ಇದೊಂದು ಯೋಧನನೊಬ್ಬನ ಮಹಾತ್ಯಾಗದ ಕಥೆ. ಸೈನ್ಯದಲ್ಲಿ ದುಡಿಯುವಾಗ ವಿಚ್ಛಿದ್ರಕಾರಕ ಶಕ್ತಿಗಳನ್ನು ಎದುರಿಸುವ ಹಾದಿಯಲ್ಲಿ ನಡೆಯುವ ಘಟನಾವಳಿಗಳು ಸೇರಿವೆ..
ಮುಖ್ಯವಾಗಿ ಕಾಶ್ಮೀರದಲ್ಲಿ ಆರ್ಟಿಕಲ್ 370 ತೆಗೆಯುವ ಮುನ್ನ ಮತ್ತು ಆನಂತರದ ಪರಿಸ್ಥಿತಿ ಏನಿದೆ ಎಂಬುದನ್ನು ಬಿಂಬಿಸುವ ಕನ್ನಡದ ಚಿತ್ರ.
ಹೆಸರು ಆರ್ಟಿಕಲ್ 370 (ವಿಧಿ 370)
ಕೆ.ಶಂಕರ್ ನಿರ್ದೇಶನ ಮಾಡಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಸುಪ್ರೀಂ ಹೀರೋ ಶಶಿಕುಮಾರ್ ಹಾಗೂ ಶೃತಿ ನಟಿಸಿದ್ದಾರೆ. ಜೊತೆಗೆ ರಮೇಶ್ ಭಟ್, ದೊಡ್ಡ ರಂಗೇಗೌಡ, ಗಣೇಶ್ ರಾವ್ ಕೇಸರ್ ಕರ್ ಮೊದಲಾದ ಕಲಾವಿದರಿದ್ದಾರೆ.
ಇದು ಗಡಿ ಕಾಯುವ ಯೋಧನ ಕಥೆ ಎಂಬುದು ಕೆ.ಶಂಕರ್ ನೀಡಿದ ವಿವರ. ಶಶಿಕುಮಾರ್ ವೀರಯೋಧನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಪತ್ನಿಯಾಗಿ ಶೃತಿ ಅಭಿನಯಿಸಿದ್ದಾರೆ. ಭರತ್ ಗೌಡ ಈ ಚಿತ್ರದ ನಿರ್ಮಾಪಕರು.
ಕಾಶ್ಮೀರದಲ್ಲಿನ ವಿಷಮ ಪರಿಸ್ಥಿತಿಯ ಚಿತ್ರಣವೂ ಚಿತ್ರದಲ್ಲಿದೆ. ಕಾಶ್ಮೀರಿ ಪಂಡಿತರು ಎದುರಿಸಿ ಸಂಕಷ್ಟಗಳನ್ನೂ ವಿವರಿಸಲಾಗಿದೆ. ಮೂಲವಾಗಿ ಕನ್ನಡದ ನೆಲದ ಯೋಧ ದೇಶಕ್ಕಾಗಿ ಹೋರಾಡುವ ಕಥೆ ಇದು.
ಕಾಶ್ಮೀರ ಹಾಗೂ ಮಡಿಕೇರಿ, ಚಿಕ್ಕಮಗಳೂರು ಮೊದಲಾದ ಕಡೆ ಚಿತ್ರೀಕರಣ ನಡೆದಿದ್ದು, ರವಿ ಛಾಯಾಗ್ರಹಣ, ವಿನು ಮನಸ್ಸು ಸಂಗೀತ, ಸಂಜೀವ ರೆಡ್ಡಿ ಸಂಕಲನ, ವೇಲು ಸಾಹಸ ಚಿತ್ರಕ್ಕಿದೆ.