ಇಂದಿನ ಪೀಳಿಗೆಯ ನಟ ಅಕ್ಷಿತ್ ಶಶಿಕುಮಾರ್ ಮುಖ್ಯಪಾತ್ರದಲ್ಲಿರುವ ‘ಓ ಮೈ ಲವ್’ ಬಿಡುಗಡೆಗೆ ಮುನ್ನವೇ ಕುತೂಹಲ ಹುಟ್ಟುಹಾಕಿದೆ.
ಅಕ್ಷಿತ್, ಸುಪ್ರೀಂ ಹೀರೋ ಶಶಿಕುಮಾರ್ ಅವರ ಪುತ್ರ ಎಂಬುದು ಒಂದು ಕಡೆಗಾದರೆ ಚಿತ್ರದ ಒಟ್ಟಾರೆ ಮನರಂಜನೆಯ ವಿಷಯ ಕುತೂಹಲಕ್ಕೆ ಕಾರಣವಾಗಿದೆ. ಏಕೆಂದರೆ ಚಿತ್ರದ ಹಾಡುಗಳು ಮತ್ತು ಟ್ರೈಲರ್ ಈಗಾಗಲೇ ಜನಮನ ಗೆದ್ದಿದೆ.
‘ಬಳ್ಳಾರಿ ದರ್ಬಾರ್’ ಖ್ಯಾತಿಯ ರ್ಸ್ಮೈಲ್ ಶ್ರೀನು ನಿರ್ದೇಶನದ ಚಿತ್ರದಲ್ಲಿ ಅಕ್ಷಿತ್ ಜೊತೆ ಕೀರ್ತಿ ಕಲ್ಕೆರೆ ಮುಖ್ಯ ಪಾತ್ರದಲ್ಲಿದ್ದಾರೆ.
ಇದೇ ಶುಕ್ರವಾರ ಅಂದರೆ ಜುಲೈ 15ಕ್ಕೆ ತೆರೆ ಕಾಣಲಿರುವ ಚಿತ್ರದಲ್ಲಿ ಬಹಳವೇ ವಿಶೇಷಗಳಿವೆ. ಹಾಗಾಗಿ ಇದು ಗೆಲ್ಲುವ ನಂಬಿಕೆ ಇದೆ ಎಂಬುದು ಜಿಸಿಬಿ ಪ್ರೊಡಕ್ಷನ್ ನ ಮೂಲಕ ಚಿತ್ರ ನಿರ್ಮಾಣ ಮಾಡಿರುವ ಜಿ.ರಾಮಾಂಜಿನಿ ನಂಬಿಕೆ.
ಅಲ್ಲದೆ ಬಳ್ಳಾರಿ ಮೂಲದ ರಾಮಾಂಜಿನಿ ಅವರಿಗೆ ಈ ಚಿತ್ರ ಹೆಸರು ತಂದುಕೊಟ್ಟಿದೆ. ಹಾಗೆಯೇ ಅಭಿಮಾನಿಗಳನ್ನು ಹುಟ್ಟುಹಾಕಿದೆ. ಹಾಗಾಗಿ ಈಚೆಗೆ ಬೆಂಗಳೂರಿನ ಕಲಾವಿದರ ಸಂಘದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಎಲ್ಲಾ ಕಲಾವಿದರು, ತಂತ್ರಜ್ಞರನ್ನು ಕರೆದು ಅಭಿನಂದಿಸಲಾಗಿತ್ತು.
ಕಲಾ ಸಾಮ್ರಾಟ್ ಎಸ್.ನಾರಾಯಣ್, ಸುಪ್ರೀಂ ಹೀರೋ ಶಶಿಕುಮಾರ್, ನಿರ್ಮಾಪಕ ಸಿ.ರಾಮಾಂಜಿನಿ ಅವರ ತಂದೆ ಜಿ.ಚನ್ನಬಸಪ್ಪ, ಹಿರಿಯ ನಟಿ ಸುಂದರಶ್ರೀ, ನಟಿ ಸಂಗೀತಾ ಅನಿಲ್, ವಿತರಕ ಕಮರ್, ವಕೀಲರಾದ ಚಂದ್ರ ಮೋಹನ್ ಹಾಗೂ ಬಳ್ಳಾರಿಯಿಂದ ಆಗಮಿಸಿದ್ದ ಗಣ್ಯರು ಮತ್ತು ಅಸಂಖ್ಯಾತ ಅಭಿಮಾನಿಗಳು ಇದರಲ್ಲಿ ಭಾಗವಹಿಸಿದ್ದರು.
ಚಿತ್ರದ ಹಾಡುಗಳು ಮಿಲಿಯನ್ ಗಟ್ಟಲೆ ಜನರನ್ನು ತಲುಪಿವೆ. ಈ ಹಾಡುಗಳ ಗೆಲುವು ಚಿತ್ರದ ಗೆಲುವು ಆಗಲಿದೆ ಎಂಬ ವಿಶ್ವಾಸವನ್ನು ನಿರ್ಮಾಪಕ ರಾಮಾಂಜಿನಿ ಈ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದರು.
‘ಬಳ್ಳಾರಿ ದರ್ಬಾರ್’ ರೀತಿಯ ಆಕ್ಷನ್ ಚಿತ್ರ ಮಾಡಿದ್ದ ಸ್ಮೈಲ್ ಶ್ರೀನು ಇಲ್ಲಿ ಪ್ರೇಮ ಕಾವ್ಯಾ ಮಾಡಿದ್ದಾರೆ. ಪ್ರತಿ ಸನ್ನಿವೇಶ ಕೂಡ ಥ್ರಿಲ್ಲಿಂಗ್ ಆಗಿ ಇರಲಿದೆ ಎಂಬುದನ್ನು ಚಿತ್ರತಂಡ ಹಾಡಿ ಹೊಗಳಿತು.
ಈಗ ನಿರೀಕ್ಷೆಯ ಮಹಾಪೂರವೇ ಹರಿದಿದೆ. ದೇವಗಿಲ್ ಹಾಗೂ ಇತರರು ಇದ್ದಾರೆ ಎಂಬುದೂ ಸಹ ಥ್ರಿಲ್ಲಿಂಗ್ ವಿಷಯವೇ ಆಗಿದೆ.