Snehapriya.com

June 8, 2025

ಸ್ಪೂಕಿ ಕಾಲೇಜು ಚಿತ್ರವಿಮರ್ಶೆ

Social Share :


ರೇಟಿಂಗ್ : 3.5/5

ನಿರ್ಮಾಣ : ಎಚ್.ಕೆ.ಪ್ರಕಾಶ್

ನಿರ್ದೇಶನ : ಭರತ್ ಜಿ

ಕಾಲೇಜು ಭೂತ ತುಂಬಾ ಶಾಂತ

ಕತ್ತಲು ಬೆಳಕಿನ ನಡುವೆ ಸಾಕ್ಷಾತ್ಕಾರವಾಗುವ ಭೂತದ ಅಸ್ತಿತ್ವ ಭಯವೇನನ್ನು ಹು
ಟ್ಟಿಸುವುದಿಲ್ಲ; ಆದರೆ ಬದುಕಿನ ನಿಗೂಢ ಏನು ಎಂಬುದರ ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ..

ಒಂದು ಕಾಲೇಜು. ಅಲ್ಲಿ ಎಂದಿನಂತೆ ತರಲೆ ಯುವ ಸಮೂಹ. ಉಪನ್ಯಾಸಕರು ಮತ್ತು ಪ್ರಾಂಶುಪಾಲರು.. ಇವರೆಲ್ಲರ ಚಿತ್ತ ಚಾಂಚಲ್ಯಕ್ಕೆ ಕಾರಣವಾಗುವುದು ಭೂತ ಚೇಷ್ಟೆ.

ಆಗ ನಿರ್ಮಾಣವಾಗುವುದು ಸ್ಪೂಕಿ ವಾತಾವರಣ. ಅದರಲ್ಲಿ ಭಯಾನಕತೆಯ ರೂಪ ಕಾಣಿಸದಿದ್ದರೂ ನಿಗೂಢ ಸಾವುಗಳು ಸಂಭವಿಸುತ್ತವೆ.. ಇದಕ್ಕೆ ಕಾರಣಗಳನ್ನು ತಿಳಿಯುವ ಹಾದಿಯಲ್ಲಿ ಅನೇಕ ವಾಸ್ತವ ಸಂಗತಿಗಳು ಬಿಚ್ಚಿ ಕೊಳ್ಳುತ್ತವೆ..

ಮನಸ್ಸುಗಳನ್ನು ವಿಚಲಿತಗೊಳಿಸುವ ಆ ಸನ್ನಿವೇಶಗಳಲ್ಲಿ ಕ್ಯಾಮೆರಾ ಕಣ್ಣು ಕತ್ತಲು ಬೆಳಕಿನ ನಡುವೆ ನೃತ್ಯ ಮಾಡುತ್ತದೆ. ಆಗ ಪುರಾತನ ಕಾಲ ಮತ್ತು ಮನುಷ್ಯರು ಗೋಚರವಾಗುತ್ತಾರೆ. ಶಾಲೆಯ ಉಪನ್ಯಾಸಕರೊಬ್ಬರು ಹೇಳುವ ಕಥೆ ಕೂಡ ಸ್ಪೂಕಿಯ ನೆರಳಿನಂತೆ..!

ಇದು ರಿಷಿ ಮತ್ತು ಖುಷಿಯ ಕಥೆ ಎಂದು ಅರಿವಾಗುವಷ್ಟರಲ್ಲಿ ಕಾಲೇಜು ವಾತಾವರಣ; ಕಾಲೇಜು ಮೂಲಕ ಶಿಕ್ಷಣ ವ್ಯವಸ್ಥೆ. ಯುವ ಮನಸ್ಸುಗಳ ಮನಸ್ಥಿತಿ ಮತ್ತು ವ್ಯವಸ್ಥೆ ಬೂಟಾಟಿಕೆ ವಿಷಯಗಳು ಅರಿವಾಗುತ್ತವೆ..

ನಿರ್ದೇಶಕ ಜಿ.ಭರತ್ ಭೂತದ ವಿಷಯವನ್ನು ನಿರೂಪಿಸುವಾಗ ಹಳೆಯ ತಂತ್ರ ಮಂತ್ರಗಳನ್ನು ತೋರಿಸುವ ಹಾದಿಯಿಂದ ಹೊರತಾಗಿರುವುದರಿಂದ ಇದು ಬೇರೆ ಏನೋ ಅನಿಸತೊಡಗುತ್ತದೆ. ಅಲ್ಲದೆ ಅವರ ಕತ್ತಲು ಬೆಳಕಿನ ಆಟದಲ್ಲಿ ಕ್ಲಾಸಿಕ್ ಗುಣಗಳು ಕಾಣುತ್ತವೆ. ಹಾಗೆಯೇ ರಂಗ ರೂಪಕಗಳ ಮಾದರಿಯ ನಿರೂಪಣೆ ಗಮನ ಸೆಳೆಯುತ್ತದೆ..

ಕ್ರಿಯಾಶೀಲ ಮನಸ್ಸುಗಳ ಸ್ಪಂದನೆಯನ್ನು ತಾಳ್ಮೆಯಿಂದ ಪರಿಶೀಲಿಸಬೇಕು ಎಂಬುದು ಚಿತ್ರದ ಕೊನೆಯಲ್ಲಿ ಸಿಗುವ ಉತ್ತರ ಏಕೆಂದರೆ ಈ ಚಿತ್ರದ ಮೂಲಕ ಆಧುನಿಕ ಮನಸ್ಥಿತಿಯ ಅವಾಂತರಗಳ ಮೇಲೆ ನಿಗೂಢವಾಗಿಯೇ ಬೆಳಕು ಚೆಲ್ಲಿರುವುದು ಕಾಣುತ್ತದೆ..

ವಿವೇಕ್ ಸಿಂಹ, ಖುಷಿ ರವಿ ಹಾಗೂ ಇತರ ಎಲ್ಲಾ ಪಾತ್ರಗಳು ಚಿತ್ರದ ಆಶಯಗಳಿಗೆ ಪೂರಕವಾಗಿವೆ ಸ್ಪಂದಿಸಿವೆ. ಕೊಂಚ ನಾಟಕೀಯ ಎನಿಸುದರೂ ಪ್ರಾಂಶುಪಾಲರ ಪಾತ್ರದಲ್ಲಿ ಹನುಮಂತೇಗೌಡ ಗಮನ ಸೆಳೆಯುತ್ತಾರೆ..

ಇನ್ನು ‘ವೀರಕೇಸರಿ’ ಚಿತ್ರದ ಹಾಡು ‘ಮೆಲ್ಲುಸಿರೇ ಸವಿಗಾನ’ ಏಕೆ ರೀಮಿಕ್ಸ್ ಮಾಡಿದರೋ ಎಂಬ ಪ್ರಶ್ನೆಯನ್ನು ಹುಟ್ಟಾಕಿದರೂ ಚಿತ್ರದ ಕೊನೆಯವರೆಗೂ ಅದು ಗುನುಗಾಗಿ ಉಳಿಯುತ್ತದೆ..

ಇದು ತಂತ್ರಜ್ಞರ ಸಿನಿಮಾ ಎಂಬುದು ಗಮನಾರ್ಹ. ಮನೋಹರ ಜೋಷಿ ಕ್ಯಾಮೆರಾ ಹಾಗೂ ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ಚಿತ್ರದ ಮುಖ್ಯಾಂಶವಾಗಿ ಗಮನ ಸೆಳೆಯುತ್ತವೆ..

ಆಧುನಿಕತೆಯ ಸವಾಲುಗಳನ್ನು ಸಮರ್ಪಕವಾಗಿ ಎದುರಿಸದೇ ದುಡುಕಿದರೆ, ಆಗುವ ಪರಿಣಾಮಗಳು ಭೀಕರವಾಗಿರುತ್ತವೆ ಎಂಬುದನ್ನು ತಿಳಿಯಲು ಸ್ಪೂಕಿ ಕಾಲೇಜು ನೋಡಬಹುದು..

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *