ಪೊಲೀಸ್ ತನಿಖೆಯ ವೇಳೆ ಬರುವ ಮಹಜರ್ ಎಂಬುದು ಇಲ್ಲಿನ ಕಥಾವಸ್ತು. ಚಿತ್ರದ ಹೆಸರೂ ಮಾಜರ್. ಮಹಿಳೆಯರ ಮೇಲೆ ಅತ್ಯಾಚಾರವೆಸಗಿ ವಿಕೃತ ಅಟ್ಟಹಾಸ ಮೆರೆಯುವವರ ಸುತ್ತ ಇರುವ ಕಥೆ..
ಹಲವಾರು ಚಿತ್ರಗಳಲ್ಲಿ ಹಾಡುಗಳಿಗೆ ಗೀತರಚನೆ ಮಾಡಿ ಹೆಸರಾಗಿರುವ ಲೋಕಲ್ ಲೋಕಿ ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ.
ಡಾ.ಮುರುಗನಂದನ್ ಇದರ ನಿರ್ಮಾಪಕರು.
ಈಚೆಗೆ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಗೋಪಾಲಯ್ಯ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಇದೇ ವೇಳೆ ಹಾಡಿಗಳನ್ನು ಸಹ ಪ್ರದರ್ಶನ ಮಾಡಲಾಯಿತು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಹಾಗೂ ಇತರ ಗಣ್ಯರು ಸಹ ಚಿತ್ರತಂಡಕ್ಕೆ ಶುಭ ಕೋರಿದರು.
ಇದೊಂದು ದೌರ್ಜನ್ಯದ ಕಥೆ. ಮಹಜರ್ ಎಂಬುದು ಆಡು ಭಾಷೆಯಲ್ಲಿ ಮಾಜರ್ ಆಗಿದೆ. ಈಗ ಹಾಡು ಮತ್ತು ಟ್ರೈಲರ್ ಬಿಡುಗಡೆ ಕಂಡಿದೆ. ಸದ್ಯವೇ ಚಿತ್ರವೂ ಬಿಡುಗಡೆ ಕಾಣಲಿದೆ ಎಂದರು ನಿರ್ದೇಶಕ ಲೋಕಲ್ ಲೋಕಿ.
ನಟ ಶ್ರೀನಗರ ಕಿಟ್ಟಿ ಚಿತ್ರತಂಡಕ್ಕೆ ಶುಭ ಕೋರಿದರು. ಸಂಗೀತ ನಿರ್ದೇಶಕ ಎ.ಟಿ.ರವೀಶ್ ಹಾಡುಗಳ ಬಗ್ಗೆ ವಿವರ ನೀಡಿದರು. ನಟ ಅರ್ಜುನ್, ಉಗ್ರಂ ರವಿ, ನೃತ್ಯಪಟು ರಂಜಿತ್, ನೃತ್ಯ ನಿರ್ದೇಶಕಿ ಗೀತಾ ಸೈ ಹಾಗೂ ಇತರರು ಮಾತನಾಡಿದರು.