Snehapriya.com

June 8, 2025

ಅನಂತ್ ನಾಗ್ @ 50 ಮತ್ತು ತಿಮ್ಮಯ್ಯ & ತಿಮ್ಮಯ್ಯ

Social Share :

ಕನ್ನಡದ ಸಹಜ ನಟ ಎಂದೇ ಕರೆಸಿಕೊಳ್ಳುವ ‘ಸುಂದರಾಂಗ ಜಾಣ’ ಅನಂತ್ ನಾಗ್ ಚಿತ್ರರಂಗಕ್ಕೆ ಬಂದು 50 ವರ್ಷಗಳಾದವು..

ಇದೊಂದು ಸಂಭ್ರಮದ ವಿಷಯ. ಅನಂತ್ ನಾಗ್ ಈಗಲೂ ಬೇಡಿಕೆಯ ಕಲಾವಿದರಾಗಿದ್ದಾರೆ ಎಂಬುದು ಹೆಮ್ಮೆಯ ವಿಷಯ.

ನಾಯಕ ನಟ ಇರಲಿ; ಪೋಷಕ ಪಾತ್ರವೇ ಆಗಲಿ ಪಾತ್ರದಲ್ಲಿ ದೊಡ್ಡತನ ಮತ್ತು ಹೆಗ್ಗಳಿಕೆ ಕಾಯ್ದುಕೊಂಡವರು ಅನಂತ್ ನಾಗ್ ಜೊತೆಗೆ ಅವರು ನಿರ್ದೇಶಕರ ನಟ.

ಯಾವುದೇ ಪಾತ್ರವಿರಲಿ ಅದಕ್ಕೆ ಜೀವ ತುಂಬುವ ಅದ್ವಿತೀಯ ನಟ ಅನಂತ್ ನಾಗ್. ಈಗ ಅವರು ಮಾಡಿರುವ ಪಾತ್ರ ವಿಶಿಷ್ಟ ವಿಭಿನ್ನ..

ಅದು ತಿಮ್ಮಯ್ಯ & ತಿಮ್ಮಯ್ಯ..!

ತಾತ ಮೊಮ್ಮಗನ ಜುಗಲ್ ಬಂದಿ. ತಾತನಾಗಿ ಅನಂತ್ ನಾಗ್ ಅವರಿದ್ದರೆ, ಮೊಮ್ಮಗನಾಗಿ ದಿಗಂತ್ ಇದ್ದಾರೆ. ಒಬ್ಬ ಹಠಮಾರಿ ಮುದುಕ. ತನ್ನದೇ ನಡೆಯಬೇಕೆಂಬ ಮಹತ್ವಾಕಾಂಕ್ಷೆ ಉಳ್ಳವನು.. ವಾಸ್ತವದಲ್ಲಿ ಇಂತಹ ವ್ಯಕ್ತಿಯನ್ನೇ ನಾನು ನೋಡಿಲ್ಲ ಎಂದರು ಅನಂತ್ ನಾಗ್.

ಅದು ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ. ಕೊಂಚ ಆರಾಮವಾಗಿಯೇ ಮಾತನಾಡಿದ ಅವರು, ಚಿತ್ರರಂಗಕ್ಕೆ ಬಂದು 50 ವರ್ಷಗಳಾದವು. ಅನೇಕ ಚಿತ್ರಗಳಲ್ಲಿ ನನಗೆ ವಿಭಿನ್ನ ಪಾತ್ರಗಳೇ ಸಿಕ್ಕಿವೆ. ಈ ಚಿತ್ರದ ಪಾತ್ರ ನನಗೆ ಹೆಚ್ಚು ಖುಷಿ ಕೊಟ್ಟಿದೆ ಮತ್ತು ತೃಪ್ತಿಯನ್ನು ನೀಡಿದೆ ಎಂದರು.

ನಾನು ಈ ರೀತಿ ಅಹಂ ಇಟ್ಟುಕೊಂಡು ಬದುಕಿಲ್ಲ; ಆದರೆ ಪಾತ್ರದಲ್ಲಿ ಆ ರೀತಿಯೇ ಬದುಕುವ ಒಂದು ಅವಕಾಶ ಬಂದಿದ್ದು ಮಾತ್ರ ಹೆಚ್ಚು ಖುಷಿ ಕೊಟ್ಟಿದೆ ಎಂದು ಹೇಳುತ್ತಾ ಹೋದರು ಅನಂತ್ ನಾಗ್.

ಅಂದ ಹಾಗೆ ಮುಂದಿನ ವಾರ ಅಂದರೆ ಡಿಸೆಂಬರ್ 2 ರಂದು ಚಿತ್ರವು ಬಿಡುಗಡೆ ಕಾಣುತ್ತಿದೆ. ನಿರ್ಮಾಪಕ ನಿರ್ದೇಶಕ ಎಲ್ಲರೂ ಕನ್ನಡಿಗರಾದರೂ ಮುಂಬೈನ ಮೂಲದವರು.

ನಿರ್ಮಾಪಕ ರಾಜೇಶ್ ಹಾಗೂ ನಿರ್ದೇಶಕ ಸಂಜಯ್ ಶರ್ಮ ಚಿತ್ರದ ಬಗ್ಗೆ ಹೆಚ್ಚಿನ ವಿವರಗಳನ್ನು ಕೊಟ್ಟರು.

 

ಮೊಮ್ಮಗನ ಪಾತ್ರ ಮಾಡಿರುವ ದಿಗಂತ್ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರೂ ಸಮಾರಂಭ ದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಚಿತ್ರದಲ್ಲಿ ನಟಿಸಿರುವ ಐದ್ರೀಂತಾ ರೇ,
ಶುಭ್ರ ಅಯ್ಯಪ್ಪ, ಪ್ರಕಾಶ್ ತುಂಬಿನಾಡ್ ಹಾಗೂ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಮೊದಲಾದವರು ಹಾಜರಿದ್ದರು.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *