ಇದೇ ವಾರ ವಿಶ್ವಾದ್ಯಂತ ಬಿಡುಗಡೆ ಕಾಣುತ್ತಿರುವ ಪ್ಯಾನ್ ಇಂಡಿಯಾ ಚಿತ್ರ ‘ಬನಾರಸ್’ ಚಿತ್ರತಂಡ ಪ್ರಚಾರದ ಸಲುವಾಗಿ ಬೆಂಗಳೂರಿನಿಂದ ಮೈಸೂರಿನವರೆಗೆ ಯಾತ್ರೆ ಕೈಗೊಂಡು ಯಶಸ್ವಿಯಾಗಿದೆ..
ಬನಾರಸ್ ಮುಖ್ಯ ಪಾತ್ರದಲ್ಲಿರುವ ಝೈದ್ ಖಾನ್ ಹಾಗೂ ಸೋನಾಲ್ ಮಂಥೇರ ಮತ್ತು ಚಿತ್ರತಂಡದ ಸದಸ್ಯರು ಈ ಅದ್ದೂರಿ ಪ್ರಚಾರ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ನವೆಂಬರ್ 4 ರಂದು ಬನಾರಸ್ ಚಿತ್ರವು ಬಿಡುಗಡೆ ಕಾಣುತ್ತಿದ್ದು, ಈ ಚಿತ್ರದ ನೆಲೆಯನ್ನು ಜನರಿಗೆ ತಿಳಿಸುವ ಸಲುವಾಗಿ ತಂಡ ಈ ಯಾತ್ರೆ ಕೈಗೊಂಡಿತ್ತು.
ಅಕ್ಟೋಬರ್ 30ರ ಬೆಳಿಗ್ಗೆ ಭಾನುವಾರ ಬೆಂಗಳೂರಿನ ಟೌನ್ ಹಾಲ್‌ನಿಂದ ಹೊರಟ ಈ ಯಾತ್ರೆ
ಮೈಸೂರ್ ರಸ್ತೆಯ ಕಡೆಗೆ ಅಲ್ಲಿ ಗಾಳಿ ಆಂಜನೇಯ ದೇವಸ್ಥಾನಕ್ಕೆ ತೆರಳಿ ತಂಡ ಪೂಜೆ ಸಲ್ಲಿಸಿದೆ.
ಆನಂತರ ಯಾತ್ರೆ ಮುಂದುವರೆದು ರಾಜರಾಜೇಶ್ವರಿನಗರ, ಕೆಂಗೇರಿ, ಅಂಚೆಪುರ, ಕಂಬಿಪಾಳ್ಯ ಮಾರ್ಗದಲ್ಲಿ ಸಾಗಿ ಬಿಡದಿ ಅಲ್ಲಿಂದ ರಾಮನಗರ ತಲುಪಿದೆ. ಬಳಿಕ ಅಲ್ಲಿ ತಂಡವು ರೋಡ್ ಶೋ ನಡೆಸಿತು. ನಂತರ ರಾಮನಗರ ಚನ್ನಪಟ್ಟಣ ನಡುವೆ ಇರುವ ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನ ತಲುಪಿದ ಚಿತ್ರತಂಡ ಅಲ್ಲಿ ಪೂಜೆ ಸಲ್ಲಿಸಿತು.
ಬನಾರಸ್ ಯಾತ್ರೆ ಚನ್ನಪಟ್ಟಣ ತಲುಪಿದಾಗ ಅಲ್ಲಿ ಅಪಾರ ಅಭಿಗಳ ನಡುವೆ ರೋಡ್ ಶೋ ನಡೆಸಿ ದೇವಾಲಯ ಹಾಗೂ ದರ್ಗಾಗಳಿಗೆ ಚಿತ್ರತಂಡ ಭೇಟಿ ನೀಡಿತು.
ಹೀಗೆ ಸಾಗಿದ ಬನಾರಸ್ ಯಾತ್ರೆ ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ ತಲುಪಿದಾಗ ಅಭಿಮಾನಿ ಬಳಗ ಸ್ವಾಗತಿಸಿದೆ. ಮೈಸೂರಿನಲ್ಲಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಪ್ರಚಾರ ಯಾತ್ರೆ ಕೈಗೊಂಡಿತ್ತು ಚಿತ್ರತಂಡ.