Snehapriya.com

June 6, 2025

ಈಶಾನಿ ಸ್ವತಂತ್ರ ಗಾಯನ ಗುಚ್ಛ ಕನ್ನಡ ಮಣ್ಣಿನ ಅಂ.ರಾ.ಗಾಯಕಿ

Social Share :

ಗಮನ ಸೆಳೆದ ಫ್ರೀಡಮ್ ಹಾಡು..

ದುಬೈನಲ್ಲಿ ನೆಲೆಸಿರುವ ಇವರ ಹೆಸರು ಈಶಾನಿ..
ಗಾಯಕಿಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ..
ಮತ್ತು ಇವರು ಕನ್ನಡತಿ ಎಂಬುದು ಹೆಮ್ಮೆ..

‘ಫ್ರೀಡಮ್ ಆಲ್ಬಮ್’ ಹಾಗೂ
‘ಥಗ್ಸ್ ಆಫ್ 1980’ ಎಂಬ ಚಿತ್ರದ ಶೀರ್ಷಿಕೆ ಬಿಡುಗಡೆ ಸಲುವಾಗಿ ಬೆಂಗಳೂರಿಗೆ ಬಂದಿದ್ದ ಈಶಾನಿ ಸಾಧನೆಯ ವಿವರಗಳನ್ನು ಬಿಚ್ಚಿಟ್ಟರು.

ಮೈಸೂರು ಮೂಲದ ಈಶಾನಿ ಈಗ ದುಬೈನಲ್ಲಿ ನೆಲೆಸಿದ್ದು, ಇಲ್ಲಿಯವರೆಗೂ ಇಂಗ್ಲಿಷ್ ನಲ್ಲಿ 17 ಆಲ್ಬಮ್ ಗಳನ್ನು ಹೊರ ತಂದಿದ್ದಾರೆ. ಕನ್ನಡದಲ್ಲಿ ‘ರೈಟರ್’ ಹಾಗೂ ‘ಊರ್ಮಿಳಾ’ ಆಲ್ಬಮ್‌ಗಳನ್ನು ಹೊರ ತಂದಿದ್ದು, ಇದೀಗ ‘ಫ್ರೀಡಮ್’ ಸಹ ಬಿಡುಗಡೆಗೊಂಡಿರುವುದು ವಿಶೇಷವಾಗಿದೆ.

ಗಾಯಕಿ ಈಶಾನಿ ಈಚೆಗೆ ಕನ್ನಡದ ಸ್ಟಾರ್ ನಟರಾದ ಶಿವರಾಜ್ ಕುಮಾರ್ ಹಾಗೂ ದರ್ಶನ್ ಅವರನ್ನು ಭೇಟಿ ಮಾಡಿದ್ದರು. ಇದೇ ವೇಳೆ ‘ಸಾಗರದಾಚೆ ಬೆಳೆಯುತ್ತಿರುವ ಪ್ರತಿಭೆಗೆ ಒಳಿತಾಗಲಿ’ ಎಂದು ಇಬ್ಬರೂ ಶುಭ ಕೋರಿದ್ದಾರೆ.

ಮೈಸೂರಿನಲ್ಲಿ ಬೆಳೆಯುವಾಗಲೇ ಗಾಯನದ ಬಗ್ಗೆ ಅಪಾರ ಒಲವಿತ್ತು. ಅದನ್ನು ಸಾಕಾರಗೊಳಿಸಲು ಮನೆಯವರ ಬೆಂಬಲವಿತ್ತು. ಹಾಗಾಗಿ ಹಾಡುತ್ತಾ ಹಾಡುತ್ತಾ 17 ಆಲ್ಬಮ್ ಗಳು ಹೊರಬಂದವು. ಲಾಸ್ ಏಂಜಲೀಸ್ ನ ದೊಡ್ಡ ವೇದಿಕೆಯಲ್ಲಿ ಹಾಡುವ ಅವಕಾಶ ದೊರೆತ್ತಿದ್ದು ನನ್ನ ಪುಣ್ಯ ಎಂದು ಫ್ರೀಡಮ್ ಹಾಡು ಬಿಡುಗಡೆ ಸಂದರ್ಭದಲ್ಲಿ ಮೆಲುಕು ಹಾಕಿದರು ಈಶಾನಿ.

ಸಿನಿಮಾಗಳಲ್ಲಿ ಹಾಡಬೇಕೆಂಬುದು ಹಂಬಲ. ಅದೇ ರೀತಿ ಸಿನಿಮಾಗಳಲ್ಲಿ ನಟಿಸಬೇಕೆಂಬ ಆಸೆಯೂ ಹುಟ್ಟಿದೆ. ಒಂದೊಮ್ಮೆ ಈ ಆಲ್ಬಮ್ ಹಾಡುಗಳಿಂದ ಅದು ಸಾಧ್ಯವಾಗಲೂ ಬಹುದು ಎಂದರು.

ಅಂದ ಹಾಗೆ ಫ್ರೀಡಮ್ ಆಲ್ಬಮ್ ಗೀತೆಯನ್ನು ಈಶಾನಿ ತಂದೆ ಶೇಖರ್, ತಾಯಿ ಇಂದ್ರಾಣಿ ಬಿಡುಗಡೆ ಮಾಡಿದರು. ಫ್ರೀಡಮ್ ಹಾಡಿಗೆ ವಾಸುಕಿ ವೈಭವ ಸಾಹಿತ್ಯ ಬರೆದು ಸಂಗೀತ ಸಂಯೋಜನೆ ಮಾಡಿದ್ದಾರೆ.
ಎ.ಎಸ್ ಪ್ರೋಡಕ್ಷನ್ಸ್ ಬ್ಯಾನರ್‌ನಲ್ಲಿ ವೆಂಕಟ್ ನಿರ್ಮಾಣ ಮಾಡಿದ್ದಾರೆ.

ಇದೇ ವೇಳೆ ನಿರ್ದೇಶಕ ಗಿರಿ ಗೌಡ ನಿರ್ದೇಶನದ ‘ಥಗ್ಸ್ ಆಫ್ 1980’ ಚಿತ್ರದ ಶೀರ್ಷಿಕೆ ಕೂಡ ಬಿಡುಗಡೆ ಮಾಡಲಾಯಿತು.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *