ನಿರಂಜನ್ ಶೆಟ್ಟಿ ಮುಖ್ಯ ಪಾತ್ರದಲ್ಲಿರುವ 31 ಡೇಸ್ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಗೊಂಡಿದೆ.
ಈಚೆಗೆ ಬೆಂಗಳೂರಿನ ಚಿತ್ರಕಲಾ ಪರಿಷತ್ ಆವರಣದಲ್ಲಿ ನಡೆದ ಚಿತ್ರಸಂತೆಯಲ್ಲಿ ಪೋಸ್ಟರ್ ಅನಾವರಣವಾಯಿತು.
31 ಡೇಸ್ ಚಿತ್ರಕ್ಕೆ ಹೈ ವೋಲ್ಟೇಜ್ ಲವ್ ಸ್ಟೋರಿ ಎಂಬ ಟ್ಯಾಗ್ ಲೈನ್ ಇದ್ದು, ಇದೊಂದು ಪ್ರೇಮ ಕಥಾನಕವಾಗಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಚಿತ್ರಸಂತೆಗೆ ಆಗಮಿಸಿದ್ದ 46 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿರುವ ದಂಪತಿ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದು ವಿಶೇಷ.
ಶೀರ್ಷಿಕೆಯನ್ನು ಯುವ ಪ್ರೇಮಿಗಳು ಬಿಡುಗಡೆ ಮಾಡಿದರು. ಅಲ್ಲಿ ನೆರದಿದ್ದ ಸಹಸ್ರಾರು ಕಲಾಸಕ್ತರು ಚಿತ್ರದ ಬಗ್ಗೆ
ಹೊಗಳಿದರು. ನಾನೂ ಕೂಡ ಚಿತ್ರಕಲಾ ಪರಿಷತ್ ನ ವಿದ್ಯಾರ್ಥಿ ಎಂದರು ನಿರಂಜನ್ ಶೆಟ್ಟಿ.
ನಾಗವೇಣಿ. ಎನ್ ಶೆಟ್ಟಿ ನಿರ್ಮಿಸುತ್ತಿರುವ ಚಿತ್ರವನ್ನು ರಾಜ ರವಿಕುಮಾರ್ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ. ಹೆಬ್ರಿ, ಆಗುಂಬೆ, ತೀರ್ಥಹಳ್ಳಿ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ.
ನಿರಂಜನ್ ಶೆಟ್ಟಿ ಎದುರು ಪ್ರಜ್ವಲಿ ಸುವರ್ಣ ನಟಿಸುತ್ತಿದ್ದಾರೆ. ಇದು ಇಂದಿನ ಜಮಾನದ ಕಥೆ.
ನಾಲ್ಕು ಹಾಡುಗಳಿವೆ. ವಿ. ಮನೋಹರ್ ಸಂಗೀತ ನಿರ್ದೇಶನವಿದೆ.
ಇದು ವಿ.ಮನೋಹರ್ ಅವರ ಸಂಗೀತ ನಿರ್ದೇಶನದ 150 ನೇ ಚಿತ್ರವೂ ಹೌದು. ವಿನುತ್. ಕೆ ಛಾಯಾಗ್ರಹಣ, ಧನು ಕುಮಾರ್ ನೃತ್ಯ ನಿರ್ದೇಶನ ಹಾಗೂ ಸನತ್ ಸಂಕಲನ ಈ ಚಿತ್ರಕ್ಕಿದೆ.