Snehapriya.com

June 8, 2025

ಬಹುಮುಖ ಬೆಡಗಿ ನಟಿ ಎಸ್ತರ್ ನಿರ್ದೇಶನದ ಚಿತ್ರ ಬಿಡುಗಡೆಗೆ..

Social Share :

* ‘ವೇಕೆಂಟ್ ಹೌಸ್’ ಇದೇ ವಾರ ಬಿಡುಗಡೆ..

* ನಟನೆ, ನಿರ್ದೇಶನ, ಸಂಗೀತ ಎಲ್ಲದರಲ್ಲೂ ಎಸ್ತರ್ ನರೋನಾ ಪ್ರತಿಭಾ ಪ್ರದರ್ಶನ..

ಸ್ಯಾಡಲ್ ವುಡ್ ನಲ್ಲಿ ಮಾದಕ ನಟಿಯಾಗಿ ಗಮನ ಸೆಳೆದಿರುವ ಮಂಗಳೂರು ಮೂಲದ ಬೆಡಗಿ ಎಸ್ತರ್ ನರೋನಾ ನಿರ್ದೇಶನಕ್ಕಿಳಿದು ಭಾರೀ ಸುದ್ದಿ ಮಾಡಿದರು..

ಇದೀಗ ಅವರು ನಟಿಸಿ, ನಿರ್ದೇಶನ ಮಾಡುವುದರ ಜೊತೆಗೆ ಸಂಗೀತ ಸೇರಿದಂತೆ ಹಲವು ವಿಭಾಗಗಳಲ್ಲಿ ದುಡಿದಿರುವ ಚಿತ್ರ ‘ವೇಕೆಂಟ್ ಹೌಸ್’ ಇದೇ ವಾರ ಅಂದರೆ ನವೆಂಬರ್ 10ರಂದು ತೆರೆ ಕಾಣುತ್ತಿದೆ.

‘ಡಿ ಎನ್ ಎ’, ‘ನಾವಿಕ’, ‘ಅತಿರಥ’, ‘ನುಗ್ಗೇಕಾಯಿ’, ‘ಲೋಕಲ್ ಟ್ರೈನ್’, ‘ಲಂಕೆ’ ಸೇರಿದಂತೆ ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿರುವ ನಟಿ ಎಸ್ತರ್ ನರೋನಾ ‘ವೆಕೆಂಟ್ ಹೌಸ್’ ನ ಮೂಲಕ ಬಹುಮುಖ ಪ್ರತಿಭೆಯಾಗಿ ಹೊಮ್ಮಿದ್ದಾರೆ.

ಗ್ಲಾಮರ್ ಪಾತ್ರಗಳ ಮೂಲಕ ಹೆಸರಾಗಿರುವ ಎಸ್ತರ್ ನರೋನಾ ಈಗ ಹೊಸ ಆಶಯ ಹಾಗೂ ಕನಸುಗಳ ಜೊತೆ ಹೊಸ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ.

‘ದಿ ವೆಕೆಂಟ್ ಹೌಸ್’ ಚಿತ್ರದ ಹಾಡುಗಳು, ಟೀಸರ್ ಈಗಾಗಲೇ ಗಮನ ಸೆಳೆಯುತ್ತಿವೆ. ಕನ್ನಡ ಹಾಗೂ ಕೊಂಕಣಿ ಭಾಷೆಯಲ್ಲಿ ಮೂಡಿ ಬಂದಿರುವ ಈ ಚಿತ್ರಕ್ಕೆ ನರೇಂದ್ರ ಗೌಡ ಛಾಯಾಗ್ರಹಣವಿದೆ. ವಿಜಯ್ ರಾಜ್ ಸಂಕಲನವಿದೆ.

ಚಿತ್ರವನ್ನು ಬಹುತೇಕ ಮಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಖಾಲಿ ಮನೆಯ ಸುತ್ತ ನಡೆಯುವ ಘಟನೆ ಆಧಾರಿತ ಸಿನಿಮಾ ಇದಾಗಿದೆ.

ಬಾಲಿವುಡ್‌ನ ಖ್ಯಾತ ನಟ ಅನುಪಮ್ ಖೇರ್ ನಟನಾ ಶಾಲೆಯಲ್ಲಿ ತರಬೇತಿ ಪಡೆದು ಹಿಂದಿ ಚಿತ್ರರಂಗಕ್ಕೆ ಪ್ರವೇಶ ಪಡೆದಿದ್ದ ಎಸ್ತರ್ ನರೋನಾ ಬಳಿಕ ತೆಲುಗು, ತುಳು ಸಿನಿಮಾಗಳಲ್ಲೂ ನಟಿಸಿದ್ದಾರೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *