Snehapriya.com

June 8, 2025

ಹಾರರ್ ಕಾಮಿಡಿ ಯೂಟರ್ನ್-2 ಟ್ರೈಲರ್ ಗೆ ಗಣ್ಯರ ಹಾರೈಕೆ..

Social Share :

ಸಂಗೀತ ನಿರ್ದೇಶಕ ಹಾಗೂ ಗೀತ ರಚನೆಯಲ್ಲಿ ಗುರುತಿಸಿಕೊಂಡಿದ್ದ ಚಂದ್ರು ಓಬಯ್ಯ ನಿರ್ದೇಶಕ ಆಗುವ ಹಂಬಲದಲ್ಲಿ ಮಾಡಿರುವ ಚಿತ್ರವೇ ‘ಯೂ ಟರ್ನ್-2’.

ಹಾರರ್ ಕಾಮಿಡಿ ಜಾನರ್ ನಲ್ಲಿರುವ ಈ ಚಿತ್ರದ ಟ್ರೈಲರ್ ಹಾಗೂ ಹಾಡು ಬಿಡುಗಡೆಗೆ ರಾಜಕೀಯ ಹಾಗೂ ಇತರ ಕ್ಷೇತ್ರದ ಗಣ್ಯರು ಆಗಮಿಸಿ ಶುಭ ಕೋರಿದರು.

ಶಾಸಕ ಸತೀಶ್ ರೆಡ್ಡಿ, ವಿಧಾನ ಪರಿಷತ್ ಮಾಜಿ ಸದಸ್ಯ ಲಕ್ಷ್ಮಿ ನಾರಾಯಣ, ಶ್ರೀನಿವಾಸ ರೆಡ್ಡಿ, ನಟ ಮಯೂರ್, ನಿರ್ಮಾಪಕ ಮೂರ್ತಿ ಸೇರಿದಂತೆ ಅನೇಕ ಗಣ್ಯರು ಚಿತ್ರಕ್ಕೆ ಶುಭ ಕೋರಿದರು.

ಈಗಾಗಲೇ ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಚಂದ್ರು ಓಬಯ್ಯ‌‌ ನಿರ್ದೇಶನದ ಕ್ಯಾಪ್ ಹಾಕುವುದರ ಜೊತೆಗೆ ಮುಖ್ಯ ಪಾತ್ರವನ್ನೂ ನಿರ್ವಹಿಸಿದ್ದಾರೆ.

ತಿಥಿ ಚಿತ್ರದ ಖ್ಯಾತಿಯ ಪೂಜಾ ಹಾಗೂ ಸ್ನೇಹಾ ಭಟ್ ಅವರಿಗೆ ಜೋಡಿಯಾಗಿದ್ದರೆ, ರಘು ರಮಣಕೊಪ್ಪ, ಮಂಜು ಪಾವಗಡ, ಚಿಲ್ಲರ್ ಮಂಜು , ಡಿಂಗ್ರಿ ನಾಗರಾಜ್ ಮೊದಲಾದವರ ತಾರಾ ಬಳಗ ಇದೆ..

ಚಿತ್ರದಲ್ಲಿ ನೆಗೆಟೀವ್ ಶೆಡ್ ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಆನಂದ್ ಸಂಪಂಗಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಎರಡು ಬಗೆಯ ಪಾತ್ರವಿದೆ. ಒಂದು ಸಮಾಜ ಸೇವಕ ಮತ್ತು ವಿಲನ್ ಎರಡೂ ಕಾಣುತ್ತದೆ. ಈ ಚಿತ್ರಕ್ಕೆ ನಾನು ಅನಿವಾರ್ಯ ನಿರ್ಮಾಪಕ ಆದವನು ನಾನು ಎಂದು ಹೇಳುತ್ತಾ ಹೋದರು ಆನಂದ ಸಂಪಂಗಿ.

ಇದು ಹಾರರ್ ಛಾಯೆ ಇರುವ ಚಿತ್ರ. ಪಿಜ್ಜಾ ಹುಡುಗನೊಬ್ಬನ ಅವಾಂತರ ಕಾಣುತ್ತದೆ. ಏನಾದರೂ ಹೊಸತನ್ನು ಮಾಡಬೇಕೆಂಬ ಹಂಬಲದಲ್ಲಿ ಚಿತ್ರ ಮಾಡಲು ಹೋದಾಗ ಸಾಕಷ್ಟು ಅಡೆ ತಡೆಗಳೂ ಎದುರಾದವು. ಆದರೂ ಎದೆಗುಂದದೆ ಚಿತ್ರ ಮುಗಿಸಿದೆವು ಎಂದರು ನಿರ್ದೇಶಕ ಚಂದ್ರು ಓಬಯ್ಯ.

ಚಿತ್ರಕ್ಕೆ ಸಂಗೀತ ಹಾಗೂ ಇತರ ಅನೇಕ ವಿಭಾಗಗಳನ್ನು ಅವರೇ ನಿಭಾಯಿಸಿರುವ ವಿವರಗಳನ್ನು ಕೊಟ್ಟರು.

ಅಂದ ಹಾಗೆ ಇದೇ ವಾರ ಅಂದರೆ ಡಿಸೆಂಬರ್ 16 ರಂದು ಚಿತ್ರವು ಬಿಡುಗಡೆ ಕಾಣುತ್ತಿದೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *