Snehapriya.com

June 9, 2025

ಸಂಜು ಚಿತ್ರವಿಮರ್ಶೆ

Social Share :

ರೇಟಿಂಗ್ : 3/5

ನಿರ್ಮಾಣ : ಸಂತೋಷ್ ಡಿ.ಎಂ ಮೈಸೂರು

ನಿರ್ದೇಶನ : ಯತಿರಾಜ್

ಕಾಡುವ ಹೆಣ್ತನದ ಸವಾಲುಗಳು..

ಮಲೆನಾಡು ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಬಸ್ ತಂಗುದಾಣ ಮೊದಲಿಗೆ ಗಮನ ಸೆಳೆಯುತ್ತದೆ. ಅದರ ಸುತ್ತಲೂ ನಡೆಯುವ ವಿದ್ಯಮಾನಗಳು ಪ್ರೇಮದ ವಿವಿಧ ಮಜಲುಗಳು..

ಸಂಜು ಎಂಬ ಸಹೃದಯ ಹುಡುಗ; ಸರಸ್ಪತಿ ಎಂಬ ಅಮಾಯಕ ಹುಡುಗಿ.. ಮೊದಲರ್ಧ ಇಬ್ಬರ ನಡುವಿನ ಮೌನ ಭಾಷೆ..

ಉತ್ತರಾರ್ಧದಲ್ಲಿ ಬಿಚ್ಚಿಕೊಳ್ಳುವ ಇಬ್ಬರ ಕಥೆಯಲ್ಲಿ ಒಂದು ಸಾಮಾನ್ಯ ಪ್ರೇಮಕಥೆ. ಮತ್ತೊಂದು ಹೆಣ್ಣು ಸಾಮಾಜಿಕ ನೆಲೆಯಲ್ಲಿ ಅನುಭವಿಸುವ ಯಾತನಾಮಯ ಕ್ಷಣಗಳ ಅಭಿವ್ಯಕ್ತಿ.

ಬಸ್ ನಿಲ್ದಾಣ ಒಂದು ಕೌತುಕ ನೆಲೆ. ಅದರ ಸುತ್ತ ನಡೆಯುವ ಘಟನಾವಳಿಗಳು ಮಾನವನ ಸಹಜ ನಡೆಯ ವಿರಾಟ ರೂಪಕಗಳು. ಪ್ರೇಮ; ಶೌರ್ಯ; ಮಾನವೀಯತೆ ಹೀಗೆ ಒಂದೊಂದೇ ಬಿಚ್ಚಿಕೊಳ್ಳುವ ಪರಿ ಅನನ್ಯ.

ಸಂಜು ಮತ್ತು ಸರಸ್ವತಿ ಅವರದೇ ಒಂದು ಕಥೆಯಾದರೆ ಟೀ ಮಾರುವ ದಂಪತಿಗಳ ಕಥೆ ಇನ್ನೊಂದು. ಇದರ ಪೈಕಿ ಹೆಚ್ಚು ಕಾಡುವುದು ಸರಸ್ಪತಿ ಎಂಬ ಅಮಾಯಕ ಹೆಣ್ಣಿನ ಕಥೆ.

ಹೆಣ್ಣು ತ್ಯಾಗಮಯಿ ಎಂಬುದು ನಿಜವೇ. ಅಪ್ಪನ ಕ್ರೌರ್ಯದ ನಡುವೆ ನಲುಗಿ ಹೋಗುವ ಸರಸ್ಪತಿ ಪಾತ್ರ ಕೊನೆಯಲ್ಲಿ ಅಳಿದು ಹೋಗುವುದು ವಿಪರ್ಯಾಸ.

ಯತಿರಾಜ್ ಅವರ ಸರಣಿ ಚಿತ್ರಗಳ ಪೈಕಿ ‘ಸಂಜು’ ಪ್ರಕೃತಿ ಒಡನಾಟ ಮತ್ತು ಮನುಷ್ಯರ ತೊಳಲಾಟಗಳ ನೆಲೆಯಲ್ಲಿ ಹೆಚ್ಚು ಆಪ್ತವೆನಿಸುತ್ತದೆ. ಕಥೆಗೆ ಬಜೆಟ್ ನ ಆಸರೆ ಇದ್ದಿದ್ದರೆ ಒಂದಷ್ಟು ವೈಭವದ ನೆಲೆಯನ್ನು ಕಾಣಿಸುತ್ತಿದ್ದರೋ ಏನೋ..

ಮನ್ವಿತ್ (ಸಂಜು) ಹಾಗೂ ಸಾತ್ವಿಕ (ಸರಸ್ಪತಿ) ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಯತಿರಾಜ್ ಹಾಗೂ ಅಪೂರ್ವ ಜೋಡಿ ಇಷ್ಟವಾಗುತ್ತದೆ.

ಇನ್ನುಳಿದಂತೆ ಸುಂದರಶ್ರೀ, ಸಂಗೀತ, ಬಲರಾಜ್ ವಾಡಿ, ಅಪೂರ್ವ, ಬೌ ಬೌ ಜಯರಾಮ್, ಮಹಂತೇಶ್, ಪ್ರಕಾಶ್ ಶೆಣೈ ಮತ್ತು ಕಾತ್ಯಾಯಿನಿ ಮೊದಲಾದವರ ಅಭಿನಯ ಗಮನಾರ್ಹ.

ವಿದ್ಯಾ ನಾಗೇಶ್ ಛಾಯಾಗ್ರಹಣ, ವಿಜಯ್ ಹರಿತ್ಸ ಸಂಗೀತ ಚಿತ್ರಕ್ಕೆ ಪೂರಕ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *