Snehapriya.com

June 6, 2025

ಮಾ.17 ಪುನೀತ್ ರಾಜ್‍ಕುಮಾರ್ ಹುಟ್ಟುಹಬ್ಬಕ್ಕೆ ಆರ್.ಚಂದ್ರು ಕಬ್ಜ

Social Share :

ಕನ್ನಡದ ಜನಪ್ರಿಯ ನಿರ್ದೇಶಕ ಆರ್.ಚಂದ್ರು ನಿರ್ಮಾಣ ಹಾಗೂ ನಿರ್ದೇಶನದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ‘ಕಬ್ಜ’ ಮಾರ್ಚ್ 17 ಅಂದರೆ ಪುನೀತ್ ರಾಜ್‍ಕುಮಾರ್ ಅವರ ಹುಟ್ಟುಹಬ್ಬದ ದಿನದಂದು ಬಿಡುಗಡೆ ಕಾಣುತ್ತಿದೆ.

ಆರ್.ಚಂದ್ರು ಕನಸಿನ ಚಿತ್ರ ಹಾಗೂ ರಿಯಾಲ್ ಸ್ಟಾರ್ ಉಪೇಂದ್ರ ಅತ್ಯಂತ ಸ್ಟೈಲೀಶ್ ಆಗಿ ಕಾಣಿಸಿಕೊಂಡಿರುವ ಮತ್ತು ಸ್ಯಾಂಡಲ್ ವುಡ್ ನ ಪ್ರಮುಖ ಸ್ಟಾರ್ ಗಳು ನಟಿಸಿರುವ ‘ಕಬ್ಜ’ ಚಿತ್ರ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಇದೇ ವೇಳೆ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದೆ.

ಇಂಡಿಯನ್ ರಿಯಲ್ ಸ್ಟಾರ್ ಎಂದೇ ಖ್ಯಾತಿ ಪಡೆಯುತ್ತಿರುವ ಉಪೇಂದ್ರ ಅವರ ವಿಭಿನ್ನ ಗೆಟ್ ಅಪ್ ಗಳು ಅಭಿಮಾನಿಗಳಲ್ಲಿ ರೋಮಾಂಚನ ಉಂಟು ಮಾಡಿದ್ದರಿಂದ ಈ ಚಿತ್ರದ ಬಗ್ಗೆ ಅತೀವ ಕುತೂಹಲ ಉಂಟಾಗಿದೆ.

ಶ್ರೀ ಸಿದ್ದೇಶ್ವರ ಎಂಟರ್ಪ್ರೈಸಸ್ ಸಂಸ್ಥೆ ಅದ್ದೂರಿ ವೆಚ್ಚದಲ್ಲಿ ನಿರ್ಮಿಸಿರುವ ಈ ಚಿತ್ರ ಅಭಿಮಾನಿಗಳ ಎಲ್ಲಾ ಆಶಯಗಳನ್ನು ಪೂರೈಸಲಿದೆ ಎಂಬುದು ನಿರ್ದೇಶಕ ಆರ್.ಚಂದ್ರು ಅವರ ಆಶಯ.

ಕಬ್ಜ ಚಿತ್ರದ ಬಗ್ಗೆ ಪ್ರಪಂಚದಾದ್ಯಂತ ಕುತೂಹಲ ಹೆಚ್ಚಾಗಿದೆ. ಏಕೆಂದರೆ ‌ಇದು 80ರ ದಶಕದ ಡಾನ್ ನ ಕಥೆ. ಅಲ್ಲದೇ ಮೊನ್ನೆ ನಡೆದ ಐಎಂಡಿಬಿ 2023ರ ನಿರೀಕ್ಷಿತ ಸಿನಿಮಾಗಳ ಸರ್ವೆ ಪಟ್ಟಿಯಲ್ಲಿ ‘ಕಬ್ಜ’ ಸಿನಿಮಾ ಸ್ಥಾನ ಪಡೆದಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.

ಕಳೆದ ಮೂರ್ನಾಲ್ಕು ವರ್ಷಗಳಿಂದ ಸಾಲು ಸಾಲು ಯಶಸ್ವಿ ಸಿನಿಮಾಗಳ ಮೂಲಕ ಸ್ಯಾಂಡಲ್ ವುಡ್ ಮತ್ತಷ್ಟು ಎತ್ತರಕ್ಕೆ ಹೋಗಿದೆ. ಕೆಜಿಎಫ್ ಸರಣಿ ಚಿತ್ರಗಳು ‘777 ಚಾರ್ಲಿ’ ಹಾಗೂ ‘ಕಾಂತಾರ ಯಶಸ್ಸಿನ ಬಳಿಕ ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸಲು ಈ ವರ್ಷ ಕಬ್ಜ ಸಜ್ಜಾಗಿದೆ ಎಂಬುದು ಅಭಿಮಾನಿಗಳ ಮಾತು.

ಅತ್ಯಂತ ನವ ನವೀನ ಆಶಯಗಳ ಜೊತೆಗೆ ಜಾಗತಿಕ ಸಿನಿಮಾ ಪ್ರಿಯರ ಗಮನ ಸೆಳೆಯುವಲ್ಲಿ ಇದು ಯಶಸ್ವಿ ಕಾಣುತ್ತದೆ ಎಂಬುದು ನಿರ್ದೇಶಕರ ಗಟ್ಟಿಯಾದ ನಂಬಿಕೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *