Snehapriya.com

June 8, 2025

ರಾಗಿಣಿ ಹಾರರ್ ವಾಕ್ರೋ ಹೌಸ್ ಹಿಂದಿ ಚಿತ್ರದಲ್ಲಿ ತುಪ್ಪದ ಬೆಡಗಿ

Social Share :

ತುಪ್ಪದ ಬೆಡಗಿ ರಾಗಿಣಿ ನಟನೆಯಲ್ಲಿ ಅತ್ಯಂತ ಬ್ಯುಜಿಯಾಗಿದ್ದು, ಸದ್ಯ ಬಾಲಿವುಡ್ ಗೆ ಎಂಟ್ರಿ ಕೊಟ್ಟು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಕಳೆದ ವರ್ಷ ಕನ್ನಡ ಚಿತ್ರಗಳಲ್ಲಿ ಬಿಡುವಿಲ್ಲದೆ ನಟಿಸಿದ ರಾಗಿಣಿ ಅದೇ ಓಟದಲ್ಲಿ ಹಿಂದಿ ಚಿತ್ರರಂಗ ಬಾಲಿವುಡ್ ಗೂ ಲಗ್ಗೆ ಇಟ್ಟಿದ್ದಾರೆ.

ವಾಕ್ರೋಹೌಸ್ ಎಂಬ ಹಾರರ್ ಚಿತ್ರದಲ್ಲಿ ರಾಗಿಣಿ ನಟಿಸುತ್ತಿದ್ದು, ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಲಂಡನ್ ನಲ್ಲಿ ಚಿತ್ರೀಕರಣ ಮುಗಿಸಿ ಬಂದಿರುವ ತುಪ್ಪದ ಬೆಡಗಿ ನೇರ ಸ್ಯಾಂಡಲ್ ವುಡ್ ಸುದ್ದಿ ಮಾಧ್ಯಮಗಳ ಮುಂದೆ ಬಂದಿದ್ದರು.

ಕನ್ನಡ ಚಿತ್ರರಂಗದಲ್ಲಿ ಸುದೀರ್ಘ ಪಯಣದಲ್ಲಿ ಸಾಕಷ್ಟು ಚಿತ್ರಗಳನ್ನು ಮಾಡಿರುವೆ. ಅದು ನನಗೆ ಹೆಮ್ಮೆಯ ವಿಷಯ. ಈಗ ಬಾಲಿವುಡ್ ಅವಕಾಶ ನೀಡಿರುವುದು ಅತೀವ ಖುಷಿ ತಂದಿದೆ ಎಂದು ಸಂಭ್ರಮ ಹಂಚಿಕೊಂಡರು.

‘ವಾಕ್ರೋಹೌಸ್’ ಒಂದು ಹಾರರ್, ಥ್ರಿಲ್ಲರ್ ಚಿತ್ರವಾಗಿದ್ದು, ಯಶಸ್ವಿ ಸಿನಿಮಾಗಳ ನಿರ್ದೇಶಕ ಆಯುರ್ ಶರ್ಮಾ ನಿರ್ದೇಶಕರು. ಇದರಲ್ಲಿ ಲಂಡನ್ ಮೂಲದ ಬರಹಗಾರ್ತಿ ಪಾತ್ರ ಮಾಡುತ್ತಿದ್ದು, ಮೊದಲ ಹಂತದ ಶೂಟಿಂಗ್ ಲಂಡನ್ ನಲ್ಲಿ ಮುಗಿದಿದೆ. ಚಿತ್ರದಲ್ಲಿ ಪರಂವ್ಹಾ ಸೇರಿದಂತೆ ಸಾಕಷ್ಟು ಒಳ್ಳೆ ಕಲಾವಿದರಿದ್ದಾರೆ ಎಂಬ ವಿವರ ಕೊಟ್ಟರು.

ಈ ಹಿಂದಿ ಸಿನಿಮಾ ಜೊತೆಗೆ ಮಲಯಾಳಂನಲ್ಲಿ ಒಂದು, ತಮಿಳು ಮೂರು ಹಾಗೂ ತೆಲುಗು ಚಿತ್ರಗಳಲ್ಲಿ ಅಭಿನಯಿಸುವ ಅವಕಾಶವೂ ಸಿಕ್ಕಿದೆ ಎಂದು ಹೇಳುತ್ತಾ ಹೋದರು ತುಪ್ಪದ ಬೆಡಗಿ ರಾಗಿಣಿ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *