ಟಾಮ್ ಕ್ರೂಸ್ ಅವರ ಮಿಷನ್ ಇಂಪಾಜಿಬಲ್ ಸರಣಿಯ ‘ಮಿಷನ್ ಇಂಪಾಜಿಬಲ್-ರೆಡ್ ರೆಕನಿಂಗ್ ಭಾಗ-1’ ಇದೇ ಜುಲೈ 12 ರಂದು ವಿಶ್ವಾದ್ಯಂತ ಬಿಡುಗಡೆ ಕಾಣುತ್ತಿದೆ.
ಮಿಷನ್ ಇಂಪಾಜಿಬಲ್ ಸರಣಿಯ ‘ಮಿಷನ್ ಇಂಪಾಸಿಬಲ್-ಫಾಲ್ ಔಟ್’ ಚಿತ್ರವು ಕಳೆದ 2018ರಲ್ಲಿ ಬಿಡುಗಡೆಗೊಂಡು ಯಶಸ್ವಿಯಾಗಿತ್ತು.
ಈಗ ಅದೇ ಸರಣಿಯ ‘ಮಿಷನ್ ಇಂಪಾಸಿಬಲ್-ಡೆಡ್ ರೆಕನಿಂಗ್ ಭಾಗ-1’ ಬಿಡುಗಡೆಗೆ ಸಜ್ಜಾಗಿದೆ. ಇದು ಸರಣಿಯ 7ನೇ ಕಂತು ಮತ್ತು ಪ್ಯಾರಮೌಂಟ್ ಪಿಕ್ಚರ‍್ಸ್ ಬ್ಯಾನರ್ ಅಡಿಯಲ್ಲಿ (ವಯಕಾಂ 18 ಸ್ಟುಡಿಯೋ ಅರ್ಪಿಸಿರುವ) ಜುಲೈ 12ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ.
‘ಮಿಷನ್ ಇಂಪಾಜಿಬಲ್’ ಸರಣಿಯ ಚಿತ್ರೀಕರಣದಲ್ಲಿ ನಾಯಕ ಟಾಮ್‌ಕ್ರೂಸ್ ಅಪಾಯಕಾರಿ ಸಾಹಸ ದೃಶ್ಯಗಳಲ್ಲಿ ನಟಿಸಿದ್ದರು ಎಂಬುದು ಇಲ್ಲಿ ಸ್ಮರಣಾರ್ಹ ಎಂಬುದನ್ನು ಎಂಐ6 ಏಜೆಂಟ್ ಪಾತ್ರ ನಿರ್ವಹಿಸಿರುವ ರೆಬೆಕಾ ಫರ್ಗುಸನ್ ನೆನಪು ಮಾಡಿಕೊಂಡಿದ್ದು ವಿಶೇಷ.
ಅದರಲ್ಲಿಯೂ ಮೋಟಾರ್ ಬೈಕ್ ಬೇಸ್ ಜಂಪಿಂಗ್ ಸಾಹಸಗಳಿಗಾಗಿ ವಿಶೇಷವಾದ ಸಂಯೋಜನೆ ಮಾಡಲಾಗಿತ್ತು. ಟಾಮ್‌ಕ್ರೂಸ್ ಅವರೊಂದಿಗೆ ಸತತ ಹದಿನಾರು ವರ್ಷ ಕೆಲಸ ಮಾಡಿದ್ದು ಖುಷಿ ನೀಡಿದೆ. ನಮ್ಮಿಬ್ಬರ ಮಿಲನ ಒಂದು ಡಜನ್ ಚಿತ್ರಗಳಿಗೆ ಸಮಾನ. ಅವರನ್ನು ಬದಲಾವಣೆಯ ಏಜೆಂಟ್ ಆಗಿ ನೋಡಬಯಸುತ್ತೇನೆ ಎಂದು ಹೇಳಿದ್ದು ನಿರ್ದೇಶಕ ಕ್ರಿಸ್ಟೋಫರ್ ಮೆಕ್ವಾರಿ.
ಅದರಂತೆ ಎಸೈ ಮೊರೇಲ್ಡ್ ಖಳ ನಟನಾಗಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು ಎಂದು ಅವರು ನೆನಪಿಸಿಕೊಂಡಿದ್ದಾರೆ.
ತಾರಾಗಣದಲ್ಲಿ ಹಲೇ ಅತ್ವೆಲ್, ವಿಂಗ್ ರಾಂಸ್, ಸಿಮೋನ್‌ಪೆಗ್, ವೆನೆಸ್ಸಾ ಕಿರ್ಬಿ, ಹೆನ್ರಿ ಕೇಜರ್‌ನಿ ಮುಂತಾದವರು ನಟಿಸಿದ್ದಾರೆ. ಸಂಗೀತ ಲೋರ್ನ್ ಬಲ್ಫೆ, ಛಾಯಾಗ್ರಹಣ ಫ್ರೆಸರ್‌ಟೆಗ್ರಾಟ್, ಸಂಕಲನ ಎಡ್ಡಿ ಹೆಮಿಲ್‌ಟನ್ ಅವರದಾಗಿದೆ ಎಂಬ ಮಾಹಿತಿಗಳು ಬಂದವು.