ಟೀಸರ್ ಬಿಡುಗಡೆಯಲ್ಲೇ ಕೋಟಿ ಕೋಟಿ ವೀಕ್ಷಕರನ್ನು ಪಡೆದು ಸಾಧನೆ ಮಾಡಿದ ಆರ್.ಚಂದ್ರು ನಿರ್ದೇಶನದ ‘ಕಬ್ಜ’ ಚಿತ್ರದ ಹಿಂದಿ ಹಕ್ಕುಗಳ ವಿಷಯದಲ್ಲಿ ಹೊಸ ಸಾಧನೆ ಮಾಡಿದೆ..
ಚಿತ್ರದ ಹಿಂದಿ ಅವತರಣಿಕೆ ಹಕ್ಕುಗಳು ಪ್ರತಿಷ್ಠಿತ ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ಪಡೆದುಕೊಂಡಿದ್ದು, ಇದು ಚಿತ್ರದ ಮೊದಲ ಹೆಜ್ಜೆಯ ಮೈಲಿಗಲ್ಲಾಗಿದೆ..
ರಿಯಲ್ ಸ್ಟಾರ್ ಉಪೇಂದ್ರ ಮುಖ್ಯ ಪಾತ್ರದಲ್ಲಿರುವ ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಿಜ ಜೀವನದ ವಿವರಗಳಿವೆ. ಕಿಚ್ಚ ಸುದೀಪ್ ಪಾತ್ರದ ಬಗ್ಗೆ ಕುತೂಹಲವಿದೆ.
ಹಾಗಾಗಿ ಬಾಲಿವುಡ್ ನ ಪ್ರತಿಷ್ಠಿತ ನಿರ್ಮಾಣ ಮತ್ತು ವಿತರಣಾ ಸಂಸ್ಥೆ ಆನಂದ್ ಮೋಷನ್ ಪಿಕ್ಚರ್ಸ್ ಹಕ್ಕುಗಳನ್ನು ಪಡೆದು ಮೋಷನ್ ಪಿಕ್ಚರ್ ಬಿಡುಗಡೆ ಮಾಡಿದೆ..
ಶ್ರೀ ಸಿದ್ಧೇಶ್ವರ ಎಂಟರ್ಪ್ರೈಸಸ್ ಲಾಂಛನದಲ್ಲಿ ಆರ್. ಚಂದ್ರು ನಿರ್ಮಿಸಿ, ನಿರ್ದೇಶಿಸಿರುವ ಈ ಚಿತ್ರ ಮುಂದಿನ ವರ್ಷ ಬಿಡುಗಡೆ ಕಾಣಲಿದೆ ಎಂಬ ವಿವರವನ್ನು ಚಿತ್ರತಂಡ ನೀಡಿದೆ..
ಇದು ಭೂಗತ ಜಗತ್ತಿನ ಕಥೆ. ಸ್ವಾತಂತ್ರ್ಯ ಹೋರಾಟಗಾರನ ಮಗ 1960 ರಿಂದ1984 ರ ಅವಧಿಯಲ್ಲಿ
ಭೂಗತ ಜಗತ್ತನ್ನು ಆಳುತ್ತಾ ಏನೆಲ್ಲಾ ಮಾಡಿದ ಎಂಬುದರ ಆಧಾರದಲ್ಲಿ ಕಥೆ ನಿರ್ಮಾಣವಾಗಿದೆ ಎಂಬ ವಿವರ ಕೂಡ ಸಿಕ್ಕಿದೆ.
ಪ್ರೇಕ್ಷಕರ ಮನರಂಜಿಸುವುದೇ ನಮ್ಮ ಪ್ರಮುಖ ಉದ್ದೇಶ ಮತ್ತು ಕಬ್ಜ ಅಂತಹ ಒಂದು ಮನರಂಜನೆ ಯಾಗಲಿದೆ ಎಂಬುದು ಚಿತ್ರದ ಹಕ್ಕುಗಳನ್ನು ಪಡೆದಿರುವ ಆನಂದ್ ಪಂಡಿತ್ ಅವರ ನಂಬಿಕೆಯ ಮಾತು.
ಬಾಲಿವುಡ್‌ನ ಹೆಸರಾಂತ ನಿರ್ಮಾಪಕ ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ಬಿಡುಗಡೆ ಮಾಡುತ್ತಿರುವುದು ಅತಿಯಾದ ಖುಷಿ ನೀಡಿದೆ ಎಂಬುದು ಉಪೇಂದ್ರ ಅವರ ಪ್ರತಿಕ್ರಿಯೆ.
ಈ ಸಂಬಂಧ ಕಿಚ್ಚ ಸುದೀಪ್ ಕೂಡ ಪ್ರತಿಕ್ರಿಯೆ ನೀಡಿ, ಪ್ರತಿಷ್ಠಿತ ವಿತರಣಾ ಸಂಸ್ಥೆ ಕಬ್ಜ ಚಿತ್ರದ ಹಕ್ಕುಗಳನ್ನು ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ ಎಂದಿದ್ದಾರೆ.
ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ ಆರ್.ಚಂದ್ರು ಈ ಬೆಳವಣಿಗೆಗೆ ಹರ್ಷ ವ್ಯಕ್ತ ಪಡಿಸಿ, ಇದು ನಮ್ಮ ತಂಡದ ಪರಿಶ್ರಮಕ್ಕೆ ಸಿಕ್ಕ ಫಲ ಎಂಬ ಪ್ರತಿಕ್ರಿಯೆ ನೀಡಿದ್ದಾರೆ.
ಅತೀವ ಕುತೂಹಲ ಹುಟ್ಟು ಹಾಕಿರುವ ‘ಕಬ್ಜ’ ಮಾರಾಟದ ದಾರಿಯಲ್ಲಿ ಹೊಸ ದಾಖಲೆಗಳನ್ನು ಮಾಡುವ ಹಾದಿಯಲ್ಲಿ ಹೊಸ ಹೆಜ್ಜೆಗಳನ್ನೇ ಇಟ್ಟಿದೆ..