ಬಳ್ಳಾರಿ ದರ್ಬಾರ್ ಹಾಗೂ ಓ ಮೈ ಲವ್ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಸ್ಮೈಲ್ ಶ್ರೀನು ಈಗ ಮತ್ತೊಂದು ಚಿತ್ರವನ್ನು ಸದ್ದಿಲ್ಲದೆ ಮಾಡಿ ಮುಗಿಸಿದ್ದು, ಆ ಚಿತ್ರವೀಗ ತೆರೆ ಕಾಣುತ್ತಿದೆ.
ಅದೇ 18ರಿಂದ 25..!
ಯುವ ಸಮೂಹದ ನೆಲೆಯಲ್ಲಿ ಈ ಚಿತ್ರವನ್ನು ನಿರೂಪಿಸಲಾಗಿದೆ. ಇದೇ ಶುಕ್ರವಾರ ಫೆ.10 ರಂದು ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ನಿರ್ದೇಶಕ ಸ್ಮೈಲ್ ಶ್ರೀನು ಅವರೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ಕೂಡಾ ಬರೆದಿದ್ದಾರೆ. ಸ್ಮೈಲ್ ಜೋಹರ್ ಟಾಕೀಸ್ ಅಡಿಯಲ್ಲಿ 18ರಿಂದ 25 ಸಿನಿಮಾ ತಯಾರಾಗಿದೆ.
ಹೊಸ ಪರಿಚಯದ ಅಭಿ ರಾಮ್, ಋಷಿ ತೇಜ, ಅಖಿಲ, ವಿದ್ಯಾಶ್ರೀ ಮುಖ್ಯ ಪಾತ್ರ ವರ್ಗದಲ್ಲಿ ಇದ್ದಾರೆ. ರಾಕ್‍ಲೈನ್ ಸುಧಾಕರ್, ಫಾರೂಖ್ ಖಾನ್, ನಾಗೇಶ್ವರರಾವ್, ಉದಯ ಭಾಸ್ಕರ್, ರವಿರಾಮ್ , ಪೊಲ ಶ್ರೀನಿವಾಸಬಾಬು, ಭಾಗ್ಯಶ್ರೀ ಹಾಗೂ ಇತರರು ಪ್ರಮುಖ ತಾರಾಗಣದಲ್ಲಿ ನಟಿಸಿದ್ದಾರೆ.
ಈ ಚಿತ್ರದ ಹಾಡುಗಳಿಗೆ ಚರಣ್ ಅರ್ಜುನ್ ಸಂಗೀತವಿದೆ, ಶಿವ ಕೆ.ನಾಯ್ಡು ಛಾಯಾಗ್ರಹಣ, ವೈಲೆನ್ಸ್ ವೇಲು ಸಾಹಸ, ಚಿರಂಜೀವಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.