Snehapriya.com

June 8, 2025

ಪರಿಶುದ್ಧ ಪ್ರೇಮಕ್ಕೆ ಸಾವಿಲ್ಲ ಪ್ರೇಮಂ ಮಾದಕ ಟ್ರೈಲರ್..

Social Share :

ಇದು ಪ್ರೇಮ ಸಾರ್ವಕಾಲಿಕ ಎಂದು ಹೇಳುವ ಕಥೆ. ಒಬ್ಬನಿಗೆ ಆರು ಜನ ಯುವತಿಯರು ಪರೀಕ್ಷೆ ಮಾಡುವ ಕಥೆ..

ಈ ಹಿಂದೆ ‘ಇಂಜಿನಿಯರ್ಸ್’ ಹಾಗೂ ‘ಗಂಡುಲಿ’ ಎಂಬ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ವಿನಯ್ ರತ್ನಸಿದ್ದಿ ಈಗ ಮತ್ತೊಂದು ಪ್ರೇಮಕಥೆಯ ಜೊತೆಗೆ ಬಂದಿದ್ದಾರೆ..

ಅದೇ ಪ್ರೇಮಂ ಟು ಟು..!

ವಿನಯ್ ರತ್ನಸಿದ್ಧಿ ನಿರ್ದೇಶನ ಮಾಡುವುದರ ಜೊತೆಗೆ ಮುಖ್ಯ ಪಾತ್ರದಲ್ಲಿ ನಟಿಸಿರುವ ಚಿತ್ರದ ಟ್ರೈಲರ್ ಈಚೆಗೆ ಬಿಡುಗಡೆ ಕಂಡಿತು.

ಇದೇ ತಿಂಗಳಲ್ಲಿ ತೆರೆಗೆ ಬರಲು ಸಿದ್ಧವಾಗಿರುವ ಪ್ರೇಮಂ ಸಾಕಷ್ಟು ವಿಶೇಷತೆಗಳನ್ನು ಹೊಂದಿರುವುದಾಗಿ ಚಿತ್ರತಂಡ ವಿವರಗಳನ್ನು ನೀಡಿತು.

ವಿನಯ್ ರತ್ನಸಿದ್ಧಿ ಎದುರು ಶಕುಂತಲಾ, ವೈಷ್ಣವಿ, ಸುಶ್ಮಿತಾ, ಮಂಜುಶ್ರೀ, ಕಾವೇರಿ ಹಾಗೂ ಪ್ರಿಯಾಂಕಾ ನಟಿಸಿದ್ದಾರೆ. ರತ್ನಸಿದ್ದಿ ಫಿಲಂಸ್ ಮೂಲಕ ಚಂದನ, ಅಮರೇಂದ್ರ ವರದ ಹಾಗೂ ಪ್ರಸಾದ್ ಬಿ.ಜಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಪರಿಶುದ್ದವಾದ ಪ್ರೇಮಕ್ಕೆ ಎಂದೂ ಸಾವಿಲ್ಲ ಎಂದು ಸಾರುವ ಕಥೆಯಲ್ಲಿ ಸಾಕಷ್ಟು ವೈವಿಧ್ಯವಿದೆ. ಮೊದಲ ಲಾಕ್ ಡೌನ್ ಸಂದರ್ಭದಲ್ಲಿ ಎರಡು ಪಾತ್ರಗಳನ್ನು ಇಟ್ಟು ಆರಂಭವಾದ ಚಿತ್ರದಲ್ಲಿ ಈಗ ಸುಮಾರು 200 ಪಾತ್ರಗಳಿವೆ ಎಂದು ವಿವರ ಕೊಟ್ಟರು ನಿರ್ದೇಶಕ ಕಮ್ ನಟ ವಿನಯ್ ರತ್ನಸಿದ್ಧಿ.

ಪ್ರೇಮಂ 2 2 ಎಂಬುದಕ್ಕೆ ಬೇರೆ ಬೇರೆ ಅರ್ಥಗಳಿವೆ. ಅದು ಜಯ ಮತ್ತು ಯೋಚನೆಗೆ ಸಂಬಂಧಿಸಿದ್ದು. ದಡ್ಡನಂತಿರುವ ಯುವಕ ಪ್ರೀತಿ ಮತ್ತು ತೊಳಲಾಟಗಳಿಂದ ಹೊರಬರುವುದು ಹೇಗೆ ಎಂಬುದು ಕಥೆಯ ತಿರುಳು.

ಸೊಗಸಾದ 4 ಹಾಡುಗಳು ಮತ್ತು ನಾಲ್ಕು ಸಾಹಸ ದೃಶ್ಯಗಳು ಇರುತ್ತವೆ.
ತುಮಕೂರು ಬಳಿಯ ಹೊನ್ನುಡಿಕೆ ಎಂಬಲ್ಲಿ ಬಹುತೇಕ ಚಿತ್ರೀಕರಣ ನಡೆಸಲಾಗಿದ್ದು, ಉಳಿದಂತೆ ಬೆಂಗಳೂರು, ವಿಮಾನ ನಿಲ್ದಾಣ ಸೇರಿ 70 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ ಎಂಬ ವಿವರ ಕೊಟ್ಟರು ನಿರ್ದೇಶಕರು.

ನಿರ್ಮಾಪಕರಾದ ತಿಪಟೂರು ಮೂಲದ ಪ್ರಸಾದ್ ಹಾಗೂ ಅಮರೇಂದ್ರ ವರದ ಮಾತನಾಡಿದರು. ಮಾಡೆಲ್ ಆಗಿರುವ ಮಂಜುಶ್ರೀ ಕೂಡ ಚಿತ್ರದಲ್ಲಿನ ತಮ್ಮ ಪಾತ್ರದ ವಿವರ ಕೊಟ್ಟರು.

ಅಜಯ್ ಶ್ರೀನಿವಾಸಮೂರ್ತಿ ಸಂಗೀತ ನಿರ್ದೇಶಕ. ಆನಂದ್ ಇಳಯರಾಜಾ, ಅರುಣ್ ಮತ್ತು ಮನು ಛಾಯಾಗ್ರಾಹಕರು. ವಿನಯ್ ಸಂಕಲನ, ನಾಗರಾಜ ಹುಲಿವಾನ್ ಡಿಟಿಎಸ್, ಯೇಷನ್ ವಿಎಫ್‌ಎಕ್ಸ್ ಕಾರ್ಯದ ಹೊಣೆ ಹೊತ್ತಿದ್ದಾರೆ.

ಚಂದ್ರಪ್ರಭ, ಲೋಕೆಶ್ ರಾಜಣ್ಣ, ಉಮೇಶ್ ಕಿನ್ನಾಳ, ಶಿವಮೊಗ್ಗ ರಾಮಣ್ಣ ಮುಂತಾದವರ ತಾರಬಳಗವಿದೆ ಚಿತ್ರದಲ್ಲಿದೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *