Snehapriya.com

June 8, 2025

ಜೋಗಿ ಪ್ರೇಮ್ ಧ್ರುವ ಸರ್ಜಾ ಪ್ಯಾನ್ ಇಂಡಿಯಾ ಹೊಸ ಸಿನಿಮಾ

Social Share :

ಇದು ಪಕ್ಕಾ ಮಾಸ್ ಸಿನಿಮಾ.. ಖಂಡಿತಾ ರೌಡಿಸಂ ಕಥೆ. ಅಖಿಲ ಭಾರತ ಮಟ್ಟದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಹೆಸರು ‘ಕೆಡಿ’.

ಕನ್ನಡದ ಹೆಸರಾಂತ ನಿರ್ದೇಶಕ ಜೋಗಿ ಪ್ರೇಮ್ ಹಾಗೂ ಡೈಲಾಗ್ ವೀರ ಧ್ರುವ ಸರ್ಜಾ ಒಟ್ಟಾಗಿ ಮಾಡುತ್ತಿರುವ ಚಿತ್ರ. ಪ್ರೇಮ್ ಗೆ ಎಂದಿನಂತೆ ಅರ್ಜುನ್ ಜನ್ಯ ಸಂಗೀತ ನಿರ್ದೇಶಕ.

ಅಂದ ಹಾಗೆ ಇದು ಜೋಗಿ ಪ್ರೇಮ್ ನಿರ್ದೇಶನದ ಒಂಬತ್ತನೇ ಚಿತ್ರ. ಅದು ಅವರ ಲಕ್ಕಿ ನಂಬರ್. ಹಾಗೆಯೇ ಧ್ರುವ ಸರ್ಜಾ ಅವರ ಆರನೇ ಚಿತ್ರ. ಅದೂ ಕೂಡ ಅವರ ಲಕ್ಕಿ ನಂಬರ್. ಹೀಗೆ ಲಕ್ಕಿ ನಂಬರ್ ಸೇರಿ ಆದ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ನಿರ್ಮಿಸುತ್ತಿದೆ.

ಕೆ ಡಿ ಅಂದರೆ ಬೈಗುಳ ಪದ. ಸಿನಿಮಾ ವಿಷಯ ಕೂಡ ರೌಡಿಸಂ
ಈ ಮೂಲಕ ಪ್ರೇಮ್ ಏನು ಕಮಾಲ್ ಮಾಡಲು ಹೊರಟಿದ್ದಾರೆ ಎಂಬುದನ್ನು ತಿಳಿಯಲು ಹಲವು ತಿಂಗಳು ಕಾಯಬೇಕು.

ಬೆಂಗಳೂರಿನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಚಿತ್ರದ ಪೋಸ್ಟರ್ ಹಾಗೂ ಟೀಸರ್ ಬಿಡುಗಡೆ ಮಾಡಲಾಗಿದೆ. ಬಾಲಿವುಡ್ ನಟ ಕೆಜಿಎಫ್2ನ ಅಧೀರ ಖ್ಯಾತಿಯ ಸಂಜಯ್ ದತ್ ಮುಖ್ಯ ಅತಿಥಿ ಮತ್ತು ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ಇದೊಂದು ನಿಜ ಜೀವನ ಆಧರಿಸಿ ಮಾಡುತ್ತಿರುವ ಸಿನಿಮಾ. ಬೆಂಗಳೂರಿನಲ್ಲಿ ನಡೆಯುವ 70ರ ದಶಕದ ಕಥೆಯನ್ನು ಹೊಂದಿದೆ. ಕೆಲವು ಘಟನೆಗಳ ಸ್ಫೂರ್ತಿಯೇ ಈ ಕಥೆ ಎಂಬ ಉತ್ತರ ಕೊಟ್ಟರು ಪ್ರೇಮ್.

ಮಚ್ಚು ಹಿಡಿದು ಪೋಸ್ಟರ್ ನಲ್ಲಿ ಕಾಣಿಸಿಕೊಂಡಿರುವ ನಟ ಧ್ರುವ ಸರ್ಜಾ, ಪಾತ್ರಕ್ಕಾಗಿ ತೂಕ ಇಳಿಕೆ ಮಾಡಿಕೊಂಡು ಬಹಳವೇ ತಯಾರಿ ಮಾಡಿಕೊಂಡಿದ್ದಾರೆ. ಮಾಸ್ ಆಕ್ಷನ್ ಥ್ರಿಲ್ಲರ್ ಕಥೆಯ ಈ ಚಿತ್ರದಲ್ಲಿ ಧ್ರುವ ಸರ್ಜಾ ಕಾಳಿದಾಸ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿಗಳು ಬಂದವು.

‘ಕೆ ಡಿ’ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ತಮಿಳು ಟೈಟಲ್ ಟೀಸರ್‌ಗೆ ವಿಜಯ್‌ ಸೇತುಪತಿ ಧ್ವನಿ ನೀಡಿದ್ದಾರೆ. ಮಲಯಾಳಂ ಟೈಟಲ್ ಟೀಸರ್‌ಗೆ ಮೋಹನ್‌ಲಾಲ್‌ ಹಾಗೂ ಹಿಂದಿ ಟೈಟಲ್ ಟೀಸರ್‌ಗೆ ಸಂಜಯ್‌ ದತ್‌ ಅವರು ಧ್ವನಿ ನೀಡಿದ್ದಾರೆ. ವಿಕ್ರಾಂತ್ ರೋಣ ಖ್ಯಾತಿಯ ವಿಲಿಯಂ ಡೇವಿಡ್‌ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *