Snehapriya.com

June 8, 2025

ನಮೋ ಭೂತಾತ್ಮ-2 ಈ ವಾರ ನಕ್ಕು ನಗಿಸುವ ಬದುಕಿನ ಸಾರ

Social Share :

* ಆಗಸ್ಟ್ 4 ಕ್ಕೆ ಬಿಡುಗಡೆ

* ಕೋಮಲ್ ಹಾಸ್ಯದ ಹೊನಲು

* ಮುರುಳಿ ಮಾಸ್ಟರ್ ನಿರ್ದೇಶಕರು

ಕನ್ನಡದ ಸೆನ್ ಸೆಷನಲ್ ಸ್ಟಾರ್ ಕೋಮಲ್ ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ನಮೋ ಭೂತಾತ್ಮ-2’ ಇದೇ ವಾರ ಅಂದರೆ ಆಗಸ್ಟ್ 4 ರಂದು ಬಿಡುಗಡೆ ಕಾಣುತ್ತಿದೆ.

ಈ ಹಿಂದೆ ಸೂಪರ್ ಡೂಪರ್ ಹಿಟ್ ಆಗಿದ್ದ ‘ನಮೋ ಭೂತಾತ್ಮ’ ಚಿತ್ರ ಪ್ರೇಕ್ಷಕರಿಗೆ ಪ್ರತಿ ಹಂತದಲ್ಲಿ ನಗುವಿನ ಕಚಗುಳಿ ಇಟ್ಟು ಆಕರ್ಷಿತವಾಗಿತ್ತು. ಅದರ ಯಶಸ್ಸಿನ ಮುಂದುವರಿಕೆಯ ಭಾಗ ಈಗ ಪ್ರೇಕ್ಷಕರ ಮುಂದೆ ಬರುತ್ತಿದೆ.

ಹಾಗಾಗಿ ‘ನಮೋ ಭೂತಾತ್ಮ-2’ ನಗುವಿನ ಹೊನಲನ್ನೇ ಹರಿಸಲಿದೆ. ಮಾತ್ರವಲ್ಲ; ಹಾರರ್ ಥ್ರಿಲ್ಲರ್ ಅಂಶಗಳ ಜೊತೆ ಪ್ರೇಕ್ಷಕರಿಗೆ ಕಚಗುಳಿ ಇಡಲಿದೆ.

ಅಂದ ಹಾಗೆ ಹೆಸರಾಂತ ನೃತ್ಯ ನಿರ್ದೇಶಕ ಮುರಳಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ಅವರ ಸಂಬಂಧಿ ಸಂತೋಷ್ ಶೇಖರ್ ನಿರ್ಮಾಣ ಮಾಡಿದ್ದಾರೆ.

‘ನಮೋ ಭೂತಾತ್ಮ’ ಮೊದಲ ಭಾಗವನ್ನು ಕೋಮಲ್ ಕುಮಾರ್ ನಿರ್ಮಾಣ ಮಾಡಿದ್ದರು ಮತ್ತು ಮುರಳಿ ಮಾಸ್ಟರ್ ಅದನ್ನು ನಿರ್ದೇಶನ ಮಾಡಿದ್ದರು. ಆ ಚಿತ್ರ ಬಿಡುಗಡೆಯ ಏಳೆಂಟು ವರ್ಷಗಳ ಬಳಿಕ ಅದರ ಮುಂದುವರೆದ ಭಾಗ ಬಿಡುಗಡೆ ಕಾಣುತ್ತಿದೆ.

ಈಚೆಗೆ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದ ನಟ ಧ್ರುವ ಸರ್ಜಾ ಅವರು ‘ನಾನು ಕೋಮಲ್ ಅವರ ಅಭಿಮಾನಿ’ ಅವರ ಅಭಿನಯದ ಎಲ್ಲಾ ಚಿತ್ರಗಳನ್ನು ನೋಡಿರುವೆ. ಮುರಳಿ ಮಾಸ್ಟರ್ ಸಹ ನನ್ನ ಚಿತ್ರಗಳ ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಅವರ ನಿರ್ದೇಶನದ ಈ ಚಿತ್ರ ಸೂಪರ್ ಹಿಟ್ ಆಗಲಿ ಎಂದು ಹಾರೈಸಿದ್ದರು.

ಮೊದಲ ಭಾಗದಲ್ಲಿ ಭಯ ಹುಟ್ಟಿಸುವ ಸನ್ನಿವೇಶಗಳು ಹೆಚ್ಚಾಗಿದ್ದವು. ಆದರೆ ಈ ಚಿತ್ರದಲ್ಲಿ ಹಾಸ್ಯವೇ ತುಂಬಿ ಪ್ರೇಕ್ಷಕರನ್ನು ಪುಳಕಗೊಳಿಸುತ್ತದೆ ಎಂಬುದು ಚಿತ್ರ ತಂಡದ ಮಾಹಿತಿ

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *