Snehapriya.com

June 8, 2025

ಗಂಧದ ಗುಡಿ ಟ್ರೈಲರ್ ಕುತೂಹಲ

Social Share :

ಪವರ್ ಸ್ಟಾರ್, ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ ‘ಗಂಧದ ಗುಡಿ’ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಚಿತ್ರದ ಟ್ರೈಲರ್ ಇನ್ನೇನು ಬಿಡುಗಡೆ ಕಾಣುತ್ತಿದೆ.

ಅಪ್ಪು ಅವರು ಕಣ್ಮರೆಯಾಗಿ ಒಂದು ವರ್ಷ ಆಗುತ್ತಿರುವಾಗ ಅವರ ಪುಣ್ಯ ಸ್ಮರಣೆಯ ಒಂದು ದಿನ ಮುಂಚೆ ಅಂದರೆ ಅಕ್ಟೋಬರ್‌ 28ರಂದು ‘ಗಂಧದ ಗುಡಿ’ ಚಿತ್ರಮಂದಿರಗಳಲ್ಲಿ ಬಿಡುಗಡೆ ಕಾಣುತ್ತಿದೆ.

ವನ್ಯಜೀವಿ ಛಾಯಾಗ್ರಾಹಕ ಅಮೋಘ ವರ್ಷ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ನಿಜ ಜೀವನದ ಅಪ್ಪುವಾಗಿ ಪುನೀತ್ ರಾಜ್‍ಕುಮಾರ್ ಕಾಣಿಸಿಕೊಂಡಿದ್ದಾರೆ.

‘ಅವರು ಅವರಾಗಿಯೇ ಕಾಣಿಸಿಕೊಂಡ ಮತ್ತು ಕರ್ನಾಟಕದ ಅಪೂರ್ವ ಸ್ಥಳಗಳಲ್ಲಿ ಸಂಚರಿಸುವ ಚಿತ್ರವು ಅವರ ಪುಣ್ಯಸ್ಮರಣೆ ಸಂದರ್ಭದಲ್ಲಿ ಬಿಡುಗಡೆಗೆ ಸಜ್ಜಾಗಿದೆ’ ಎಂದು ಅಶ್ವಿನಿ ಪುನೀತ್ ರಾಜ್‍ಕುಮಾರ್ ಟ್ವೀಟ್ ಮಾಡಿ ತಿಳಿಸಿದ್ದಾರೆ.

ಅಂದ ಹಾಗೆ ಅಕ್ಟೋಬರ್ 9 ರ ಭಾನುವಾರ ಅಪ್ಪು ಗಂಧದ ಗುಡಿ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ನಡೆಯಲಿದ್ದು, ಅಶ್ವಿನಿ ಪುನೀತ್ ರಾಜ್‍ಕುಮಾರ್ ಅದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *