ಆ ದಿನಗಳು ರೀತಿಯ ಕ್ಲಾಸಿಕ್ ಚಿತ್ರಗಳಿಗೆ ಹೆಸರಾದ ಕೆ.ಎಂ.ಚೈತನ್ಯ ಈಗ ಸದ್ದಿಲ್ಲದೆ ಚಿತ್ರವೊಂದನ್ನು ಮಾಡಿ ಮುಗಿಸಿದ್ದಾರೆ. ಅಬ್ಬಬ್ಬ.. ಇದು ಅವರ ಒಂಬತ್ತನೇ ಚಿತ್ರ..
ನಿಜ ‘ಅಬ್ಬಬ್ಬ’ ಎಂಬುದು ಚಿತ್ರದ ಹೆಸರು. ಮಳಯಾಳಂನ ಮೂಲ. ಆದರೆ ಅದನ್ನು ಅದ್ಭುತ ರೀತಿಯಲ್ಲಿ ಕನ್ನಡಕ್ಕೆ ಕಟ್ಟಿ ಕೊಡುವ ಕೆಲಸ ಮಾಡಿದ್ದಾರೆ ನಿರ್ದೇಶಕ ಕೆ.ಎಂ.ಚೈತನ್ಯ.
ಇಲ್ಲಿ ಅಬ್ಬಬ್ಬ ಎಂಬುದು ಆಶ್ಚರ್ಯ ಸೂಚಕ ಎನಿಸಿದರೂ ನಗುವಿನ ಅಲೆಯಲ್ಲಿ ತೇಲುವಂತೆ ಚಿತ್ರವನ್ನು ಕಟ್ಟಿಕೊಡಲಾಗಿದೆ. ಒಂದು ಪುರಾತನ ಹಾಸ್ಟೆಲ್ ಮತ್ತು ಅದರಲ್ಲಿ ತಂಗಿರುವ ತರಲೇ ಹುಡುಗರೇ ನಗುವಿನ ಸರದಾರರು..
ಹದಿಹರೆಯದ ಹುಡುಗರ ತುಂಟಾಟ, ಚೆಲ್ಲಾಟಗಳೇ ಅವರನ್ನು ಕಷ್ಟಕ್ಕೆ ಸಿಕ್ಕಿಸುತ್ತವೆ.. ಅದು ಏನು ಎಂಬುದು ಸಸ್ಪೆನ್ಸ್ ಚಿತ್ರವನ್ನು ನೋಡಿಯೇ ತಿಳಿದುಕೊಳ್ಳಬೇಕು..
ಹೀಗೆ ಮಾಹಿತಿಗಳನ್ನು ನೀಡುತ್ತಾ ಹೋಯಿತು ಚಿತ್ರತಂಡ. ನಿರ್ದೇಶಕ ಚೈತನ್ಯ, ಮುಖ್ಯ ಪಾತ್ರದಲ್ಲಿರುವ ಲಿಖಿತ್ ಶೆಟ್ಟಿ, ಅಮೃತಾ ಅಯ್ಯಂಗಾರ್ ಹಾಗೂ ಇತರರು ಚಿತ್ರದ ಆಶಯಗಳ ಕುರಿತು ಮಾತನಾಡಿದರು.
ಅಂದ ಹಾಗೆ ಕೇರಳ ಮೂಲದವರಾದ ಆನ್ ಅಗಸ್ಟೇನ್ ಹಾಗೂ ವಿವೇಕ್ ಥಾಮಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಕಳೆದ ಜೂನ್ 15ರ ಬುಧವಾರ ಸ್ಟಾರ್ ಹೊಟೇಲ್ ನಲ್ಲಿ ಹಳೆಯ ಟೇಪ್ ರೆಕಾರ್ಡರ್ ಮೂಲಕ ಒಂದು ಹಾಡು ಹಾಗೂ ಟ್ರೈಲರ್ ಬಿಡುಗಡೆ ಮಾಡಿತು ತಂಡ.
ಆಲ್ ಓಕೆ ಹಾಡಿರುವ ಹಾಗೂ ದೀಪರ್ ಅಲೆಕ್ಸಾಂಡರ್ ಸಂಗೀತ ನೀಡಿರುವ ಹಾಡು ಪಡ್ಡೆಳಿಗೆ ಇಷ್ಟವಾಗಲಿದೆ. ಜುಲೈ ಒಂದರಂದು ಚಿತ್ರವು ಬಿಡುಗಡೆ ಕಾಣಲಿದೆ ಎಂಬ ಮಾಹಿತಿಗಳೂ ಬಂದವು.
ಇದು ಬೇರೆಯದೇ ಜಾನರ್ ಚಿತ್ರ. ಇದಕ್ಕಾಗಿ ಹಳೆಯ ಹಾಸ್ಟೆಲ್ ಬೇಕಾಗಿತ್ತು. ತುಮಕೂರು ಹಾಗೂ ಬೆಂಗಳೂರಿನ ಎರಡು ಹಾಸ್ಟೆಲ್ ಗಳಲ್ಲಿ ಚಿತ್ರೀಕರಣ ನಡೆಸಿ ಮ್ಯಾಚ್ ಮಾಡಾಗಿದೆ ಎಂದರು ಚೈತನ್ಯ.
ಹಿರಿಯ ನಟ ಶರತ್ ಲೋಹಿತಾಶ್ವ ಈ ಚಿತ್ರದಲ್ಲಿ ಚರ್ಚ್ ಫಾದರ್ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರು ಗಂಭೀರ ನಡೆಯ ವ್ಯಕ್ತಿ. ವಿದ್ಯಾರ್ಥಿಗಳ ಹುಡುಗಾಟದಿಂದ ಹೈರಾಣಾಗುವ ಪಾತ್ರ. ನೆಗೆಟಿವ್ ಅಂಶ ಇಲ್ಲ.. ನನ್ನ ಪಾಲಿಗೆ ಇದು ಅತ್ಯುತ್ತಮ ಪಾತ್ರ ಎಂದು ಹೇಳಿಕೊಂಡರು ಶರತ್ ಲೋಹಿತಾಶ್ವ.
ನಾನು ಹಾಸ್ಟೆಲ್ ಜೀವನ ಅನುಭವಿಸಲಿಲ್ಲ; ಆದರೆ ಇಲ್ಲಿ ನಿರ್ದೇಶಕರು ಏಕ್ ದಂ ಹುಡುಗರ ಹಾಸ್ಟೆಲ್ ನಲ್ಲಿ ಬಿಟ್ಟರು. ನನ್ನ ಪಾತ್ರ ನಿಗೂಢವಾಗಿದೆ ಎಂದವರು ನಟಿ ಅಮೃತಾ ಅಯ್ಯಂಗಾರ್. ಚಿತ್ರಕ್ಕೆ
ಮನೋಹರ ಜೋಶಿ ಛಾಯಾಗ್ರಹಣವಿದೆ. ಅಜಯ್ ರಾಜ್, ಧನರಾಜ್ ಹಾಗೂ ತಾಂಡವರಾಮ್ ಮೊದಲಾದವರ ತಾರಾಗಣವಿದೆ.
ಹರಿದಾಸ್ ಕೆ ಜಿ ಎಫ್ ಸಂಕಲನವಿದೆ. ಕೆ ಆರ್ ಜಿ ಸ್ಟುಡಿಯೋಸ್ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ.