Snehapriya.com

June 6, 2025

ಭೂಗತ ಜಗತ್ತಿನ ಡಾನ್ ಜಯರಾಜ್ ಅಪ್ಪನ ಕಥೆಗೆ ಮಗ ಅಜಿತ್ ಹೀರೋ

Social Share :

*ಜಾಂಟಿ s/o ಜಯರಾಜ್ *

80ರ ದಶಕದಲ್ಲಿ ಭೂಗತ ಲೋಕವನ್ನಾಳಿದ ಕುಖ್ಯಾತರಲ್ಲಿ ದಂತಕಥೆಯಾದ ಜಯರಾಜ್ ಬಗೆಗಿನ ಕಥೆಗಳು ಸಿನಿಮಾಗಳ ಮೂಲಕ ಮತ್ತೆ ಮತ್ತೆ ಮೈದಳೆಯುತ್ತಲೇ ಇವೆ.

ಇದೀಗ ಸೂಗೂರ್ ಕುಮಾರ್ ನಿರ್ಮಾಣದಲ್ಲಿ ಮೂಡಿ ಬಂದಿರುವ
‘ಜಾಂಟಿ s/o ಜಯರಾಜ್’ ಚಿತ್ರವು ಬಿಡುಗಡೆಗೆ ಸಜ್ಜುಗೊಂಡಿರುವುದೇ ವಿಶೇಷ.

ಆನಂದ್ ರಾಜ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದ ಮುಖ್ಯ ಪಾತ್ರದಲ್ಲಿರುವುದು ಜಯರಾಜ್ ಅವರ ಪುತ್ರ ಅಜಿತ್ ಜಯರಾಜ್.

ಈ ಹಿಂದೆ ‘ಟೈಟಲ್ ಬೇಕಾ’ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದ ಆನಂದ್ ರಾಜ್ ಈಗ ಜಯರಾಜ್ ಮರಣ ನಂತರ ಏನಾಗುತ್ತದೆ ಎಂಬುದರ ಮೇಲೆ ಕಥೆ ಹೆಣೆದಿದ್ದಾರೆ. ಜಯರಾಜ್ ಅವರ ಪುತ್ರ ಅಜಿತ್ ಜಯರಾಜ್ ಎರಡು ಶೆಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ದೇಹವನ್ನು ಹುರಿಗೊಳಿಸಿಕೊಂಡ ಅಜಿತ್ ವಿಭಿನ್ನ ಲುಕ್ ನಲ್ಲಿ ಗಮನ ಸೆಳೆಯುವುದೇ ವಿಶೇಷ.

ಚಿತ್ರದ ಟೀಸರ್ ಬಿಡುಗಡೆ ಮಾಡಿ ಶುಭ ಹಾರೈಸಲು ವಿನೋದ್ ಪ್ರಭಾಕರ್ ಹಾಗೂ ಶ್ರೀನಗರ ಕಿಟ್ಟಿ ಆಗಮಿಸಿದ್ದರು.

ತಂದೆಯವರ ಪಾತ್ರ ನಿರ್ವಹಿಸುವಾಗ ಸಾಕಷ್ಟು ಹೆದರಿಕೊಂಡಿದ್ದೆ. ನಿರ್ದೇಶಕರು ಧೈರ್ಯ ತುಂಬಿ ಆ ಪಾತ್ರ ಚೆನ್ನಾಗಿ ಮೂಡಿ ಬರುವಂತೆ ಮಾಡಿದರು ಎಂಬ ವಿವರ ಕೊಟ್ಟರು ಅಜಿತ್ ಜಯರಾಜ್.

ಅಜಿತ್ ಅವರ ಎದುರು ನಟಿಸಿರುವ ನಿವಿಷ್ಕಾ ಪಾಟೀಲ್, ಹಿಂದೆ ಶ್ರುತಿ ಪಾಟೀಲ್ ಆಗಿದ್ದೆ. ಮತ್ತು ಈಗ ಹೆಸರು ಬದಲಿಸಿಕೊಂಡಿರುವೆ. ನನ್ನ ಪಾತ್ರ ಉತ್ತಮವಾಗಿದೆ ಎಂಬುದೇ ಖುಷಿ ಎಂದರು.

ಉತ್ತರ ಕರ್ನಾಟಕ ಮೂಲಕ ಸೋನು ಪಾಟೀಲ್ ಖಡಕ್ ಜವಾರಿ ಭಾಷೆಯಲ್ಲಿ ಮಾತನಾಡಿ ನೆರೆದಿದ್ದವರ ಮೆಚ್ಚುಗೆ ಪಡೆದರು.

ಸಂಗೀತ ನೀಡಿರುವ ವಿಜೇತ ಮಂಜಯ್ಯ, ಹಿನ್ನೆಲೆ ಸಂಗೀತ ನೀಡಿರುವ ಅಲೆಕ್ಸಾ, ನಟ ಸಚ್ಚಿನ್ ಪುರೋಹಿತ್, ಗೀತ ಸಾಹಿತಿ ಮೂರ್ತಿ ಮಾತನಾಡಿದರು.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *