Snehapriya.com

June 8, 2025

ಶಿವಾಜಿ ಸುರತ್ಕಲ್ ಹಾಡು ಟ್ವಿಂಕಲ್

Social Share :


ಚಿತ್ರ ಏಪ್ರಿಲ್ 14ಕ್ಕೆ ಬಿಡುಗಡೆ

ರಮೇಶ್ ಅರವಿಂದ್ ಮುಖ್ಯ ಭೂಮಿಕೆಯಲ್ಲಿರುವ ‘ಶಿವಾಜಿ ಸುರತ್ಕಲ್ 2’ ಬಿಡುಗಡೆಗೆ ಸಿದ್ಧವಾಗಿದ್ದು, ಮುಂದಿನ ತಿಂಗಳು ಅಂದರೆ ಏಪ್ರಿಲ್ 14 ರಂದು ರಾಜ್ಯ ವ್ಯಾಪಿ ಬಿಡುಗಡೆ ಕಾಣುತ್ತಿದೆ.

ರೇಖಾ ಕೆ.ಎನ್ ಹಾಗೂ ಅನೂಪ್ ಗೌಡ ನಿರ್ಮಾಣ ಹಾಗೂ ಆಕಾಶ್ ಶ್ರೀವತ್ಸ ನಿರ್ದೇಶನವಿರುವ ‘ಶಿವಾಜಿ ಸುರತ್ಕಲ್ 2’ ಚಿತ್ರದ “ಟ್ವಿಂಕಲ್” ಹಾಡು ಆನಂದ್ ಆಡಿಯೋ ಮೂಲಕ ಈಚೆಗೆ ಬಿಡುಗಡೆ ಕಂಡಿತು.

ಆಕಾಶ್ ಶ್ರೀವತ್ಸ ಬರೆದಿರುವ ಈ ಹಾಡಿಗೆ ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಇಶಾ ಸುಚಿ ಹಾಗೂ ಜೂಡಾ ಸ್ಯಾಂಡಿ ಹಾಡಿದ್ದಾರೆ. ಈ ಹಾಡಿಗೆ ಹೆಜ್ಜೆ ಹಾಕಿರುವುದು ಸಂಗೀತ ಶೃಂಗೇರಿ.

ರಮೇಶ್ ಅರವಿಂದ ಶಿವಾಜಿ ಪಾತ್ರವನ್ನು ನಿರ್ವಹಿಸುತ್ತಿದ್ದು, ಅದು ವಕೀಲರ ಪಾತ್ರವಾಗಿದೆ. ಈ ಮೊದಲಿನ ಶಿವಾಜಿ ಸುರತ್ಕಲ್ ಚಿತ್ರದಲ್ಲಿ ಶಿವಾಜಿ ಕೇಸ್ ತೆಗೆದುಕೊಂಡರೇ ಜೈಲಿಗೆ ಅಥವಾ ಸ್ಮಶಾನಕ್ಕೆ ಎಂಬುದು ಪ್ರಸಿದ್ಧಿಯಾಗಿತ್ತು. ಈಗ ಭಾಗ 2 ರಲ್ಲಿ ಶಿವಾಜಿ ಯಾವ ಸ್ವರೂಪದ ಪ್ರಕರಣಗಳನ್ನು ಬೆನ್ನು ಹತ್ತುವನು ಎಂಬುದನ್ನು ನೋಡಬಹುದು ಎಂದರು ರಮೇಶ್ ಅರವಿಂದ್.

ಇಲ್ಲಿ ಕಲಾವಿದರು ಮತ್ತು ತಂತ್ರಜ್ಞರು ಬಹಳ ಶ್ರಮವಹಿಸಿದ್ದಾರೆ. ಹಾಗಾಗಿ ಬಿಡುಗಡೆಗೊಂಡಿರುವ ಈ ಹಾಡಿನಷ್ಟೇ ಚಿತ್ರವೂ ಚೆನ್ನಾಗಿದೆ ಎಂದೂ ಹೇಳಿದರು.

ಚಿತ್ರದ ಕಥೆ ಹೇಳುವುದಿಲ್ಲ; ಅದು ಕುತೂಹಲವಾಗಿಯೇ ಉಳಿಯಬೇಕು ಎಂದರು ನಿರ್ದೇಶಕ ಆಕಾಶ್ ಶ್ರೀವತ್ಸ.
ರಮೇಶ್ ಅರವಿಂದ್ ಅವರ ಪಾತ್ರವನ್ನು ನೋಡಿದಾಗ ‘ಅಮೃತ ವರ್ಷಿಣಿ’ ನೆನಪಾಯಿತು ಎಂದವರು ನಿರ್ಮಾಪಕ ಅನೂಪ್ ಗೌಡ. ಚಿತ್ರದಲ್ಲಿ ಐದು ಹಾಡುಗಳಿವೆ ಎಂಬ ಮಾಹಿತಿ ಕೊಟ್ಟರು ಸಂಗೀತ ನಿರ್ದೇಶಕ ಜೂಡಾ ಸ್ಯಾಂಡಿ.

ನಟಿಯರಾದ ರಾಧಿಕಾ ನಾರಾಯಣ್, ಮೇಘನಾ ಗಾಂವ್ಕರ್, ಸಂಗೀತ ಶೃಂಗೇರಿ, ನಟರಾದ ರಘು ರಮಣಕೊಪ್ಪ, ವಿನಾಯಕ್ ಜೋಶಿ ತಮ್ಮ ಪಾತ್ರಗಳ ಬಗ್ಗೆ ಹೇಳಿಕೊಂಡರು.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *