Snehapriya.com

June 6, 2025

ಪಾಲಾರ್ ನೈಜ ಘಟನೆಗಳ ಚಿತ್ರಣ

Social Share :

ಇದೊಂದು ನೈಜ ಘಟನೆಗಳನ್ನು ಬಿಂಬಿಸುವ ಚಿತ್ರ. ಕೋಲಾರ, ದೇವನಹಳ್ಳಿ ಸುತ್ತಮುತ್ತ ಶೋಷಿತ ವರ್ಗದ ಮೇಲೆ ನಡೆದ ದೌರ್ಜನ್ಯದ ಕಥೆ..

ಅದೇ ಪಾಲಾರ್..!

ನೈಜ ಘಟನೆಗಳನ್ನು ಆಧರಿಸಿ ಮಾಡಲಾದ ಚಿತ್ರವನ್ನು ಜೀವಾ ನವೀನ್ ನಿರ್ದೇಶನ ಮಾಡಿದ್ದು, ಚಿತ್ರವು ಇದೇ 24 ರಂದು ತೆರೆ ಕಾಣುತ್ತಿದೆ. ಸತ್ಯ ಸಿನಿ ಡಿಸ್ಟ್ರಿಬ್ಯೂಟರ್ಸ್ ಮೂಲಕ ಮಂಜುನಾಥ್ ಬಿಡುಗಡೆ ಮಾಡುತ್ತಿದ್ದಾರೆ.

ಇದೊಂದು ಮಹಿಳಾ ಪ್ರಧಾನವಾಗಿರುವ ಸಂಘರ್ಷದ ಮತ್ತು ಹೋರಾಟದ ಕಥನ. ಹಾಗಾಗಿ ಇದು ಕಥೆಯಾಧಾರಿತ ಚಿತ್ರ ಎಂಬ ವಿವರ ಕೊಟ್ಟರು ನಿರ್ದೇಶಕರು.

ತೆಲುಗಿನ ಸಿನಿಮಾಬಂಡಿ ನಟಿ ಹಾಗೂ ಗಾಯಕಿ ವೈ.ಜಿ.ಉಮಾ ಕೋಲಾರ ಮುಖ್ಯಪಾತ್ರದಲ್ಲಿ ನಟಿಸಿದ್ದು, ಅವರ ಜೊತೆ ತಿಲಕ್‌ರಾಜ್ ಅಭಿನಯಿಸಿದ್ದಾರೆ. ಜೊತೆಗೆ ಚಿತ್ರದಲ್ಲಿ ಸುಮಾರು ನೂರಕ್ಕೂ ಹೆಚ್ಚು ಕಲಾವಿದರ ಸಮಾಗಮವಿದೆ.

ರೆಹಾನ್ ಛಾಯಾಗ್ರಹಣ, ವಲಿ ಕುಲಾಯಿಸ್ ಸಂಕಲನ, ಸುಬ್ರಮಣ್ಯ ಆಚಾರ್ಯ ಸಂಗೀತವಿದೆ.

ಪಾಲಾರ್ ಎಂಬ ಕಾಲ್ಪನಿಕ ಹಳ್ಳಿಯಲ್ಲಿ ನಡೆಯುವ ಕಥೆ ಇದು. ಬಾಗೇಪಲ್ಲಿ, ಕೋಲಾರ, ದೇವನಹಳ್ಳಿ, ಚಿಕ್ಕಾಬಳ್ಳಾಪುರ ಸುತ್ತಮುತ್ತ ಚಿತ್ರೀಕರಣ ನಡೆದಿದೆ.

ಸೌನವಿ ಕ್ರಿಯೇಷನ್ ಮತ್ತು ಹೆಲೋ ಗ್ಲೋಬಲ್ ಬ್ಯಾನರ್ ಅಡಿಯಲ್ಲಿ ಕೆ.ಆರ್. ಸೌಜನ್ಯ, ಸೌಂದರ್ಯ ಕೆ.ಆರ್ ಮತ್ತು ನವೀನ್‌ಕುಮಾರ್ ಬಾಬು ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *