Snehapriya.com

June 6, 2025

ಡಾರ್ಲಿಂಗ್ ಕೃಷ್ಣ ಹೊಸ ಆಹ್ಲಾದ ಮಿ.ಬ್ಯಾಚುಲರ್ ನಗೆ ಹೊನಲು

Social Share :

ಡಾರ್ಲಿಂಗ್ ಕೃಷ್ಣ ಅವರ ಮತ್ತೊಂದು ಚಿತ್ರ ಬಿಡುಗಡೆಗೆ ಸಿದ್ಧವಿದೆ. ಆ ಮೂಲಕ ನಗೆ ಹೊನಲು ಹರಿಸಲು ಸಜ್ಜಾಗಿದೆ..

ಹಾಗೆಂದು ಮಾಹಿತಿಗಳನ್ನು ನೀಡಿತು ಚಿತ್ರತಂಡ. ಇದು ಕೊವಿಡ್ ಗೆ ಪೂರ್ವದಲ್ಲಿ ಮಾಡಿದ ಚಿತ್ರ. ತೆಲುಗಿನಲ್ಲಿ ಹೆಸರಾಂತ ನಿರ್ದೇಶಕರಿಗೆ ಸಹಾಯಕರಾಗಿ ಕೆಲಸ ಮಾಡಿದ್ದ ನಾಯ್ಡು ಬಂಡಾರು ಈ ಚಿತ್ರದ ನಿರ್ದೇಶಕ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್,
ಶಿಲ್ಪಾ ಶ್ರೀನಿವಾಸ್ ಚಿತ್ರದ ಟ್ರೈಲರ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಝೇಕಾರ್ ಮ್ಯೂಜಿಕ್ ನ ಭರತ್ ಜೈನ್, ಛಾಯಾಗ್ರಹಣ ಮತ್ತು ಸಂಕಲನಕಾರ ಶ್ರೀಕ್ರೇಜಿ ಮೈಂಡ್ ಹಾಗೂ ಇತರ ತಂತ್ರಜ್ಞರು ತಮ್ಮ ಅನುಭವಗಳನ್ನು ಹೇಳಿಕೊಂಡರು.

ಮುಖ್ಯ ಪಾತ್ರದಲ್ಲಿರುವ ಡಾರ್ಲಿಂಗ್ ಕೃಷ್ಣ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಆದ ಸೊಗಸಾದ ಅನುಭವಗಳನ್ನು ಹಂಚಿಕೊಂಡರು. ಈ ಚಿತ್ರದಲ್ಲಿ ನಿರ್ದೇಶಕರು ಅತಿ ಹೆಚ್ಚು ಶೂಟ್ ಗಳನ್ನು ಹೊಲಿಸಿಕೊಟ್ಟಿದ್ದರು. ಕೆಲವು ತುಂಡ ಆಗಿದ್ದವು. ಆಮೇಲೆ ನೋಡಿದರೆ, ತುಂಡ ಆಗಿರುವ ಶೂಟ್ ಗಳನ್ನು ನಿರ್ದೇಶಕರೇ ಹಾಕಿಕೊಂಡಿರುತ್ತಿದ್ದರು ಎಂದು ತಮಾಷೆಯ ಪ್ರಸಂಗಗಳನ್ನು ವಿವರಿಸಿದರು..

ಇದು ಮೊದಲೇ ಶುರುವಾದ ಚಿತ್ರ. ಆಗ ಇಬ್ಬರು ಹೀರೋಯಿನ್ ಕಾನ್ಸೆಪ್ಟ್ ಇರಲಿಲ್ಲ.. ಮೇಲಾಗಿ ಮಿಲನಾ ಅವರ ಜೊತೆ ಮದುವೆಯೂ ಆಗಿರಲಿಲ್ಲ ಎಂದು ಹೇಳುತ್ತಾ ಹೋದರು.

ಮಿಲನಾ ನಾಗರಾಜ್ ಹಾಜರಿರಲಿಲ್ಲ. ಮತ್ತೊಬ್ಬ ಮುಖ್ಯ ನಟಿ ನಿಮಿಕಾ ರತ್ನಾಕರ್ ಶೂಟಿಂಗ್ ಸಂದರ್ಭದ ಅನುಭವಗಳನ್ನು ಹಂಚಿಕೊಂಡರು.

ಇದು ಯುವ ಜನರಿಗಾಗಿ ಮಾಡಿದ ಚಿತ್ರ. ಖಂಡಿತಾವಾಗಿ ಯುವ ಸಮೂಹವನ್ನು ಸೆಳೆಯುತ್ತದೆ ಎಂದವರು ನಿರ್ಮಾಪಕ ಶ್ರೀನಿವಾಸ್.

ಅಂದ ಹಾಗೆ ಚಿತ್ರವು ಜನವರಿ 6 ರಂದು ಬಿಡುಗಡೆ ಕಾಣುತ್ತಿದೆ..

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *