Snehapriya.com

April 14, 2025

ಪದವಿ ಪೂರ್ವ ಟ್ರೈಲರ್ ಹದಿ ಹರೆಯದ ಜಗಣ್ಣ..

Social Share :

ಅದೊಂದು ನೆನಪುಗಳ ಹೂರಣ..
ಅಲ್ಲಿ ಸೇರಿದ್ದವರನ್ನು ಹದಿ ಹರೆಯದ ದಿನಗಳಿಗೆ ಕರೆದು ಕೊಂಡು ಹೋದ ಗಳಿಗೆ. ಪಿಯುಸಿ ಓದುವಾಗ ಏನೆಲ್ಲಾ ಮಾಡಿದ್ದೆವು ಎಂದು ಮೆಲುಕು ಹಾಕಿದ ಕ್ಷಣ.

‘ಪದವಿ ಪೂರ್ವ’ ಚಿತ್ರದ ಟ್ರೈಲರ್ ಬಿಡುಗಡೆಯಲ್ಲಿ ಹಳೆಯ ಹದಿ ಹರೆಯದ ನೆನಪುಗಳದೇ ಸಾಮ್ರಾಜ್ಯ..

ಮುಖ್ಯವಾಗಿ ಎಳೆ ವಯಸ್ಸಿನ ತುಂಟತನಗಳನ್ನು ರಂಜನೀಯವಾಗಿ ಬಣ್ಣಿಸಿದ್ದು ನವರಸ ನಾಯಕ ಜಗ್ಗೇಶ್. ಹರೆಯದಲ್ಲಿ ತಾವಾಡಿದ ಎಲ್ಲಾ ಸಾಹಸಗಳನ್ನು ರಸವತ್ತಾಗಿ ಅವರು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದರಿಂದ ಸೇರಿದವರಿಗೆಲ್ಲಾ ನಗೆ ಹಬ್ಬ..

‘ಪದವಿ ಪೂರ್ವ’ ಎಂದರೆ ಅತಿ ಚಿಕ್ಕ ವಯಸ್ಸಿನಲ್ಲಿ ನಡೆಯುವ ಘಟನೆಗಳು. ಇಂತಹ ಪ್ರಯತ್ನ ಕೂಡ ವಿರಳವಾಗಿರುತ್ತದೆ.. ಮುಖ್ಯವಾಗಿ ನಿರ್ದೇಶಕ ಹರಿ ಪ್ರಸಾದ್ ಜಯಣ್ಣ ದೊಡ್ಡ ಮೊತ್ತದ ಕೆಲಸ ಬಿಟ್ಟು ಚಿತ್ರರಂಗಕ್ಕೆ ಬಂದಿದ್ದಾರೆ. ಅವರ ಶ್ರಮಕ್ಕೆ ಪ್ರತಿಫಲ ಸಿಗುವಂತಾಗಬೇಕು ಆಗಲಿ ಎಂದು ಹಾರೈಸಿದರು ಜಗ್ಗೇಶ್.

ಹರಿ ಪ್ರಸಾಸ್ ಜಯಣ್ಣ ಯೋಗರಾಜ್ ಭಟ್ ಗರಡಿಯಲ್ಲಿ ಪಳಗಿದವರು; ವಾಸ್ತು ಪ್ರಕಾರ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿದ್ದಾಗಲೇ ಅವರ ಪ್ರತಿಭೆಯ ಪರಿಚಯವಾಗಿದೆ ಎಂದರು.

ಚಿತ್ರಕ್ಕೆ ಎಲ್ಲಾ ರೀತಿಯಲ್ಲಿ ಬೆಂಬಲ ನೀಡಿ ಜೊತೆ ಜೊತೆಗೆ ಸಾಗಿದ ಅನುಭವಗಳನ್ನು ಹೇಳಿಕೊಂಡರು ಯೋಗ್ ರಾಜ್ ಭಟ್. ಅದೇ ರೀತಿ ಜಗ್ಗಣ್ಣ ಅವರ ಸಹಕಾರವನ್ನು ನೆನೆದರು.

ಗುರುಗಳು ಯೋಗ್ ರಾಜ್ ಭಟ್ ಪ್ರತಿ ಹೆಜ್ಜೆಯಲ್ಲಿ ಸಹಕಾರ ನೀಡಿದ್ದಾರೆ ಎಂಬುದನ್ನು ನೆನೆದವರು ನಿರ್ದೇಶಕ ಹರಿಪ್ರಸಾದ್ ಜಯಣ್ಣ. ಇದು ಎಳೆ ವಯಸ್ಸಿನ ಹುಡುಗರ ಕಥೆ. ಚಿತ್ರವು ಉತ್ತಮವಾಗಿ ಮೂಡಿ ಬಂದಿದೆ ಎಂದರು.

ಮುಖ್ಯ ಪಾತ್ರದಲ್ಲಿ ನಟಿಸಿರುವ ಪೃಥ್ವಿ ಶ್ಯಾಮನೂರು ಅವರ ತಂದೆ ರವಿ ಶ್ಯಾಮನೂರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ವೃತ್ತಿಯಲ್ಲಿ ಅಧ್ಯಾಪಕರಾಗಿರುವ ಅವರಿಗೆ ಮೊದಲಿನಿಂದ ಸಿನಿಮಾ ರಂಗದಲ್ಲಿ ಆಸಕ್ತಿ ಇತ್ತು. ಮೇಲಾಗಿ ಮಗನ ಸಿನಿಮಾ ಎಂಬ ಕಾರಣದಿಂದ ನಿರ್ಮಾಪಕರಾಗಲು ಮನಸ್ಸು ಮಾಡಿಕೊಂಡಿದ್ದಾಗಿ ಹೇಳಿಕೊಂಡರು ರವಿ ಶ್ಯಾಮನೂರು.

ಮುಖ್ಯ ಪಾತ್ರದಲ್ಲಿ ನಟಿಸಿರುವ ಪೃಥ್ವಿ, ಅಂಜಲಿ ಹಾಗೂ ಯಶ ಶಿವಕುಮಾರ್, ರಾಮ ರಾಮ ರೇ ಖ್ಯಾತಿಯ ನಟರಾಜ್ ಛಾಯಾಗ್ರಾಹಕ ಸಂತೋಷ್ ಕುಮಾರ್ ಪಾತಾಜೆ ತಮ್ಮ ಅನುಭವಗಳನ್ನು ಹೇಳಿಕೊಂಡರು.

ಅಂದ ಹಾಗೆ ಈ ತಿಂಗಳ ಅಂತ್ಯದಲ್ಲಿ ಅಂದರೆ ಡಿಸೆಂಬರ್‌ 30 ರಂದು ಚಿತ್ರವು ತೆರೆ ಕಾಣಲು ಸಜ್ಜಾಗಿದೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *