Snehapriya.com

June 8, 2025

ಮಾಲಾಶ್ರೀ ಮಾರಕಾಸ್ತ್ರ ಅಕ್ಟೋಬರ್ 6ಕ್ಕೆ ಬಿಡುಗಡೆ

Social Share :

ಮಾಲಾಶ್ರೀ ಮುಖ್ಯ ಪಾತ್ರದಲ್ಲಿರುವ ಗುರುಮೂರ್ತಿ ಸುನಾಮಿ ನಿರ್ದೇಶನ ಹಾಗೂ ಕೋಮಲಾ ನಟರಾಜ್ ನಿರ್ಮಾಣದ ‘ಮಾರಕಾಸ್ತ್ರ’ ಚಿತ್ರ ಅಕ್ಟೋಬರ್‌ 6ರಂದು ಬಿಡುಗಡೆ ಕಾಣುತ್ತಿದೆ.

ಸಾಹಸ ಪ್ರಧಾನವಾದ ಈ ಚಿತ್ರ ಬಿಡುಗಡೆಗೆ ಮುನ್ನವೇ ಮಾರಾಟದ ಭರಾಟೆಯಲ್ಲಿ ದಾಖಲೆ ಸೃಷ್ಟಿ ಮಾಡಿದ್ದು, ಹಿಂದಿ ಡಬ್ಬಿಂಗ್ ಹಕ್ಕುಗಳು ಉತ್ತಮ ಬೆಲೆಗೆ ಮಾರಾಟವಾಗುವ ಮೂಲಕ ನಿರ್ಮಾಪಕರನ್ನು ಸೇಫ್ ಮಾಡಿದೆ.

ವಿಶೇಷ ಚೇತನರಾಗಿರುವ ಗುರುಮೂರ್ತಿ ಸುನಾಮಿ ಅವರ ಮೊದಲ ನಿರ್ದೇಶನದ ಚಿತ್ರ ಇದಾಗಿದ್ದು, ಮೇಕಿಂಗ್ ಹಾಗೂ ಕಲಾವಿದರ ಆಯ್ಕೆ ಎರಡರಲ್ಲಿಯೂ ವಿಶೇಷತೆ ಪಡೆದುಕೊಂಡಿದೆ.

ಮಾಲಾಶ್ರೀ ಅವರ ಪಾತ್ರದ ಜೊತೆಗೆ ಮತ್ತೊಂದು ಯುವ ಜೋಡಿ ಚಿತ್ರದಲ್ಲಿ ಗಮನ ಸೆಳೆಯಲಿದ್ದು, ಆನಂದ್ ಆರ್ಯ ಹಾಗೂ ಹರ್ಷಿಕಾ ಪೂಣಚ್ಚ ಆ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಸಾಕಷ್ಟು ಹೊಸ ಕಲಾವಿದರಿಗೂ ಅವಕಾಶವಿರುವ ಚಿತ್ರದಲ್ಲಿ ಪ್ರೇಕ್ಷಕರನ್ನು ಮೋಹಕತೆಗೆ ಸೆಳೆವ ಹಾಡು ಇದೆ. ಅದೇ ಗ್ಲಾಮರ್ ಗಾಡಿ..!

ಮಂಜು ಕವಿ ಬರೆದಿರುವ ಹಾಗೂ ಅನನ್ಯ ಭಟ್ ಹಾಡಿರುವ ‘ಗ್ಲಾಮರ್ ಗಾಡಿ..’ ಹಾಡು ಯೂಟ್ಯೂಬ್ ನಲ್ಲಿ ಈಗಾಗಲೇ ಮಿಲಿಯನ್ ಗಟ್ಟಲೆ ವೀಕ್ಷಕರನ್ನು ತಲುಪಿದೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *