* ಜಾಲಿವುಡ್ ಜಾಲಿ ಸಂಗತಿಗಳು
* ಮಕ್ಕಳ ಜೊತೆ ಕುಟುಂಬ ನಲಿಯಲು
* ಸಿನಿಮಾ ಚಿತ್ರೀಕರಣ ವಿಶೇಷ ಅನುಕೂಲಗಳು..
ಇಡೀ ಕುಟುಂಬ..
ವಿಶೇಷವಾಗಿ ಮಕ್ಕಳು ನಕ್ಕು ನಲಿದು; ಕುಣಿದು ಕುಪ್ಪಳಿಸಿ ಆನಂದಿಸಲು ಬಹು ದೊಡ್ಡ ವಿಸ್ತಾರವಾದ ಜಾಗದ ಜೊತೆಗೆ ಅತ್ಯಾಧುನಿಕ ಆಟಿಕೆ; ಫಾಲ್ಸ್, ನಯನ ಮನೋಹರ ಫೌಟೆಂನ್ ಮತ್ತು ವರ್ಣರಂಜಿತ ಎಲ್ ಇ ಡಿ ಶೋಗಳು..
ಗೋವಾ ಸಮುದ್ರ ತೀರ ಮತ್ತು ಮರೀನಾ ಬೀಚ್ ನೆನಪಿಸುವ ಸುಂದರ ತಾಣ; ಸಿನಿಮಾ ಮೇಕರ್ಸ್ ಗೆ ಎಲ್ಲಾ ಅನುಕೂಲಗಳಿರುವ ಫ್ಲೋರ್ ಗಳು, ದೇಶಿ ಜೊತೆಗೆ ವಿದೇಶದ ಜನರ ನೃತ್ಯ ವೈಭವಗಳು..
ಎಲ್ಲವೂ ಒಂದೇ ಸ್ಥಳದಲ್ಲಿ ಸಿಗುತ್ತದೆ. ಉದ್ಯಾನನಗರಿ ಬೆಂಗಳೂರಿಗೆ ಕೂಗಳತೆ ದೂರದ ಬಿಡದಿ ಸಮೀಪವಿರುವ ಆ ಸ್ಥಳದ ಹೆಸರು
ಜಾಲಿವುಡ್..!
ಈ ಮೊದಲು ಇನೋವೇಟೀವ್ ಸ್ಟುಡಿಯೋ ಇದ್ದ ಜಾಗದಲ್ಲಿ ವೈಭವದ ಮತ್ತು ಮಕ್ಕಳು ನಕ್ಕು ನಲಿಯುವ; ಕುಟುಂಬಸ್ಥರು ಸಂಭ್ರಮಪಡುವ ಜಾಗವಾಗಿ ರೂಪುಗೊಂಡಿದೆ.
ವೇಲ್ಸ್ ಸ್ಟುಡಿಯೋ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಈ ಜಾಲಿವುಡ್ ಕಳೆದ ಆಗಸ್ಟ್ 27ರಿಂದ ಸಾರ್ವಜನಿಕ ವೀಕ್ಷಣೆಗೆ ತೆರೆದುಕೊಂಡಿದೆ. ಇದೀಗ ಮುಂದಿನ ಅಕ್ಟೋಬರ್ 7 ರಿಂದ ಹೊಸ ವ್ಯವಸ್ಥೆಗಳು ಆರಂಭಗೊಳ್ಳಲಿದ್ದು, 3ಡಿ ಫೌಟೆನ್ ಶೋ ಹಾಗೂ ಶೂಟಿಂಗ್ ಸಲುವಾಗಿ ಎಸಿ ಫ್ಲೋರ್ ಗಳು ಮತ್ತು ಪಾರ್ಟಿ ಹಾಲ್ ತೆರೆದುಕೊಳ್ಳಲಿವೆ ಎಂದು ವೇಲ್ಸ್ ಸ್ಟುಡಿಯೋ ಸಂಸ್ಥೆಯ ವ್ಯವಸ್ಥಾಪಕ ಬಷಿರ್ ಹಾಗೂ ನಿರ್ಮಾಪಕ ನವರಸನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಹೊಸ ವ್ಯವಸ್ಥೆಯಲ್ಲಿ ಇಡೀ ಕುಟುಂಬ ಬೆಳಿಗ್ಗೆ 11ಗಂಟೆಗೆ ಜಾಲಿವುಡ್ ಗೆ ಭೇಟಿ ಕೊಟ್ಟು ಸಂಜೆ 7 ಗಂಟೆಯವರೆಗೆ ಆನಂದಿಸಬಹುದು. ಇದಕ್ಕಾಗಿ ಮಾಮೂಲಿ ಪ್ರವೇಶ ದರ 999₹, ಮಕ್ಕಳಿಗೆ 699₹ ಮತ್ತು ಹಿರಿಯ ನಾಗರಿಕರಿಗೆ 599₹ ಇರುತ್ತದೆ ಎಂದು ವಿವರಿಸಿದರು.
ಒಮ್ಮೆ ಜಾಲಿವುಡ್ ಒಳಗೆ ಬಂದರೆ ಸಂಜೆಯವರೆಗೆ ಸಮಯ ಕಳೆಯಲು ಎಲ್ಲಾ ರೀತಿಯ ವ್ಯವಸ್ಥೆ ಇರುತ್ತದೆ. ಹಣ ಕೊಟ್ಟು ಬಂದವರಿಗೆ ಮಧ್ಯಾಹ್ನ ಬಫೆ ಊಟ ಉಚಿತ. ಆದರೆ ಇತರ ತಿಂಡಿಗಳಿಗೆ ಹಣ ಖರ್ಚು ಮಾಡಬೇಕಾಗುತ್ತದೆ. ಮಕ್ಕಳಿಗೆ ತಿಂಡಿ ಕೊಡಿಸಲು ನಿಮ್ಮ ಸ್ವಂತ ಹಣ ಖರ್ಚು ಮಾಡಬೇಕಾಗುತ್ತದೆ ಎಂಬ ವಿವರವೂ ಬಂತು.
ಸಿನಿಮಾ ಹಾಗೂ ಧಾರಾವಾಹಿ ಚಿತ್ರೀಕರಣಕ್ಕೆ ಅನುಕೂಲವಾಗುವಂತೆ ಎಸಿ ಫ್ಲೋರ್ ಗಳಿವೆ. ಫಿಲಂ ಥೀಮ್ ಪಾರ್ಕ್, ಸುಮಾರು 2500 ಜನರು ಯಾವುದೇ ಪಾರ್ಟಿ ಮಾಡಲು ಅನುಕೂಲವಾಗುವ ವಿಶಾಲ ಜಾಗ ಮತ್ತು ಆಹಾರದ ವ್ಯವಸ್ಥೆ ಇರುತ್ತದೆ.
ಕಣ್ಮನ ಸೆಳೆಯುವ ಎಲ್ ಇ ಡಿ ಫೌಂಟೇನ್ ನೋಡುವುದೇ ಸೊಗಸು. ವಿಸ್ತಾರ ನೆಲೆಯ ಈ ಜಾಗಕ್ಕೆ ಭೇಟಿ ಕೊಟ್ಟವರಿಗೆ ಮನತಣಿಯೇ ಆನಂದ; ಆಹ್ಲಾದಕರ ಅನುಭವವಾಗುವುದರಲ್ಲಿ ಸಂಶಯವೇ ಇಲ್ಲ..