Snehapriya.com

November 22, 2024

ವೀರಗಾಸೆ ವಿಜಯ ರಾಘವೇಂದ್ರ ಚಿತ್ರದ ಹೆಸರು ರುದ್ರಾಭಿಷೇಕಂ..

Social Share :

ವೀರಗಾಸೆ ರುದ್ರ ರಮಣೀಯ ಪಾತ್ರದಲ್ಲಿ ಸೈಲೆಂಟ್ ಸ್ಟಾರ್ ವಿಜಯ ರಾಘವೇಂದ್ರ ವಿಜೃಂಭಿಸಲಿದ್ದಾರೆ.

ಚಿತ್ರದ ಹೆಸರು ರುದ್ರಾಭಿಷೇಕಂ..!

ಈಚೆಗೆ ದೇವನಹಳ್ಳಿ ಬಳಿಯ ವಿಜಯಪುರದ ಫಾರಂ ಹೌಸ್ ಒಂದರಲ್ಲಿ ಚಿತ್ರದ ಮುಹೂರ್ತ ಸರಳವಾಗಿ ನೆರವೇರಿದೆ.

ನಾಡಿನ ಸಾಂಸ್ಕೃತಿಕ ಹಾಗೂ ಜಾನಪದ ಶೈಲಿಯ ಕಲೆಗಳ ಆಚರಣೆ ಹಾಗೂ ಮಹತ್ವ ಸಾರುವ ವಿಷಯಗನ್ನು ಒಳಗೊಂಡ ಈ ಚಿತ್ರದಲ್ಲಿ ವೀರಗಾಸೆ ಯುವಕನ ಪಾತ್ರದಲ್ಲಿ ವಿಜಯ ರಾಘವೇಂದ್ರ ಕಾಣಿಸಿಕೊಳ್ಳಲಿದ್ದಾರೆ.

ವೀರಗಾಸೆ ಹಿನ್ನೆಲೆಯಲ್ಲಿ ದೈವತ್ವವನ್ನು ಪ್ರಚುರಪಡಿಸುವ ನಿಟ್ಟಿನಲ್ಲಿ ನಿರ್ದೇಶಕರು ಕಥೆ ಹೆಣೆದಿದ್ದಾರೆ. ಆದರೂ ಇದರಲ್ಲಿ ಸಾಮಾಜಿಕ ನೆಲೆಯೂ ಇರಲಿದೆ ಎಂದರು ವಿಜಯ ರಾಘವೇಂದ್ರ.

ಚಿತ್ರಕ್ಕೆ ಬೇರೆಯದೇ ವಿನ್ಯಾಸವಿದೆ. ವೀರಗಾಸೆ ಸೇರಿದಂತೆ ಹಲವು ಗೆಟ್ ಅಪ್ ಗಳಿವೆ ಜೊತೆಗೆ ಸೊಗಸುಗಾರಿಕೆಯೂ ಇರಲಿದೆ ಎಂದರು.

ಸಾಕಷ್ಟು ವರ್ಷಗಳಿಂದ ಚಿತ್ರರಂಗದಲ್ಲಿ ಪಳಗಿರುವ ವಸಂತ್ ಕುಮಾರ್ ಈ ಚಿತ್ರದ ನಿರ್ದೇಶಕ. ನಾಡಿನ ಜಾನಪದ ಹಿನ್ನೆಲೆ ಇಟ್ಟುಕೊಂಡು ನೂರಾರು ವರ್ಷಗಳ ಇತಿಹಾಸವಿರುವ ಒಂದು ಕಲೆಯನ್ನು ಈ ಚಿತ್ರದ ಮೂಲಕ ಪ್ರಸ್ತುತ ಪಡಿಸಲಾಗುತ್ತಿದೆ. ಕಥೆಯ ಮೂಲ ವೀರಭದ್ರ ದೇವರು ಎಂಬ ವಿವರ ಬಂತು ನಿರ್ದೇಶಕರಿಂದ.

ಮೊದಲ ಹಂತದಲ್ಲಿ ಫಾರಂ ಹೌಸ್ ನಲ್ಲಿಯೇ 15 ದಿನಗಳ ಚಿತ್ರೀಕರಣ ನಡೆಯಲಿದೆ. ನಂತರ ವೀರಭದ್ರ ಸ್ವಾಮಿ ಒಕ್ಕಲಿನ ಸಮುದಾಯ ಹೆಚ್ಚಿಗೆ ಇರುವ ಚಿಕ್ಕತದಮಂಗಲ ಎಂಬ ಊರಿನಲ್ಲಿ ನಡೆಯಲಿದೆ ಎಂಬ ವಿವರ ಬಂತು.

ನಿರ್ದೇಶಕರ ಸ್ನೇಹಿತರಾಗಿರುವ ಜಯರಾಮಣ್ಣ, ಶಿವರಾಮ್, ಚಿದಾನಂದ್, ಹಡಪದ, ರಮೇಶ್, ಮಂಜುನಾಥ್, ಮುನಿಕೃಷ್ಣಪ್ಪ, ರವಿ, ಅಶ್ವಥ್, ಆನಂದ್ ಸೇರಿ ಪ್ಯಾನ್ ಇಂಡಿಯಾ ಕ್ರಿಯೇಶನ್ಸ್ ಬ್ಯಾನರ್ ಮೂಲಕ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಮೈಸೂರು ಮೂಲದ ರಂಗಭೂಮಿ ಕಲಾವಿದೆ ಪ್ರೇರಣಾ, ವಿಜಯ ರಾಘವೇಂದ್ರ ಜೊತೆ ನಟಿಸುತ್ತಿದ್ದಾರೆ. ಬಲ ರಾಜವಾಡಿ ಊರ ಗೌಡನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಿರಿಯ ಸಂಗೀತ ನಿರ್ದೇಶಕ ವಿ. ಮನೋಹರ್ ಚಿತ್ರದ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ ಹಾಗೂ ಮುತ್ತುರಾಜ್ ಛಾಯಾಗ್ರಹಣ ಚಿತ್ರಕ್ಕಿದೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *