Snehapriya.com

June 9, 2025

ಕಬ್ಜ ಶಿವರಾಜ್ ಕುಮಾರ್ ಪೋಸ್ಟರ್ ಇಲ್ಲಿವರೆಗಿನ ಕುತೂಹಲಕ್ಕೆ ತೆರೆ..

Social Share :


* ಮಾರ್ಚ್ 4ಕ್ಕೆ ಟ್ರೈಲರ್ ಬಿಡುಗಡೆ

* ಪೋಸ್ಟರ್ ನಲ್ಲಿ ಕಾಣಿಸಿಕೊಂಡರು ಶಿವಣ್ಣ

* ರಂಗೇರಿದ ಕಬ್ಜ ಸಿನಿಮಾ ಪ್ರಚಾರ

ಬಹು ನಿರೀಕ್ಷಿತ ‘ಕಬ್ಜ’ ಚಿತ್ರದ ಟ್ರೈಲರ್ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಇದೇ ವೇಳೆ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಇರುವ ಪೋಸ್ಟರ್ ಬಿಡುಗಡೆಗೊಂಡಿದೆ.

ಇಂಡಿಯನ್ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಅವರ ಜೊತೆ ಶಿವಣ್ಣ ಇವರು ಪೋಸ್ಟರ್ ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿದೆ.

ನಿರ್ದೇಶಕ ಹಾಗೂ ನಿರ್ಮಾಪಕ ಆರ್.ಚಂದ್ರು ಸಿನಿಮಾದಲ್ಲಿ ಶಿವಣ್ಣ ಇದ್ದಾರೆ ಎಂಬ ಗುಟ್ಟು ಬಿಟ್ಟುಕೊಟ್ಟಿದ್ದರು. ಆದರೆ ಅದರ ಬಗ್ಗೆ ಹೆಚ್ಚಿನ ವಿವರಗಳು ದೊರಕದೇ ಈ ವಿಷಯದ ಬಗ್ಗೆ ತೀವ್ರ ಕುತೂಹಲ ಹುಟ್ಟು ಹಾಕಿದ್ದರು. ಇದೀಗ ಪೋಸ್ಟರ್ ಬಿಡುಗಡೆಯ ಮೂಲಕ ಕುತೂಹಲಕ್ಕೆ ತೆರೆ ಎಳೆದಿದ್ದಾರೆ ಆರ್.ಚಂದ್ರು.

ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ಆರ್ ಚಂದ್ರು ನಿರ್ದೇಶನದ ಪ್ಯಾನ್ ಇಂಡಿಯಾ ಚಿತ್ರ ‘ಕಬ್ಜ’ದ ಹಾಡುಗಳು ಹಾಗೂ ಟೀಸರ್ ಈಗಾಗಲೇ ಜನಪ್ರಿಯವಾಗಿವೆ.

ಈ ಹಿನ್ನೆಲೆಯಲ್ಲಿ ಚಿತ್ರದ ಟ್ರೈಲರ್ ಗೆ ಪ್ರಪಂಚದಾದ್ಯಂತ ತೀವ್ರ ಕುತೂಹಲ ಉಂಟಾಗಿತ್ತು. ಇದೀಗ ಮಾರ್ಚ್ 4ರ ಸಂಜೆ 5 ಗಂಟೆಗೆ ಬಿಡುಗಡೆ ಕಾಣುತ್ತಿದೆ. ಆ ಮೂಲಕ ಅಭಿಮಾನಿಗಳ ಕುತೂಹಲ ತಣಿಸುತ್ತಿದೆ.

ಮಾರ್ಚ್ 4ರ ಸಂಜೆ ಆನಂದ್ ಆಡಿಯೋ ಮೂಲಕ ಎಲ್ಲಾ ಭಾಷೆಗಳಲ್ಲಿಯೂ ಈ ಟ್ರೈಲರ್ ಬಿಡುಗಡೆ ಕಾಣಲಿದೆ.

ಚಿತ್ರದ ಬಾಲಿವುಡ್ ಹಕ್ಕುಗಳನ್ನು ಆನಂದ್ ಪಂಡಿತ್ ಸಂಸ್ಥೆ ಪಡೆದಿದ್ದು, ಮುಂಬೈನಲ್ಲಿ ಸುಮಾರ್ ಎರಡು ಸಾವಿರ ಪರದೆಗಳಲ್ಲಿ ಈ ಚಿತ್ರ ಬಿಡುಗಡೆ ಕಾಣುವುದೆಂದು ಹೇಳಲಾಗಿದೆ.

ಕರ್ನಾಟಕದಲ್ಲಿ ಅತಿ ಹೆಚ್ಚಿನ ಬೆಲೆಗೆ ಚಿತ್ರವನ್ನು ಕೊಂಡುಕೊಳ್ಳಲು ದೊಡ್ಡ ವಿತರಣಾ ಸಂಸ್ಥೆ ಮುಂದಾಗಿದ್ದು, ಮಾತುಕತೆ ಸಹ ಮುಂದುವರೆದಿದೆ.

ಈ ಮಧ್ಯ ಈಚೆಗೆ ಶಿಡ್ಲಘಟ್ಟದ ಬೃಹತ್ ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡ ಹಾಡು ‘ಚುಮು ಚುಮು ಚಳಿಯಲಿ..’ ಹಾಡು ಕೇವಲ ಎರಡು ದಿನಕ್ಕೆ 12 ಮಿಲಿಯನ್ ಪ್ರೇಕ್ಷಕರನ್ನು ತಲುಪಿ ಮುಂದುವರೆದಿದೆ..

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *