ರೇಟಿಂಗ್ : 3/5
ನಿರ್ಮಾಣ : ದೀಪ್ ಭೀಮಜಿಯಾನಿ ಮತ್ತು ಸುಧಾ ನಂಬಿಯಾರ್
ನಿರ್ದೇಶನ : ಪ್ರತಿಕ್ ಪ್ರದೋಷ್
ವಲಸೆ ಹಕ್ಕಿಗಳ ಬದುಕು ಭವಣೆ
ಉತ್ತರದ ರಾಜ್ಯಗಳು ಅಥವಾ ಈಶಾನ್ಯ ಭಾಗದಿಂದ ಬೆಂಗಳೂರಿಗೆ ಬಂದು ನೆಲೆಸು ವಲಸೆಗಾರರ ಬದುಕು ಅಕ್ಷರಶಃ ನರಕ ಸದೃಶ..
ಹಣವಿಲ್ಲ; ನೆಲೆ ಇಲ್ಲ; ಆದರೂ ಎಲ್ಲೋ ಗೂಡುಗಳಂತಹ ಜಾಗಗಳಲ್ಲಿ ವಾಸಿಸುತ್ತ ಹೊಟೇಲ್ ಹಾಗೂ ರೆಸ್ಟೋರೆಂಟ್ ಗಳಲ್ಲಿ ಕೆಲಸ ಮಾಡುವ ಜನರ ಮನೋಭಾವವೂ ಕೆಲವೊಮ್ಮೆ ವಿಕ್ಷಿಪ್ತ..
ಇಲ್ಲಿನ ಕಥಾ ನಾಯಕ ಆದರ್ಶ ಉದ್ಯಮಿಯಾಗಬೇಕು ಎಂಬ ಹಂಬಲದವನು ಚೈನೀಶ್ ರೆಸ್ಟೋರೆಂಟ್ ತೆಗೆದು ಅದೃಷ್ಟ ಪರೀಕ್ಷೆಗೆ ಒಡ್ಡಿಕೊಳ್ಳುತ್ತಾನೆ. ಬಳಿಕ ಅದು ನ್ಯೂಡಲ್ ಹೌಸ್ ಆಗುತ್ತದೆ..
ಆದರೆ ಅವನ ಅದೃಷ್ಟ ಕೈಕೊಡುವಂತಹ ಘಟನೆಗಳೇ ಹೆಚ್ಚು ನಡೆಯುತ್ತವೆ. ಕ್ಯಾಷ್ ಕೌಂಟರ್ ನಿಂದ ಹಣ ಕಳುವಾಗುತ್ತಿರುತ್ತದೆ. ಅದನ್ನು ಪತ್ತೆ ಹಚ್ಚುವ ಒಳ್ಳೆಯ ಹುಡುಗ ಹೆಣವಾಗುತ್ತಾನೆ..
ರೆಸ್ಟೋರೆಂಟ್ ನಲ್ಲಿ ತಯಾರಾಗುವ ಖಾದ್ಯಗಳು ಈಶಾನ್ಯ ಭಾಗದಲ್ಲಿ ಜನಪ್ರಿಯತೆ ಪಡೆದವು. ಇಲ್ಲಿನ ಜನರಿಗೆ ಅದು ಹೆಚ್ಚು ರುಚಿಸುತ್ತದೆ. ಆದರೆ ಆದರ್ಶ ಮತ್ತು ಅಡುಗೆ ನಿಪುಣ ಹುಡುಗರ ನಡುವಿನ ಸಮನ್ವಯತೆಯ ಕೊರತೆ ಅನೇಕ ತೊಂದರೆಗಳಿಗೆ ಒಡ್ಡುತ್ತದೆ..
ಮುಖ್ಯವಾಗಿ ಬೇರೆ ರಾಜ್ಯಗಳಿಂದ ಅಮಾಯಕರಂತೆ ಬರುವ ಹುಡುಗರ ಜೀವಕ್ಕೆ ಬೆಲೆ ಇಲ್ಲ. ಅಕಸ್ಮಾತ್ ಸಮನ್ವಯತೆ ಏರ್ಪಟ್ಟರೆ ಅಲ್ಲಿ ರಾಜಯೋಗ ಎಂಬುದನ್ನು ಚಿತ್ರವು ಬಿಂಬಿಸುತ್ತದೆ.
ಕೇರಳ ಮೂಲದ ನಿರ್ದೇಶಕ ಪ್ರತಿಕ್ ಪ್ರದೋಷ್ ಸಹಜ ಚಿತ್ರಗಳ ಮಾದರಿಯನ್ನು ಅನುಸರಿಸಿರುವುದರಿಂದ ಕಮರ್ಷಿಯಲ್ ಚಿತ್ರಗಳಿಗೆ ಹೊರತಾದ ಪ್ರಯೋಗ ಎಂಬುದು ಎದ್ದು ಕಾಣುತ್ತದೆ..
ಖಾಬಾ, ಜೀಬಾ, ಅಜೋಯ್ ಮೊದಲಾದ ಹೆಸರಿನ ಹುಡುಗರ ಅಸಹಾಯಕತೆ, ತುಂಟುತನ, ಬೇಜವಾಬ್ದಾರಿತನ, ಹುಂಬತನ ಎಲ್ಲದರ ನೈಜ ಅಭಿವ್ಯಕ್ತಿಯಾಗಿ ಕಾಣುವ ಚಿತ್ರದ ಕೊರತೆ ಲಾಜಿಕ್. ಅದನ್ನು ಮರೆತು ನೋಡಿದರೆ ಚಿತ್ರ ಸಹ್ಯವಾಗಬಹುದು..
ಬಿ.ವಿ.ಶೃಂಗಾ, ರಿನಿ, ನಿತ್ಯಶ್ರೀ, ಬಿಜೌ ತಾಂಜಿಂ, ವಿಕ್ಟರ್ ತೌಡಮ್, ಜಿಂಪಾ ಭುಟಿಯಾ, ಟಾಮ್ಥಿನ್ ಥೋಕ್ಚೋಮ್, ಹಿರಾಕ್ ಸೋನೊವಾಲ್ ಎಲ್ಲರ ನಟನೆ ನೈಜ ಎನಿಸುತ್ತದೆ.
ಆದರೆ ಪದ್ಮಜಾ ರಾವ್ ನಟನೆ ಮತ್ತು ಚಿತ್ರದ ಕೆಲವೆಡೆ ಅಷ್ಟೇ ಅಸಹಜತೆಯನ್ನೂ ಕಾಣಬಹುದು..
ಸಿದ್ದಾಂತ್ ಸುಂದರ್ ಸಂಗೀತ, ಶ್ರೀಶ್ ತೋಮರ್ ಛಾಯಾಗ್ರಹಣ ಚಿತ್ರಕ್ಕೆ ಪೂರಕ.