ಪ್ರಿಯಾಮಣಿ ಮುಖ್ಯ ಪಾತ್ರದಲ್ಲಿರುವ ಜನ ಮೆಚ್ಚುಗೆ ಪಡೆದ ಚಿತ್ರ Dr.56 ಈಗ ಮತ್ತೆ ಸುದ್ದಿಯಲ್ಲಿದೆ.
ಈ ಚಿತ್ರವು ಚಿತ್ರಸಂತೆ ಸಿನಿಮಾ ಪತ್ರಿಕೆ ಹಾಗೂ ಸಂಸ್ಥೆ ನೀಡುವ ‘ಚಿತ್ರಸಂತೆ’ ಪ್ರಶಸ್ತಿಗಳನ್ನು ಈಗ ಮುಡಿಗೇರಿಸಿಕೊಂಡಿದೆ.
ಈ ಚಿತ್ರದಲ್ಲಿ ನಟಿಸಿದ್ದ ಪ್ರವೀಣ್ ರೆಡ್ಡಿ (ಪಿಆರ್) ಅವರಿಗೆ ಅತ್ಯುತ್ತಮ ನಟ (ಮೊದಲ ಚಿತ್ರ) ಹಾಗೂ ಸಾಮಾಜಿಕ ಕಳಕಳಿ ಹೊಂದಿರುವ ಅತ್ಯುತ್ತಮ ಚಿತ್ರ ಎಂಬ ಎರಡು ವಿಭಾಗಗಳಲ್ಲಿ ಪ್ರಶಸ್ತಿ ಸಂದಿದೆ.
Dr.56 ಮೆಡಿಕಲ್ ಮಾಫಿಯಾ ಕುರಿತ ಥ್ರಿಲ್ಲರ್ ಚಿತ್ರವಾಗಿದ್ದು, ರಾಜೇಶ್ ಆನಂದ ಲೀಲಾ ಇದರ ನಿರ್ದೇಶಕರು. ಹರಿ ಹರ ಪಿಕ್ಚರ್ಸ್ ಹಾಗೂ ಶ್ರೀ ಲಕ್ಷ್ಮಿ ಜ್ಯೋತಿ ಕ್ರಿಯೇಷನ್ಸ್ ಮೂಲಕ ಬಿಡುಗಡೆ ಕಂಡಿತ್ತು.
ಪ್ರಿಯಾಮಣಿ, ಪ್ರವೀಣ್ ರೆಡ್ಡಿ, ರಾಜ್ ದೀಪಕ್ ಶೆಟ್ಟಿ ಹಾಗೂ ರಮೇಶ್ ಭಟ್ ಈ ಚಿತ್ರದ ಪ್ರಮುಖ ಭೂಮಿಕೆಯಲ್ಲಿದ್ದರು.
ಕನ್ನಡ ಹಾಗೂ ತಮಿಳು ಭಾಷೆಗಳಲ್ಲಿ ಕಳೆದ ಡಿಸೆಂಬರ್ ನಲ್ಲಿ ಬಿಡುಗಡೆಗೊಂಡಿದ್ದ ಚಿತ್ರವು ಜನಮನ ಗೆದ್ದಿತ್ತು.