಿಕೊಂಡಿದ್ದಾರೆ. ಹಾಗಾಗಿ ಇದು ದರ್ಶನ್ ವಾರ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *