Snehapriya.com

June 6, 2025

ಸ್ಟೈಲೀಶ್ ಪ್ಯಾನ್ ಇಂಡಿಯಾ ಚಿತ್ರ ಕಬ್ಜ ಬಿಡುಗಡೆ ಸದ್ಯವೇ ಪ್ರಕಟಣೆ

Social Share :


ಕನ್ನಡದ ಜನಪ್ರಿಯ ನಿರ್ದೇಶಕ ಆರ್.ಚಂದ್ರು ಕನಸಿನ ಚಿತ್ರ ಹಾಗೂ ರಿಯಾಲ್ ಸ್ಟಾರ್ ಉಪೇಂದ್ರ ಅತ್ಯಂತ ಸ್ಟೈಲೀಶ್ ಆಗಿ ಕಾಣಿಸಿಕೊಂಡಿರುವ ಮತ್ತು ಸ್ಯಾಂಡಲ್ ವುಡ್ ನ ಪ್ರಮುಖ ಸ್ಟಾರ್ ಗಳು ನಟಿಸಿರುವ ‘ಕಬ್ಜ’ ಚಿತ್ರ ಅಭಿಮಾನಿಗಳ ಕುತೂಹಲ, ಕಾತರಗಳನ್ನು ತಣಿಸಲಿದೆ..

ಸದ್ಯವೇ ‘ಕಬ್ಜ’ ಬಿಡುಗಡೆಯ ದಿನಾಂಕವನ್ನು ಘೋಷಣೆ ಮಾಡಿಕೊಳ್ಳಲಿದೆ. ನಿರ್ಮಾಪಕ ಹಾಗೂ ನಿರ್ದೇಶಕ ಆರ್.ಚಂದ್ರು ಸಿನಿಮಾ ಪ್ರೇಮಿಗಳ ಆಶಯಕ್ಕೆ ಅನುಗುಣವಾಗಿ ನಿರ್ಮಿಸಿರುವ ಈ ಚಿತ್ರ ಆರಂಭದ ದಿನಗಳಿಂದಲೇ ಪ್ಯಾನ್ ಇಂಡಿಯಾ ಅಭಿಮಾನಿಗಳ ಕುತೂಹಲ ಕೆರಳಿಸಿತ್ತು.

ಇಂಡಿಯನ್ ರಿಯಲ್ ಸ್ಟಾರ್ ಎಂದೇ ಖ್ಯಾತಿ ಪಡೆಯುತ್ತಿರುವ ಉಪೇಂದ್ರ ಅವರ ವಿಭಿನ್ನ ಗೆಟ್ ಅಪ್ ಗಳು ಅಭಿಮಾನಿಗಳಲ್ಲಿ ರೋಮಾಂಚನ ಉಂಟು ಮಾಡಿದ್ದರಿಂದ ಈ ಚಿತ್ರದ ಬಗ್ಗೆ ಅತೀವ ಕುತೂಹಲ ಉಂಟಾಗಿತ್ತು.

ಇದೀಗ ಆ ಸಮಯ ಬಂದಿದೆ. ಚಿತ್ರತಂಡ ಸದ್ಯವೇ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡಲಿದೆ.
ಹಾಗಾಗಿ ಶ್ರೀ ಸಿದ್ದೇಶ್ವರ ಎಂಟರ್ಪ್ರೈಸಸ್ ಸಂಸ್ಥೆ ಅದ್ದೂರಿ ವೆಚ್ಚದಲ್ಲಿ ನಿರ್ಮಿಸಿರುವ ಈ ಚಿತ್ರ ಅಭಿಮಾನಿಗಳ ಎಲ್ಲಾ ಆಶಯಗಳನ್ನು ಪೂರೈಸಲಿದೆ ಎಂಬುದು ನಿರ್ದೇಶಕ ಆರ್.ಚಂದ್ರು ಅವರು ನೀಡಿದ ವಿವರ.

ಕಬ್ಜ ಚಿತ್ರದ ಬಗ್ಗೆ ಪ್ರಪಂಚದಾದ್ಯಂತ ಕುತೂಹಲ ಹೆಚ್ಚಾಗಿದೆ. ಏಕೆಂದರೆ ‌ಇದು 80ರ ದಶಕದ ಡಾನ್ ನ ಕಥೆ. ಅಲ್ಲದೇ ಮೊನ್ನೆ ನಡೆದ ಐಎಂಡಿಬಿ 2023ರ ನಿರೀಕ್ಷಿತ ಸಿನಿಮಾಗಳ ಸರ್ವೆ ಪಟ್ಟಿಯಲ್ಲಿ ಕಬ್ಜ ಸಿನಿಮಾ ಸ್ಥಾನ ಪಡೆದಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.

ಕಳೆದ ಮೂರ್ನಾಲ್ಕು ವರ್ಷಗಳಿಂದ ಸಾಲು ಸಾಲು ಯಶಸ್ವಿ ಸಿನಿಮಾಗಳ ಮೂಲಕ ಸ್ಯಾಂಡಲ್ ವುಡ್ ಮತ್ತಷ್ಟು ಎತ್ತರಕ್ಕೆ ಹೋಗಿದೆ. ಕೆಜಿಎಫ್ ಸರಣಿ ಚಿತ್ರಗಳು ‘777 ಚಾರ್ಲಿ’ ಹಾಗೂ ‘ಕಾಂತಾರ’ ಯಶಸ್ಸಿನ ಬಳಿಕ ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸಲು ಈ ವರ್ಷ ಕಬ್ಜ ಸಜ್ಜಾಗಿದೆ ಎಂಬುದು ಅವರ ಹರ್ಷಕ್ಕೆ ಕಾರಣವಾಗಿದೆ.

ಕಬ್ಜ ಚಿತ್ರ ಬಿಡುಗಡೆ ಯಾವಾಗ ಎಂಬುದು ಅತ್ಯಂತ ಕುತೂಹಲದ ಪ್ರಶ್ನೆ. ಹಾಗಾಗಿ ಇದೇ ಜನವರಿ 24ರಂದು ಈ ಕುತೂಹಲಕ್ಕೆ ತೆರೆ ಬೀಳಲಿದೆ.

ಅತ್ಯಂತ ನವ ನವೀನ ಆಶಯಗಳ ಜೊತೆಗೆ ಜಾಗತಿಕ ಸಿನಿಮಾ ಪ್ರಿಯರ ಗಮನ ಸೆಳೆಯುವಲ್ಲಿ ಇದು ಯಶಸ್ವಿ ಕಾಣುತ್ತದೆ ಎಂಬುದು ನಿರ್ದೇಶಕರ ಗಟ್ಟಿಯಾದ ನಂಬಿಕೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *