ಸಿನಿಮಾಸಕ್ತರಿಗೆ ಸಾಕಷ್ಟು ಅನುಕೂಲಗಳನ್ನು ಮಾಡಿಕೊಡುವ ದಿಸೆಯಲ್ಲಿ ಆಂಧ್ರ ಮೂಲದ ಐಎಫ್ ಎಂಎ ಎಂಬ ಸಂಸ್ಥೆ ಬೆಂಗಳೂರಿನಲ್ಲಿ ಶಾಖೆಯನ್ನು ತೆರೆದಿದ್ದು, ಉದ್ಯಮಿ ಎಚ್.ಆರ್.ದಿಲೀಪ್ ಕುಮಾರ್ ಅದರ ಉಸ್ತುವಾರಿ ಹೊಣೆ ಹೊತ್ತಿದ್ದಾರೆ.
ಸಿನಿಮಾಸಕ್ತರಿಗೆ ಅನುಕೂಲವಾಗಲೆಂದೇ ಭಾರತೀಯ ಸಿನಿಮಾ ನಿರ್ಮಾಣಗಾರರ ಸಂಸ್ಥೆಯ (ಇಂಡಿಯನ್ ಫಿಲಂ ಮೇಕರ್ಸ್ ಅಸೋಸಿಯೇಷನ್) ಶಾಖಾ ಸಂಸ್ಥೆಯೊಂದು ಅಸ್ತಿತ್ವಕ್ಕೆ ಬಂದಿದೆ.
ಈಚೆಗೆ ಬೆಂಗಳೂರಿನಲ್ಲಿ ಕಚೇರಿ ಉದ್ಗಾಟನೆ ಮತ್ತು website (www.ifma.in) ಲೋಕಾರ್ಪಣೆ ಸಮಾರಂಭವು ಅದ್ದೂರಿಯಾಗಿ ಜರುಗಿತು.
ನವಶಕ್ತಿ ಪೀಠದ ಡಾ. ಭಗವಾನ್ ವಿಷ್ಣುದತ್ತ ಗುರೂಜಿ, ಹೆಸರಾಂತ ಸಂಗೀತ ನಿರ್ದೇಶಕ ವಿ.ಮನೋಹರ್ ಹಾಗೂ ಸಾಹಿತಿ ಡಾ.ವಿ.ನಾಗೇಂದ್ರಪ್ರಸಾದ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂಸ್ಥೆಯು ಒದಗಿಸುತ್ತಿರುವ ಸೇವೆಗಳನ್ನು ಚಿತ್ರರಂಗದವರು ಸದುಪಯೋಗ ಪಡಿಸಿಕೊಳ್ಳಬೇಕೆಂದು ವಿ.ಮನೋಹರ್ ಹಾಗೂ ಡಾ.ವಿ.ನಾಗೇಂದ್ರಪ್ರಸಾದ್ ಕೋರಿಕೊಂಡರು.
ಐಎಫ್ಎಂಎ ಸಂಸ್ಥೆಯ ಕೇಂದ್ರಕಚೇರಿ ತೆಲಂಗಾಣದಲ್ಲಿದ್ದು, ಇಂದು 12 ರಾಜ್ಯಗಳಲ್ಲಿ 9 ಕೇಂದ್ರಗಳು ಪ್ರಾರಂಭಗೊಂಡಿದೆ. ಇದರಲ್ಲಿ ನಿರ್ದೇಶಕರು, ನಿರ್ಮಾಪಕರು, ಕಲಾವಿದರು, ತಂತ್ರಜ್ಞರು ನೊಂದಣಿ ಮಾಡಿಸಬಹುದಾಗಿದೆ. ನಿಯಮಾನುಸಾರ ನಿರ್ಮಾಪಕರುಗಳಿಗೆ ಬ್ಯಾಂಕಿನಿಂದ ಸಾಲ ಮಂಜೂರು ಮಾಡಿಸಿ ಕೊಡಲಾಗುವುದು.
ವಾರದಲ್ಲಿ ಬಿಡುಗಡೆಯಾದ ಒಂದು ಕನ್ನಡ ಚಿತ್ರವನ್ನು ಆಯ್ಕೆ ಮಾಡಿಕೊಂಡು ಐದು ಸಾವಿರ ಟಿಕೆಟ್ ಖರೀದಿ ಮಾಡಲಾಗುತ್ತದೆ. ಓಟಿಟಿ, ಡಬ್ಬಿಂಗ್, ಆಡಿಯೋ, ವಿತರಣೆ ಇನ್ನು ಮುಂತಾದ ಸೇವೆಗಳ ಜೊತೆಗೆ ನಿರ್ಮಾಪಕರಿಗೆ ಆಸರೆಯಾಗಿ ನಿಲ್ಲುತ್ತದೆ.
ಅಮೆಜಾನ್ ಪ್ರೈಮ್, ನೆಟ್ ಫ್ಲಿಕ್ಸ್ ಅಧಿಕಾರಿಗಳೊಂದಿಗೆ ನಿರ್ಮಾಪಕರನ್ನು ಭೇಟಿ ಮಾಡಿಸಿ ವ್ಯವಹಾರ ಮಾಡಿಕೊಡಲಾಗುತ್ತದೆ. ಇದಕ್ಕೆ ಸಂಸ್ಥೆಯು ಯಾವುದೇ ರೀತಿಯ ದಲ್ಲಾಳಿ ಶುಲ್ಕ ಪಡೆಯುವುದಿಲ್ಲ.
ಅಲ್ಲದೆ ಸಂಸ್ಥೆಯು ಮೊದಲ ಪ್ರಯತ್ನ ವಾಗಿ ‘ವೋಲ್ಸೇಲ್ ಬ್ಯಾಸ್ಕೆಟ್ ಗ್ರೂಪ್ಸ್’ ಸಹಭಾಗಿತ್ವದೊಂದಿಗೆ ’ಶ್ರೀ ಮೂಕಾಂಬಿಕಾ ರೇಷನ್ ಕಿಟ್’ ಹಾಗೂ ’ಶ್ರೀ ಸ್ಟಾರ್ ಗೋಲ್ಡ್’ ಅಡಿಯಲ್ಲಿ ಕಲಾವಿದರು, ತಂತ್ರಜ್ಞರಿಗೆ ಅತಿ ಕಡಿಮೆ ಬೆಲೆಯಲ್ಲಿ ದಿನಸಿ ಸಾಮಾನುಗಳನ್ನು ಉಚಿತವಾಗಿ ಸರಬರಾಜು ಮಾಡಲು ಯೋಜನೆ ರೂಪಿಸಿಕೊಂಡಿದೆ.
ಸಂಸ್ಥೆಯ ನಿರ್ದೇಶಕರಾದ ಬುಕ್ಕಾಪಟ್ಟಣವಾಸು, ಮಾ.ಚಂದ್ರು, ಸೋಷಿಯಲ್ ಮೀಡಿಯಾ ಅಧ್ಯಕ್ಷರು, ನಿರ್ಮಾಪಕರು, ನಿರ್ದೇಶಕರು ಈ ಸಂದರ್ಭದಲ್ಲಿ ಹಾಜರಿದ್ದರು.