ಏಪ್ರಾನ್ ಪ್ರೊಡಕ್ಷನ್ ಸಂಸ್ಥೆ ನಿರ್ಮಿಸಿರುವ ಪ್ರಖ್ಯಾತ ಕಥೆಗಾರ ಕಾ.ತ.ಚಿಕ್ಕಣ್ಣ ಅವರ ಕಥೆಯಾಧಾರಿತ
‘ಕೋಳಿ ಎಸ್ರು’ ಚಿತ್ರವು ಆಗಸ್ಟ್ ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮೆಲ್ಬೋರ್ನ್ ಇಂಡಿಯನ್ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ.
ಚಂಪಾ ಪಿ.ಶೆಟ್ಟಿ ನಿರ್ದೇಶನದ ಈ ಚಿತ್ರದ ಮುಖ್ಯ ಪಾತ್ರದಲ್ಲಿ ಅಕ್ಷತಾ ಪಾಂಡವಪುರ ನಟಿಸಿದ್ದಾರೆ. ಅಲ್ಲದೆ ಅವರು ಅತ್ಯುತ್ತಮ ನಟಿ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದಾರೆ.
ಐಶ್ವರ್ಯ ರೈ, ಆಲಿಯಾ ಭಟ್, ಕಾಜೊಲ್, ಸಾಯಿಪಲ್ಲವಿ, ನೀನಾಗುಪ್ತ, ರಾಣಿಮುಖರ್ಜಿ ಮುಂತಾದ ಬಾಲಿವುಡ್ ನ ಖ್ಯಾತ ನಟಿಯರ ಜೊತೆ ಅಕ್ಷತಾ ಪಾಂಡವಪುರ ನಾಮಿನೇಟ್ ಆಗಿರುವುದು ಕನ್ನಡದ ಹೆಮ್ಮೆಯ ಸಂಗತಿಯಾಗಿದೆ.
ಅಲ್ಲದೆ ಇತ್ತೀಚೆಗೆ ಕೆನಡಾದ ಒಟ್ಟಾವ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಸಹ ‘ಕೋಳಿ ಎಸ್ರು’ ಪ್ರದರ್ಶನಗೊಂಡು ಚಿತ್ರದ ನಿರ್ದೇಶಕಿ ಚಂಪಾಶೆಟ್ಟಿ ಅವರಿಗೆ ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿ ಮತ್ತು ಅಕ್ಷತಾ ಪಾಂಡವಪುರ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ದೊರಕಿಸಿಕೊಟ್ಟಿದೆ.
ಇಲ್ಲಿಯವರೆಗೂ ‘ಕೋಳಿ ಎಸ್ರು’ ಚಿತ್ರವು ಅನೇಕ ಚಿತ್ರೋತ್ಸವಗಳಲ್ಲಿ ಪಾಲ್ಗೊಂಡು ಪ್ರಶಸ್ತಿ ಪಡೆದ ವಿವರ ಹೀಗಿದೆ..
* ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ (ಬೆಂಗಳೂರು)
* ಅಜಂತಾ ಎಲ್ಲೋರ ಅಂತಾರಾಷ್ಟ್ರೀಯ ಚಿತ್ರೋತ್ಸವ (ಔರಂಗಾಬಾದ್)
*ಅಂತಾರಾಷ್ಟ್ರೀಯ ಚಿತ್ರೋತ್ಸವ ತ್ರಿಶೂರ್ (ಕೇರಳ)
* ಅಂತಾರಾಷ್ಟ್ರೀಯ ಚಿತ್ರೋತ್ಸವ ಇರಿಂಜ್ಯಾಲಗುಡ (ಕೇರಳ)
* ನಿಟ್ಟೆ ಅಂತರಾಷ್ಟ್ರೀಯ ಚಿತ್ರೋತ್ಸವ (ಮಂಗಳೂರು)
* ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ (ಅಮೆರಿಕ)
* ಇಂಡೋ ಜರ್ಮನ್ ಫಿಲ್ಮ್ ವೀಕ್ (ಜರ್ಮನಿ)
* ಒಟ್ಟಾವ ಇಂಡಿಯನ್ ಫಿಲ್ಮ್ ಫೆಸ್ಟಿವಲ್ (ಕೆನಡಾ)
* ಮೆಲ್ಬೋರ್ನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ (ಆಸ್ಟ್ರೇಲಿಯಾ)
ಪಡೆದ ಪ್ರಶಸ್ತಿಗಳು..
* ಅತ್ಯುತ್ತಮ ಭಾರತೀಯ ಚಿತ್ರ ‘ಕೋಳಿಎಸ್ರು’ (ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವ )
* ಅತ್ಯುತ್ತಮ ನಿರ್ದೇಶಕಿ, ಚಂಪಾ ಪಿ ಶೆಟ್ಟಿ (ಒಟ್ಟಾವ ಇಂಡಿಯನ್ ಫಿಲ್ಮ್ ಫೆಸ್ಟಿವಲ್)
* ಅತ್ಯುತ್ತಮ ನಟಿ ಅಕ್ಷತಾ ಪಾಂಡವಪುರ (ಒಟ್ಟಾವ ಇಂಡಿಯನ್ ಫಿಲ್ಮ್ ಫೆಸ್ಟಿವಲ್)
* ಅತ್ಯುತ್ತಮ ನಟಿ, ಅಕ್ಷತಾ ಪಾಂಡವಪುರ (ಅಜಂತಾ ಎಲ್ಲೋರ ಅಂತಾರಾಷ್ಟ್ರೀಯ ಚಿತ್ರೋತ್ಸವ)
* ಅತ್ಯುತ್ತಮ ಬಾಲನಟಿ, ತೀರ್ಪುಗಾರರ ವಿಶೇಷ ಪ್ರಶಸ್ತಿ ಅಪೇಕ್ಷಾ ಚೋರನಹಳ್ಳಿ (ಅಜಂತಾ ಎಲ್ಲೋರ ಅಂತಾರಾಷ್ಟ್ರೀಯ ಚಿತ್ರೋತ್ಸವ)