Snehapriya.com

June 9, 2025

ಒಂದು ಮನೆಯ ಸುತ್ತ ಎಸ್ತರ್ ವೆಕೆಂಟ್ ಹೌಸ್

Social Share :

* ನವೆಂಬರ್ 17 ಕ್ಕೆ ಬಿಡುಗಡೆ

* ನಟಿ ಎಸ್ತರ್ ನರೋನಾ ಬಹುಮುಖ ಪ್ರತಿಭಾ ಪ್ರದರ್ಶನ

* ಚಿತ್ರದಲ್ಲಿ ಕೇವಲ ನಾಲ್ಕೈದು ಪಾತ್ರಗಳು..

ಬಹುಭಾಷಾ ನಟಿಯಾಗಿ ಗಮನ ಸೆಳೆದಿರುವ ಎಸ್ತರ್ ನರೋನಾ ನಟಿಸಿ ನಿರ್ದೇಶನ ಮಾಡಿರುವ ಚಿತ್ರವೀಗ ಬಿಡುಗಡೆಗೆ ಸಜ್ಜಾಗಿದೆ.

ಅದು ದಿ ವೇಕೆಂಟ್ ಹೌಸ್..!

ಒಂದು ಖಾಲಿ ಇರುವ ಮನೆಯ ಸುತ್ತ ನಡೆಯುವ ಕಥೆಯಲ್ಲಿ ನಿಗೂಢ ರಹಸ್ಯ ಹಾಗೂ ರೋಚಕತೆ ಅಡಗಿದೆ. ಆದರೆ ಇದು ದೆವ್ವದ ಚಿತ್ರವಲ್ಲ. ಬದಲಿಗೆ ಲವ್ ಥ್ರಿಲ್ಲರ್ ಎಂಬ ಉತ್ತರ ಕೊಟ್ಟರು ಎಸ್ತರ್ ನರೋನಾ.

ಅದು ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ. ನಟಿ, ನಿರ್ದೇಶಕಿ, ಸಂಗೀತ ಸಂಯೋಜಕಿ ಹೀಗೆ ಹಲವು ವಿಭಾಗಗಳನ್ನು ನಿರ್ವಹಿಸಿರುವ ಎಸ್ತರ್ ನರೋನಾ, ಚಿತ್ರದ ಆಶಯಗಳ ಬಗ್ಗೆ ಸಂಪೂರ್ಣ ವಿವರ ಬಿಚ್ಚಿಟ್ಟರು.

ಇದು ಕೊರೊನಾ ಸಂದರ್ಭದಲ್ಲಿ ಹುಟ್ಟಿದ ಕಥೆ. ಮನುಷ್ಯನ ಮನೋಭಾವಗಳ ಸುತ್ತ ಹೆಣೆಯಲಾಗಿದೆ. ಸಂದರ್ಭಗಳು ಹೇಗೆ ವರ್ತಿಸುತ್ತವೆ. ಹೇಗೆಲ್ಲಾ ಜಾಗೃತವಾಗಿರಬೇಕು ಎಂಬುದನ್ನು ಸೂಕ್ಷ್ಮವಾಗಿ ಹೇಳಲಾಗಿದೆ.

ಇಲ್ಲಿ ಕೇವಲ ನಾಲ್ಕೈದು ಪಾತ್ರಗಳಿವೆ. ಒಂದು ಮನೆ ಮತ್ತು ಅದರ ಪರಿಸರದ ಸುತ್ತ ಕಥೆ ನಡೆಯುತ್ತದೆ. ಎಲ್ಲಿಯೂ ಬೋರಾಗದಂತೆ ಸಿನಿಮಾ ಮೂಡಿ ಬಂದಿರುವುದು ವಿಶೇಷವಾಗಿದೆ ಎಂದು ಹೇಳುತ್ತಾ ಹೋದರು.

ಚಿಕ್ಕ ವಯಸ್ಸಿನಿಂದಲೇ ಸಂಗೀತ ಕಲಿತ್ತಿದ್ದೆ. ಹಾಗಾಗಿ ನಾನು ಇಲ್ಲಿ ಸಂಗೀತ ನಿರ್ದೇಶಕಿಯಾಗಿಯೂ ಕೆಲಸ ಮಾಡುವುದು ಸಾಧ್ಯವಾಗಿದೆ. ಮೂಲವಾಗಿ ಗಾಯಕಿ. ಹಾಗಾಗಿ ಹಾಡುವುದೂ ಸಾಧ್ಯವಾಗಿದೆ ಎಂದರು.

ಎಸ್ತರ್ ನರೋನಾ ಅವರ ತಾಯಿ
ಜಾನೆಟ್ ಜಾಸಿಂತ ನರೋನಾ ಈ ಚಿತ್ರದ ನಿರ್ಮಾಪಕಿ. ಇದು ನನ್ನ
ಮೂರನೇ ಚಿತ್ರ. ಮತ್ತೆರಡು ಕೊಂಕಣಿ ಚಿತ್ರಗಳು ಈಗಾಗಲೇ ಬಿಡುಗಡೆ ಕಂಡಿವೆ ಎಂದು ಹೇಳಿದರು.

ಈ ಚಿತ್ರವನ್ನು ಮೊದಲು ಕನ್ನಡದಲ್ಲಿ ಬಿಡುಗಡೆ ಮಾಡಿ ನಂತರ ಕೊಂಕಣಿಯಲ್ಲಿ ಬಿಡುಗಡೆಅಡುವ ಆಶಯವಿದೆ ಎಂದರು.

ಲಾಕ್ ಡೌನ್ ಸಂದರ್ಭದಲ್ಲಿ ಚಿತ್ರೀಕರಣ ನಡೆದ ಕಾರಣ ಹಂಡೆಗಟ್ಟಲೆ ಕಷಾಯ ತಯಾರಿಸಿದ ವಿವರಗಳನ್ನು ಸೊಗಸಾಗಿ ನೀಡಿದರು ಜಾಸಿಂತ ನರೋನಾ.

ನಟ ಸಂದೀಪ್ ಮಲಾನಿ ತಮ್ಮ ಪಾತ್ರದ ಬಗ್ಗೆ ವಿವರ ನೀಡಿದರು. ಶ್ರೇಯಸ್ ಚಿಂಗ ಹಾಗೂ ಇತರರು ಪಾತ್ರ ವರ್ಗದಲ್ಲಿದ್ದಾರೆ.

ಭಾರತೀಯ ಚಿತ್ರರಂಗದ ಹೆಸರಾಂತ ಗಾಯಕ ಉದಿತ್ ನಾರಾಯಣ್ ಅವರ ಪತ್ನಿ ದೀಪಾ ನಾರಾಯಣ್ ಕೊನೆಯಲ್ಲಿ ಹಾಡು ಹಾಡಿದ್ದು ವಿಶೇಷ ವಾಗಿತ್ತು.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *