Snehapriya.com

June 7, 2025

ಶರಣ್ ಗೆ ದೆವ್ವ ಹಾಟ್ ಫೇವರಿಟ್ ಹೊಸ ನಾ ನಿನ್ನ ಬಿಡಲಾರೆ ಟೀಸರ್

Social Share :

ಕೆಲವು ಶೀರ್ಷಿಕೆಗಳು ಅತೀವ ಮೋಡಿ ಮಾಡಿರುತ್ತವೆಯೋ ಏನೋ ಬೇರೆ ಬೇರೆ ಸಿನಿಮಾ ತಂಡಗಳು ಆ ಶೀರ್ಷಿಕೆ ಪಡೆಯಲು ತುದಿಗಾಲಲ್ಲಿ ನಿಂತಿರುತ್ತವೆ..

ಸದ್ಯ ‘ನಾ ನಿನ್ನ ಬಿಡಲಾರೆ’ ಎಂಬ ಶೀರ್ಷಿಕೆ ಸ್ಯಾಂಡಲ್ ವುಡ್ ಗೆ ಅತ್ಯಂತ ಪ್ರಿಯ. ಒಂದು ಪ್ರಯತ್ನದಲ್ಲಿ
ಗುಲ್ಬರ್ಗ ಮೂಲದ ಯುವ ಪ್ರತಿಭೆ ಅಂಬಾಲಿ ಭಾರತಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಸಿನಿಮಾಗೆ ಈ ಶೀರ್ಷಿಕೆ ಇಡಲಾಗಿದೆ.

ಈಚೆಗೆ ನಟ ಶರಣ್ ಚಿತ್ರದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಅಷ್ಟೇ ಅಲ್ಲದೆ ಚಿಕ್ಕ ವಯಸ್ಸಿನಿಂದ ಈ ದೆವ್ವದ ಸಿನಿಮಾಗಳೆಂದರೆ ನನಗೆ ಅತ್ಯಂತ ಪ್ರಿಯ ಎಂಬುದನ್ನು ಬಹಿರಂಗಗೊಳಿಸಿದರು ಶರಣ್.

ನವೀನ್ ಜಿ.ಎಸ್ ನಿರ್ದೇಶನದ ಈ ಚಿತ್ರವನ್ನು ಅಂಬಾಲಿ ಭಾರತಿ ಅವರ ತಾಯಿ ಭಾರತಿ ಬಾಳಿ ನಿರ್ಮಾಣ ಮಾಡಿದ್ದಾರೆ. ನಟ ಶರಣ್ ಮಾತನಾಡುವಾಗ ನಿರ್ಮಾಪಕಿ ಭಾರತಿ ರವರ ಶ್ರಮಕ್ಕೆ ತಕ್ಕ ಚಿತ್ರ ಇದಾಗಿದೆ. ಬಹಳ ಸೌಮ್ಯ ಸ್ವಭಾವವಿದ್ದರೂ ಆಸಕ್ತಿ , ಗುರಿ, ಶ್ರಮ ಎಲ್ಲಿರುತ್ತೋ ಅಲ್ಲಿ ಗೆಲುವು ಖಂಡಿತ ಎಂದು ನಿರ್ಮಾಪಕರ ಗುಣಗಳನ್ನು ಕೊಂಡಾಡಿದರು.

ಸಿನಿಮಾ ನಿರ್ಮಾಣದ ಹಲವು ವಿಭಾಗಗಳಲ್ಲಿ ಕೆಲಸ ಮಾಡಿರುವ ನವೀನ್ ನಿರ್ದೇಶನದ ಪ್ರಥಮ ಚಿತ್ರ ಇದಾಗಿದ್ದು, ಈ ಚಿತ್ರಕ್ಕಾಗಿ ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡಿದ್ದಾಗಿ ತಿಳಿಸಿದರು.

ಈ ಚಿತ್ರ ಸೈಕಲಾಜಿಕಲ್, ಹಾರರ್, ಥ್ರಿಲ್ಲರ್ ಹಾಗೂ ವೈದ್ಯಕೀಯ ವಿಷಯಗಳನ್ನು ಒಳಗೊಂಡಿರುವ ಈ ಚಿತ್ರಕ್ಕೆ ಶೀರ್ಷಿಕೆ ಸರಿ ಎನಿಸಿತು ಇಟ್ಟಿದ್ದೇವೆ. ಸದ್ಯ ಸೆನ್ಸಾರ್ ಪ್ರಮಾಣ ಪತ್ರ ಪಡೆದಿರುವ ಚಿತ್ರವು ಬಿಡುಗಡೆಗೆ ಸಿದ್ಧವಿದೆ ಎಂದರು.

‘ನಾ ನಿನ್ನ ಬಿಡಲಾರೆ’ ಅನಂತ್ ನಾಗ್ ಲಕ್ಷ್ಮಿ ಅವರ ಸಾರ್ವಕಾಲಿಕ ದಾಖಲೆಯ ಚಿತ್ರ. ನಮ್ಮ ಈ ಚಿತ್ರಕ್ಕಾಗಿಯೂ ಅನಂತ್ ನಾಗ್ ಸರ್ ಡೇಟ್ ಗಾಗಿ ಹಂಬಲಿಸಿದೆವು ಆದರೆ ಕಾರಣಾಂತರಗಳಿಂದ ಸಿಗಲಿಲ್ಲ ಎಂದರು ನಿರ್ದೇಶಕರು.

ರಂಗಭೂತಿ ಹಿನ್ನೆಲೆ ಇರುವ ನಟಿ ಅಂಬಾಲಿ ಬಾಲಿ ಈ ಚಿತ್ರದ ಮುಖ್ಯ ಪಾತ್ರಧಾರಿ. ಈಗಾಗಲೇ ಹಲವು ಚಿತ್ರಗಳಲ್ಲಿ ನಟಿಸಿದ್ದಾಗಿ ಹೇಳಿಕೊಂಡರು.

ಹಿಂದೆ ಇಸ್ರೋ ಉಪಗ್ರಹ ಕೇಂದ್ರದಲ್ಲಿ ಕೆಲ ಸಮಯ ಕೆಲಸ ಮಾಡಿದ ಬಳಿಕ ಚಿತ್ರರಂಗಕ್ಕೆ ಬಂದೆ. ಈಗ ಅಮ್ಮ , ಚಿಕ್ಕಮ್ಮ ಮತ್ತು ಅಜ್ಜಿ ಹೆಸರುಗಳಿಗೆ ಅನುಗುಣವಾಗಿ ಕೆ.ಯು.ಬಿ ಪ್ರೊಡಕ್ಷನ್ ಬ್ಯಾನರ್ ಮೂಲಕ ಈ ಚಿತ್ರ ನಿರ್ಮಾಣ ಮಾಡಲಾಗಿದೆ ಎಂದರು.

ಅಂಬಾಲಿ ಬಾಲಿ ಅವರ ಜೊತೆ ಮುಖ್ಯ ಪಾತ್ರದಲ್ಲಿ ಪಂಚೇಂದ್ರೇಯ ನಟಿಸಿದ್ದಾರೆ.

ನಟ ಮಾಂತೇಶ್ , ಸೀರುಂಡೆ ರಘು, ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ, ಛಾಯಾಗ್ರಾಹಕ ವೀರೇಶ್, ಸಂಗೀತ ನಿರ್ದೇಶಕ ಎಂ.ಎಸ್. ತ್ಯಾಗರಾಜ್ ಮಾತನಾಡಿದರು.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *