Snehapriya.com

June 8, 2025

ಶೀತಲ್ ಶೆಟ್ಟಿ ವಿಂಡೋಸೀಟ್

Social Share :

ನಿರೂಪಕಿಯಾಗಿ ಜನಪ್ರಿಯತೆ ಪಡೆದ ಬಳಿಕ ಕಲಾವಿದೆಯಾಗಿ ಗುರುತಿಸಿಕೊಂಡಿದ್ದ ಪತ್ರಕರ್ತೆ ಶೀತಲ್ ಶೆಟ್ಟಿ ಈಗ ನಿರ್ದೇಶಕಿ. ‘ವಿಂಡೋ ಸೀಟ್’ ಎಂಬುದು ಅವರ ಮೊದಲ ಚಿತ್ರದ ಹೆಸರು.

ಗ್ರಾಮೀಣ ಭಾಗದ ಬಸ್ ಗಳಲ್ಲಿ ಕಿಟಕಿ ಪಕ್ಕಾ ಸೀಟು ಹಿಡಿದು ಪ್ರಯಾಣಿಸುದೇ ಮಜಾ.. ಟ್ರೈನ್ ಹಾಗೂ ವಿಮಾನದಲ್ಲೂ ಅಷ್ಟೇ.. ಆ ವಿಂಡೋ ಸೀಟ್ ನ ಮಜಾ ಏನು ಎಂಬುದರ ಜೊತೆಗೆ ಒಂದು ಮರ್ಡರ್ ಮಿಸ್ಟ್ರಿ ಕಥೆ ಹೇಳಲು ಹೊರಟಿದ್ದಾರೆ ಸೀತಲ್ ಶೆಟ್ಟಿ.

ನಿರ್ದೇಶಕಿಯಾಗಬೇಕು ಎಂಬ ಹಂಬಲ ಬಹಳ ಕಾಲದಿಂದ ಇತ್ತು. ಕಥೆ ಬರೆದು ನಿರ್ಮಾಪಕರಿಗಾಗಿ ಹುಡುಕಾಟ ನಡೆಸಿದಾಗ ಸುದೀಪ್ ಸಹಾಯ ಮಾಡಿದರು. ಜಾಕ್ ಮಂಜು ಬಂಡವಾಳ ಹೂಡಿದರು ಎಂಬ ವಿವರ ಕೊಟ್ಟರು ಶೀತಲ್ ಶೆಟ್ಟಿ.

ಈಚೆಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದ ಆವರಣದಲ್ಲಿ ನಡೆದ ಚಿತ್ರದ ಟ್ರೈಲರ್ ಬಿಡುಗಡೆ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕಿ ಶ್ಯಾಲಿನಿ ಮಂಜುನಾಥ್, ನಿರ್ದೇಶಕಿ ಶೀತಲ್ ಶೆಟ್ಟಿ, ಮುಖ್ಯ ಪಾತ್ರದಲ್ಲಿರುವ ನಿರೂಪ್ ಭಂಡಾರಿ, ಅಮೃತಾ ಅಯ್ಯಂಗಾರ್, ನಟ ಸೂರಜ್ ಹಾಗೂ ಚಿತ್ರತಂಡದ ಇತರ ಸದಸ್ಯರು ಹಾಜರಿದ್ದರು.

ಮಹಿಳೆಯೊಬ್ಬರಿಗೆ ನಿರ್ದೇಶನದ ಅವಕಾಶ ಕೊಡುವ ಆಶಯದಲ್ಲಿ ನಿರ್ಮಾಣವಾದ ಚಿತ್ರ ಇದು ಎಂದರು ನಿರ್ಮಾಪಕಿ ಶ್ಯಾಲಿನಿ ಮಂಜುನಾಥ್.
ಈ ಮುಂಚೆ ‘ಡೆಡ್ಲಿ ಸೋಮ’, ‘ಲೈಫ್ ಇಷ್ಟೇನೇ’ ಮೊದಲಾದ ಚಿತ್ರ ಮಾಡಿದಾಗಲೂ ಹೊಸಬರಿಗೆ ಅವಕಾಶ ಕೊಡಲಾಗಿತ್ತು. ಈಗ ಶೀತಲ್ ಶೆಟ್ಟಿ ನಿರ್ದೇಶನಕ್ಕೆ ಹೊಸಬರು ಅಷ್ಟೇ ಎಂದರು.

ತಾಳಗುಪ್ಪದಿಂದ ಸಾಗರದವರೆಗೆ ರೈಲಿನಲ್ಲಿ ಪ್ರಯಾಣಿಸುವ ವ್ಯಕ್ತಿಯ ಕಥೆ ಈ ಚಿತ್ರದಲ್ಲಿದೆ‌. ಮಲೆನಾಡು ಮತ್ತು ಅಲ್ಲಿನ ಜನರ ಜೀವನ ಶೈಲಿಯನ್ನು ಪರಿಚಯಿಸುವುದರ ಜೊತೆ ಜೊತೆಗೆ ಒಂದು ಕೊಲೆಯ ಸುತ್ತಲಿನ ಕೌತುಕ ಹೇಳ ಹೊರಟಿದೆ ತಂಡ.

ಮುಖ್ಯ ಪಾತ್ರದಲ್ಲಿರುವ ನಿರೂಪ್ ಭಂಡಾರಿ ತಾಳಗುಪ್ಪದ ರಘು ಎಂಬ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದಾರೆ. ರಘು ಒಬ್ಬ ಹಾಡುಗಾರ. ಆತನಿಗೆ ಕಿಟಕಿ ಪಕ್ಕದ ಸೀಟು ಎಂದರೆ ಮಜಾ.. ಇದೇ ಆತನಿಗೆ ದೊಡ್ಡ ಸಂಕಷ್ಟಕ್ಕೆ ತಂದೊಡ್ಡುತ್ತದೆ. ಸಂಜನಾ ಆನಂದ್ ಹಾಗೂ ಅಮೃತಾ ಅಯ್ಯಂಗಾರ್ ವಿಭಿನ್ನ ಬಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅರ್ಜುನ್ ಜನ್ಯ ಸಂಗೀತ, ವಿಘ್ನೇಶ್‍ರಾಜ್ ಛಾಯಾಗ್ರಹಣವಿದೆ ಎಂಬ ವಿವರಗಳು ಬಂದವು.

ಜುಲೈ ಒಂದರಂದು ಬಿಡುಗಡೆ ಘೋಷಿಸಿಕೊಂಡಿರುವ ಚಿತ್ರದ ವಿಶೇಷ ಟ್ರೈಲರ್ ನ್ನು ಕಿಚ್ಚ ಸುದೀಪ್ ಟ್ವಿಟರ್ ನಲ್ಲಿ ಬಿಡುಗಡೆ ಮಾಡಿರುವುದು ವಿಶೇಷವಾಗಿದೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *