ಈಗಾಗಲೇ ಪ್ಯಾನ್ ಇಂಡಿಯಾ ಮಾದರಿಯನ್ನು ಅನುಸರಿಸಿ ಯಶಸ್ವಿಯಾಗಿರುವ ‘ಬನಾರಸ್’ ಚಿತ್ರಕ್ಕೆ ವಿಶಾಲವಾದ ವ್ಯಾಪಾರದ ನೆಲೆಗಳು ಗಟ್ಟಿಯಾಗುತ್ತಿವೆ.
ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಕೇರಳ ಮೂಲದ ದೊಡ್ಡ ಸಂಸ್ಥೆಯೊಂದು ವಿತರಣಾ ಹಕ್ಕುಗಳನ್ನು ಪಡೆದುಕೊಂಡಿದೆ ಎಂಬ ವಿವರವನ್ನು ಚಿತ್ರತಂಡ ನೀಡಿದೆ.
ಕೇರಳದ ಪ್ರತಿಷ್ಠಿತ ಸಂಸ್ಥೆಯಾಗಿರುವ ಮುಲಕುಪ್ಪಡಮ್, ಝೈಹಿದ್ ಖಾನ್ ಮುಖ್ಯ ಪಾತ್ರದಲ್ಲಿರುವ ಹಾಗೂ ಜಯತೀರ್ಥ ನಿರ್ದೇಶನದ ಬನಾರಸ್ ವಿತರಣಾ ಹಕ್ಕುಗಳನ್ನು ಪಡೆದು ಕೊಂಡಿರುವುದು ಚಿತ್ರಕ್ಕೆ ಹೆಮ್ಮೆಯ ಗರಿಯಾಗಿದೆ.
ಚಿತ್ರದ ಬಿಡುಗಡೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಪ್ರಚಾರದ ಅಬ್ಬರ ಹೆಚ್ಚಿಸಿಕೊಂಡಿರುವ ‘ಬನಾರಸ್’ ಗೆ ವ್ಯಾಪಾರ ವಿಸ್ತಾರವಾದ ಬಾಗಿಲುಗಳು ತೆರೆದುಕೊಂಡಿವೆ ಎಂಬುದು ಚಿತ್ರ ತಂಡಕ್ಕೆ ಹೆಮ್ಮೆಯ ವಿಷಯವಾಗಿದೆ.
ಇದೀಗ ಮುಲಕುಪ್ಪಡಮ್ ಸಂಸ್ಥೆ ತಾನು ಬನಾರಸ್ ವಿತರಣಾ ಹಕ್ಕು ಪಡೆದುಕೊಂಡಿರುವುದಾಗಿ ಘೋಷಣೆ ಮಾಡಿಕೊಂಡಿರುವುದು ವಿಶೇಷವಾಗಿದೆ. ರಾಷ್ಟ್ರ ಮಟ್ಟದಲ್ಲಿ ಉದ್ಯಮಿಯಾಗಿ ದೊಡ್ಡ ಹೆಸರು ಮಾಡಿರುವ ಥಾಮಸ್ ಆಂಟೋನಿ, ತೋಮಿಚನ್ ಮುಪಕುಪ್ಪದಮ್ ಎಂಬ ದೊಡ್ಡ ಹೆಸರು ಸಂಪಾದಿಸಿರುವುದು ಮತ್ತು ಅವರು ವಿತರಣೆ ಮಾಡುತ್ತಿರುವುದು ಸಾಮಾನ್ಯ ವಿಷಯವಂತೂ ಅಲ್ಲ..
ಹಾಗೆಯೇ ಹೊಸ ನಟರೊಬ್ಬರ ಚಿತ್ರ ಈ ಪರಿಯ ವ್ಯಾಪಾರ ಮಾಡಿರುವುದು ಸಹ ಇದೇ ಮೊದಲು ಎನ್ನಲಾಗುತ್ತಿದೆ.
ನ್ಯಾಷನಲ್ ಖಾನ್ಸ್ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣವಾಗಿರುವ ಈ ಚಿತ್ರವೀಗ ಭಾರತೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ನಿರ್ಮಾಪಕ ತಿಲಕ್ ರಾಜ್ ಬಲ್ಲಾಳ್, ನಿರ್ದೇಶಕ ಜಯತೀರ್ಥ ಹಾಗೂ ಮುಖ್ಯ ಪಾತ್ರದಲ್ಲಿ ನಟಿಸಿರುವ ಝಹಿದ್ ಖಾನ್, ಸೋನಾಲ್ ಮಂಥೇರೋ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.
ಅಂದ ಹಾಗೆ ನವೆಂಬರ್ ನಾಲ್ಕರಂದು ಬನಾರಸ್ ದೇಶ ವ್ಯಾಪಿ ಬಿಡುಗಡೆ ಕಾಣುತ್ತಿದೆ.