Snehapriya.com

June 9, 2025

ಮನ ತಣಿಸುವ ಉಲ್ಲಾಸ ಕೇಂದ್ರ ಬಿಡದಿ ಸಮೀಪ ಜಾಲಿವುಡ್..

Social Share :

* ಮಕ್ಕಳ ಮನೋಲಾಸಕ್ಕೆ

* ಸೊಗಸಾದ ಸಿನಿಮಾ ಚಿತ್ರೀಕರಣಕ್ಕೆ

* ಮನೆ ಮಂದಿಯ ಜಾಲಿಮೂಡ್ ಗೆ

* ಇನ್ನೋವೇಟಿವ್ ಫಿಲ್ಮ್‌ಸಿಟಿ ಬದಲು

ಇದು ಮನೋಲ್ಲಾಸ ಕೇಂದ್ರ.. ಮನೆಮಂದಿಯೆಲ್ಲಾ ಒಟ್ಟಿಗೆ ಸುಂದರ ಕ್ಷಣಗಳನ್ನು ಕಳೆಯಬಹುದಾದ ಥೀಮ್ ಪಾರ್ಕ್..

ಇದರಲ್ಲಿ ಒಟ್ಟು 33 ಮುಖ್ಯ ಆಕರ್ಷಣೆಗಳಿವೆ. ವಾಟರ್ ರೈಡ್ ಗಳಲ್ಲದ್ದೆ, ಡೈನೋ ಪಾರ್ಕ್, 5 ರೆಸ್ಟೋರೆಂಟ್ ಗಳು, ಎರಡು ರೆಸ್ಟೋ ಪಬ್ ಗಳು …

ಹೀಗೆ ಇಲ್ಲಿಗೆ ಬಂದವರು ಬೇರೆ ಪ್ರಪಂಚಕ್ಕೆ ಭೇಟಿ ಕೊಟ್ಟು ಹೋದ ಸುಖಾನುಭವ. ಸಿನಿಮಾ ಮಂದಿಗೆ ಇದು ವಿಶಿಷ್ಟ ವಿನೂತನ ಸ್ಥಳ..

ಹಾಗಾಗಿ ಇದು ಜಾಲಿವುಡ್..!

ಕಳೆದ ಭಾನುವಾರ ಅಂದರೆ ಆಗಸ್ಟ್ 20ರಂದು ನಡೆದ ಉದ್ಘಾಟನೆಯ ಅದ್ದೂರಿ ಸಮಾರಂಭದಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್, ಸಂಸದ ಡಿ.ಕೆ.ಸುರೇಶ್, ಶಾಸಕ ಎಚ್.ಸಿ.ಬಾಲಕೃಷ್ಣ ಪಾಲ್ಗೊಂಡಿದ್ದರು.

ಜೊತೆಗೆ ಜಾಲಿವುಡ್ ಸ್ಥಾಪಕರಾದ ವೇಲ್ಸ್ ಗ್ರೂಪ್‌ನ ಸಂಸ್ಥಾಪಕ ಐಶರಿ ಕೆ ಗಣೇಶ್, ಸಿಇಓ ಆರವ್ ಹಾಗೂ ಇತರ ಗಣ್ಯರು ಹಾಜರಿದ್ದರು.

ಈ ಜಾಲಿವುಡ್ ಸ್ಟುಡಿಯೋಸ್ ಮತ್ತು ಅಡ್ವೆಂಚರ್ಸ್ ಎಂಬುದು ಒಂದು ಮನೋಲಾಸ ಕೇಂದ್ರ. ಇಂತಹ ಥೀಮ್ ಪಾರ್ಕ್ ನಿರ್ಮಾಣ ಮಾಡಬೇಕು ಎಂಬುದು ಬಹಳ ವರ್ಷದ ಕನಸಾಗಿತ್ತು. ಈಗ ಅದು ನಿಜವಾಗಿದೆ ಎಂಬುದು ಖುಷಿಯ ವಿಚಾರ ಎಂದರು ಐಶರಿ ಕೆ.ಗಣೇಶ್.

ಮನೆಮಂದಿಯಲ್ಲಾ ಒಟ್ಟಿಗೆ ಸಮಯ ಕಳೆಯುವಂತಹ ಒಂದು ಥೀಮ್ ಪಾರ್ಕ್ ಮಾಡಬೇಕು ಎಂಬ ಆಸೆ ಇತ್ತು. ಹೀಗಿರುವಾಗಲೇ, ಇನ್ನೋವೇಟೀವ್ ಫಿಲಂಸಿಟಿಯನ್ನು ಪರಿವರ್ತಿಸುವ ಅವಕಾಶ ಬಂತು. ಕಳೆದ ಎರಡು ವರ್ಷಗಳಿಂದ ಪ್ರಕ್ರಿಯೆ ನಡೆಯುತ್ತಲೇ ಇತ್ತು. ಫಿಲಂಸಿಟಿ ಯನ್ನು ನವೀಕರಿಸಿರುವುದಷ್ಟೇ ಅಲ್ಲ; ಹಲವು ಮನರಂಜನೆ ಆಟಗಳನ್ನು ಹೊಸದಾಗಿ ಆರಂಭಿಸಲಾಗಿದೆ. ಚಿತ್ರರಂಗಕ್ಕೆ ಈ ಸ್ಟುಡಿಯೋ ವರವಾಗಬಹುದು. ಹಾಗಾಗಿ ಭಾರತೀಯ ಚಿತ್ರರಂಗಕ್ಕೆ ಇದನ್ನು ಸಮರ್ಪಿಸಲಾಗುತ್ತಿದೆ. ಇದೇ ತಿಂಗಳು ಅಂದರೆ ಆಗಸ್ಟ್ 27ರಿಂದ ಈ ಜಾಲಿವುಡ್ ಅಧಿಕೃತವಾಗಿ ಪ್ರಾರಂಭವಾಗಲಿದೆ ಎಂದರು ಐಶರಿ ಕೆ.ಗಣೇಶ್.

ಇದು ನಮ್ಮ ನೆಚ್ಚಿನ ಸ್ಥಳವಾಗಿತ್ತು ಎಂದರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್. ಹಿಂದೊಮ್ಮೆ ವಾಣಿಜ್ಯ ಉದ್ದೇಶದ ಸಲುವಾಗಿಯೇ ಈ ಸ್ಥಳಕ್ಕೆ ಭೇಟಿ ಕೊಟ್ಟಿದ್ದೆ. ಏಕೋ ಅದು ಸಾಧ್ಯವಾಗಲಿಲ್ಲ; ಆದರೆ ಈಗ ಇದರ ಅಗಾಧತೆಯನ್ನು ನೋಡುವಾಗ ಖುಷಿಯಾಗುತ್ತದೆ ಎಂದರು.

ನಿಜಕ್ಕೂ ಅದ್ಭುತ ಎನ್ನುವಂತೆ ಕಾಣುವ ಈ ಸ್ಥಳಕ್ಕೆ ನಾನು ಬರದೇ ಹೋಗಿದ್ದರೆ, ಏನೋ ಕಳೆದು ಕೊಂಡಂತೆ ಆಗುವ ಸಾಧ್ಯತೆ ಇತ್ತು ಎಂದರು ಸೆಂಚುರಿ ಸ್ಟಾರ್ ಶಿವಣ್ಣ.

ಸ್ಯಾಂಡಲ್ ವುಡ್, ಕಾಲಿವುಡ್, ಬಾಲಿವುಡ್ ಹೀಗೆ ಎಲ್ಲಾ‌ ಒಂದು ಕಡೆ ಸೇರುವ ಸ್ಥಳ ‘ಜಾಲಿವುಡ್’ ಆಗಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು ಡಾ.ಶಿವರಾಜಕುಮಾರ್.

ಸಂಸದ ಡಿ.ಕೆ.ಸುರೇಶ್ ಹಾಗೂ ಶಾಸಕ ಎಚ್.ಸಿ.ಬಾಲಕೃಷ್ಣ ಇದೇ ಸಂದರ್ಭದಲ್ಲಿ ಐಶರಿ ಕೆ.ಗಣೇಶ್ ಅವರ ಪ್ರಯತ್ನಕ್ಕೆ ಶುಭ ಹಾರೈಸಿದರು. ಸಿ.ಇ.ಓ ಆರವ್ ಉಪಸ್ಥಿತರಿದ್ದರು.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *