Snehapriya.com

June 8, 2025

ಶೀತಲ್ ಶೆಟ್ಟಿ ವಿಂಡೋಸೀಟ್‍ ತೆರೆಗೆ

Social Share :

ಬಸ್ಸು, ರೈಲು, ವಿಮಾನ ಯಾವುದೇ ಇರಲಿ ಕಿಟಕಿ ಪಕ್ಕ ಕುಳಿತು ಪ್ರಯಾಣಿಸಬೇಕು ಎಂಬ ಹಂಬಲ ಬಹಳ ಜನರಿಗೆ ಇರುತ್ತದೆ; ಆದರೆ ಇದೇ ವಿಷಯದಲ್ಲಿ ಗೊಂದಲ ಏರ್ಪಟ್ಟರೆ, ಕಷ್ಟಗಳು ಹುಡುಕಿಕೊಂಡು ಬಂದರೆ ಯಾರು ಹೊಣೆ..

ನಿರೂಪಕಿಯಾಗಿ ಹೆಸರು ಮಾಡಿರುವ ಶೀತಲ್ ಶೆಟ್ಟಿ ನಿರ್ದೇಶನ ಮಾಡಿರುವ ಚಿತ್ರ ಇಂತಹ ಕಥೆಯನ್ನೇ ಹೇಳುತ್ತದೆ ಮತ್ತು ಈ ವಾರ ತೆರೆಗೆ ಬರುತ್ತಿದೆ..

ಅದೇ ವಿಂಡೋಸೀಟ್..!

ಶ್ಯಾಲಿನಿ ಜಾಕ್ ಮಂಜು ನಿರ್ಮಾಣದ ಈ ಚಿತ್ರದಲ್ಲಿ ನಿರೂಪ್ ಭಂಡಾರಿ, ಸಂಜನಾ ಆನಂದ್ ಹಾಗೂ ಅಮೃತಾ ಅಯ್ಯಂಗಾರ್ ಮುಖ್ಯ ಪಾತ್ರದಲ್ಲಿದ್ದಾರೆ.

ಈ ಹಿಂದೆ ಕಿರುಚಿತ್ರ ನಿರ್ದೇಶಿಸಿದ್ದ ಶೀತಲ್‍ ಶೆಟ್ಟಿ ಈಗ ಕಥೆ ಹಾಗೂ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ವಿಂಡೋಸೀಟ್ ಎಂಬುದು ಸಸ್ಪೆನ್ಸ್, ಥ್ರಿಲ್ಲರ್ ಕಥೆ ಇರುವ ಚಿತ್ರ. ಈ ಚಿತ್ರದ ಟ್ರೈಲರನ್ನು ಕಿಚ್ಚ ಸುದೀಪ್ ಟ್ವಿಟರ್ ನಲ್ಲಿ ಬಿಡುಗಡೆ ಮಾಡಿ ಶುಭ ಹಾರೈಸಿದ್ದರು.

ತಾಳಗುಪ್ಪದಿಂದ ಸಾಗರದವರೆಗೆ ರೈಲಿನಲ್ಲಿ ಪ್ರಯಾಣಿಸುವ ಯುವಕನ ಪ್ರಯಾಣದಲ್ಲಿ ಚಿಗುರುವ ಪ್ರೀತಿ, ಜೊತೆಗೆ ಕೊಲೆಯ ಸುತ್ತಲಿನ ಕೌತುಕ ಈ ಚಿತ್ರದಲ್ಲಿದೆ. ನಿರೂಪ್ ಭಂಡಾರಿ ತಾಳಗುಪ್ಪದ ರಘು ಎಂಬ ಹಾಡುಗಾರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದಾ ವಿಂಡೋಸೀಟನ್ನೇ ಇಷ್ಟಪಡುವ ಆತನಿಗೆ ಅದೇ ವ್ಯಾಮೋಹವೇ ದೊಡ್ಡ ಸಂಕಷ್ಟಕ್ಕೆ ತಳ್ಳುತ್ತದೆ.

ಅರ್ಜುನ್ ಜನ್ಯ ಸಂಗೀತ ಹಾಗೂ ವಿಘ್ನೇಶ್‍ರಾಜ್ ಛಾಯಾಗ್ರಹಣ ಚಿತ್ರಕ್ಕಿದೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *