Snehapriya.com

June 6, 2025

ಪ್ರೇಮಿಗಳ ಮೊದಲ ಮಿಡಿತ

Social Share :

ಲವ್, ಸೆಂಟಿಮೆಂಟ್ ಕಥಾಹಂದರ ಹೊಂದಿರುವ ‘ಮೊದಲಮಿಡಿತ’ ಎಂಬ ಚಿತ್ರ ಈ ವಾರ ತೆರೆಕಾಣುತ್ತಿದೆ.

ಹರಿಚೇತ್ ಕಥೆ, ಚಿತ್ರಕಥೆ ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನದ ಜೊತೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ನಿಮೀಶ್ ಸಾಗರ್ ಹಾಗೂ ರಶ್ಮಿತ ರೋಜ ಮುಖ್ಯ ಪಾತ್ರದಲ್ಲಿದ್ದಾರೆ.

ಕೃಷ್ಣಪ್ಪ ಗುಂಡಸಂದ್ರ, ಗಟ್ಟಹಳ್ಳಿ ವಿಶ್ವನಾಥ್ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ. ದೊಡ್ಡಬಳ್ಳಾಪುರ, ಬೆಂಗಳೂರು, ಚಿಕ್ಕಮಗಳೂರು, ಹಾಸನ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.

ರಾಮಕೃಷ್ಣ, ಸಂಗೀತ, ತಬಲಾನಾಣಿ, ಕಿಲ್ಲರ್ ವೆಂಕಟೆಶ್, ಕೆಂಪೇಗೌಡ, ಅರವಿಂದರಾವ್, ಭಾಸ್ಕರ ಶೆಟ್ಟಿ ಉಳಿದ ತಾರಾಗಣದಲ್ಲಿದ್ದಾರೆ.

ರಮೇಶ್ ಛಾಯಾಗ್ರಹಣ, ರಾಮ್ ಶೆಟ್ಟಿ ಪವನ್ ಸಂಕಲನ, ಕನಕರಾಜ್ ಕಲಾ ನಿರ್ದೇಶನ ಚಿತ್ರಕ್ಕಿದೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *