Snehapriya.com

June 8, 2025

ಪ್ರೇಮಿಗಳ ದಿನಕ್ಕೊಂದು ಹಾಡು ಜಾಯ್ ರೊಮ್ಯಾಂಟಿಕ್ ಡ್ರಾಮಾ

Social Share :

ಮಾಡೆಲಿಂಗ್ ಮೂಲಕ ಗಮನ ಸೆಳೆದಿರುವ ಕನಸುಗಣ್ಣಿನ ಹುಡುಗ ಜಾಯ್ ಈಗ ಸಿನಿಮಾ ಹೀರೋ..!

ಅಲ್ಲಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಿದ್ದ ಜಾಯ್ ಅವರಿಗಾಗಿ ಅಮ್ಮ ಡಾ.ಜಾಕ್ವೆಲಿನ್ ಫ್ರಾನ್ಸಿಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

‘ಪ್ರೇಮಿಗಳ ದಿನ’ದ ಅಂಗವಾಗಿ ಅದಕ್ಕೆ ಮುಂಚಿತವಾಗಿಯೇ ಸ್ಟಾರ್ ಹೊಟೇಲ್ ನಲ್ಲಿ ಜಾಯ್ ಮತ್ತವರ ತಂಡ ಚಿತ್ರದ ಹಾಡನ್ನು ಬಿಡುಗಡೆಗೊಳಿಸಿದ್ದು ವಿಶೇಷ..

ಈ ಹಿಂದೆ ಜೆ.ಜೆ. ಮೂವೀಸ್ ಬ್ಯಾನರ್ ಮೂಲಕ ‘ನಾನೊಂಥರಾ’ ಎಂಬ ಆಕ್ಷನ್ ಚಿತ್ರವನ್ನು ನಿರ್ಮಿಸಿದ್ದ ಡಾ.ಜಾಕ್ವೆಲಿನ್ ಫ್ರಾನ್ಸಿಸ್ ಅವರು ಇದೀಗ ತಮ್ಮ‌ ಪುತ್ರ ಜಾಯ್ ಅವರಿಗಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಇನ್ನೂ ಹೆಸರಿಡದ ಈ ಚಿತ್ರದಲ್ಲಿ ಜಾಯ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರ ಎದುರು ಸ್ನಿಗ್ಧಾ ಶೆಟ್ಟಿ ಅಭಿನಯಿಸುತ್ತಿದ್ದಾರೆ. ಆರ್ಯನ್ ಈ ಚಿತ್ರದ ನಿರ್ದೇಶಕ.

ಗೌಸ್ ಪೀರ್ ಅವರು ಬರೆದ ‘ಜೊತೆಯಲೇ ಇರಲೇ..’ ಎಂಬ ರೊಮ್ಯಾಂಟಿಕ್ ವೀಡಿಯೋ ಸಾಂಗ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಮಾಹಿತಿಗಳನ್ನು ಹಂಚಿಕೊಂಡಿತು.

ಇದೊಂದು ಯುವ ಸಮೂಹ ಖುಷಿಯಿಂದ ನಲಿಯುವ ಚಿತ್ರವಾಗಿದೆ ಎಂದರು ನಿರ್ದೇಶಕ ಆರ್ಯನ್.

ಜಾಯ್ ಅವರು ಆಕ್ಷನ್, ಡ್ಯಾನ್ಸ್, ನಟನೆ ಎಲ್ಲವನ್ನೂ ಕಲಿತು ಫಿಟ್ ಅಂಡ್ ಫೈನ್ ಎಂಬಂತೆ ಬಂದಿದ್ದಾರೆ. ಅವರಿಗಾಗಿ ಈ ರೋಮ್ಯಾಂಟಿಕ್ ಸಿನಿಮಾ ಮಾಡಲಾಗುತ್ತಿದೆ ಎಂದರು.

ಚಿತ್ರಕ್ಕೆ ರೋಣದ ಬಕ್ಕೇಶ್ ಸಂಗೀತ ನೀಡುತ್ತಿದ್ದು, ಅಲನ್ ಭರತ್ ಛಾಯಾಗ್ರಾಹಕರು. ಇಂದು ಬಿಡುಗಡೆಯಾದ ಹಾಡನ್ನು ಚೆನ್ನೈನ ಹರಿಚರಣ್ ಹಾಡಿದ್ದಾರೆ ಎಂಬ ಮಾಹಿತಿಗಳು ಬಂದವು.

ಮಾರ್ಚ್ ನಲ್ಲಿ ಚಿತ್ರೀಕರಣ ಆರಂಭಿಸಿ ಗೋವಾ ಸಿರ್ಸಿ, ಹೊನ್ನಾವರ, ಗೋಕರ್ಣ ಸುತ್ತಮುತ್ತ ಚಿತ್ರೀಕರಣ ನಡೆಸಲಾಗುವುದು. ಮುಂದೆ ಡಿಸೆಂಬರ್ ವೇಳೆಗೆ ಚಿತ್ರವನ್ನು ಬಿಡುಗಡೆ ಮಾಡುವ ಉದ್ದೇಶವಿದೆ ಎಂದು ಹೇಳುತ್ತಾ ಹೋದರು ನಿರ್ದೇಶಕರು.

ನಿರ್ಮಾಪಕಿ ಡಾ.ಜಾಕ್ವೆಲಿನ್ ಫ್ರಾನ್ಸಿಸ್,
ಈ ಚಿತ್ರ ಮಗನ ಸಲುವಾಗಿ ನಿರ್ಮಾಣ ಮಾಡುತ್ತಿರುವುದಾಗಿ‌ ಹೇಳಿಕೊಂಡರು.

ಪ್ರೇಮಿಗಳಿಗಾಗಿ ಅತ್ಯುತ್ತಮ ಕಥಾ ಹಂದರ ಹೊಂದಿರುವ ಈ ಚಿತ್ರವು ಯುವ ಸಮೂಹದ ಹಾಟ್ ಫೆವರಿಟ್ ಆಗಲಿದೆ ಎಂಬುದು ಚಿತ್ರತಂಡದ ನಂಬಿಕೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *